ಟೀಚರ್ ಗೇ ʼಐ ಲವ್ ಯೂ” ಎಂದ ನಾಲ್ವರು ವಿದ್ಯಾರ್ಥಿಗಳನ್ನು ಬಂದಿಸಿದ ಪೋಲಿಸರು
ಮಿರತ-ಟೀಚರ್ ಗೇ “ಐ ಲವ್ ಯೂ” ಎಂದ ನಾಲ್ವರು ವಿದ್ಯಾರ್ಥಿಗಳು ಈಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಶಾಲಾ ಆವರಣದಲ್ಲಿ ನಾಲ್ವರು ವಿದ್ಯಾರ್ಥಿಗಳು ಮಹಿಳಾ ಶಿಕ್ಷಕಿಗೆ ಅಸಹ್ಯ ಮಾತುಗಳನ್ನಾಡಿ ಕಿರುಕುಳ ನೀಡಿದುದೇ ಅಲ್ಲದೆ, ವೀಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ ಆತಂಕಕಾರಿ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ.
ಶಿಕ್ಷಕಿಯ ಬಗ್ಗೆ ಅಸಹ್ಯ ಕಾಮೆಂಟ್ ಗಳನ್ನು ಮಾಡಿರುವ ಎರಡು ವೀಡಿಯೊಗಳು ವೈರಲ್ ಆಗಿರುವ ಹಿನ್ನೆಲೆಯಲ್ಲಿ ಶಿಕ್ಷಕಿ ಕಿತಾವುರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ರಾಧ್ನಾ ಇನಾಯತ್ ಪುರ ಗ್ರಾಮದ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ಓರ್ವ ವಿದ್ಯಾರ್ಥಿನಿ ಸೇರಿದಂತೆ 12ನೇ ತರಗತಿಯ ನಾಲ್ವರ ಮೇಲೆ ಆಪಾದನೆ ಕೇಳಿ ಬಂದಿದೆ.
ಹಲವು ಸಮಯದಿಂದ ವಿದ್ಯಾರ್ಥಿಗಳು ಶಿಕ್ಷಕಿಗೆ ಆಕ್ಷೇಪಾರ್ಹ ಕಾಮೆಂಟ್ ಗಳನ್ನು ಮಾಡುತ್ತಿದ್ದರು. ಹಲವು ಬಾರಿ ಎಚ್ಚರಿಕೆ ನೀಡಲಾಗಿದ್ದರೂ ಪ್ರಯೋಜನವಾಗಿರಲಿಲ್ಲ. ಆದರೆ ಇತ್ತೀಚೆಗೆ ಎಲ್ಲೆ ಮೀರಿದ ವಿದ್ಯಾರ್ಥಿಗಳು ಶಿಕ್ಷಕಿಗೆ ಶಾಲಾ ಆವರಣದಲ್ಲೇ “ಐ ಲವ್ ಯೂ” ಅಂದಿದ್ದಲ್ಲದೆ, ಅದನ್ನು ವೀಡಿಯೊ ಮಾಡಿ ವೈರಲ್ ಮಾಡಿದ್ದರು. ಅಲ್ಲದೆ, ತರಗತಿಯೊಳಗೆ ನಡೆದ ಘಟನೆಯ ವೀಡಿಯೊವೊಂದನ್ನೂ ವೈರಲ್ ಮಾಡಿದ್ದರು. ಹೀಗಾಗಿ ಶಿಕ್ಷಕಿ ಪೊಲೀಸ್ ದೂರು ದಾಖಲಿಸಿದ್ದಾರೆ.