42 ವರ್ಷದ ಶಿಕ್ಷಕರೊಬ್ಬರು ತನ್ನ 20 ವರ್ಷದ ವಿದ್ಯಾರ್ಥಿನಿಯ ನಡುವೆ ಲವ್ – ದೇವಸ್ಥಾನದಲ್ಲಿ ಮದುವೆ
ಬಿಹಾರ-ಪ್ರೀತಿಗೆ ಕಣ್ಣಿಲ್ಲ, ಪ್ರೀತಿ ಕುರುಡು ಅಂತಾ ಮಾತಿದೆ. ಅದಕ್ಕೆ ಸಾಕಷ್ಟು ಉದಾಹರಣೆಗಳು ಇವೆ. ಅದಕ್ಕೆ ಮತ್ತೊಂದು ಸೇರ್ಪಡೆ ಬಿಹಾರದ ಈ ಜೋಡಿ. 42 ವರ್ಷದ ಶಿಕ್ಷಕರೊಬ್ಬರು ತನ್ನ 20 ವರ್ಷದ ವಿದ್ಯಾರ್ಥಿನಿಯನ್ನು ಪ್ರೀತಿಸಿ ದೇಗುಲದಲ್ಲಿ ವಿವಾಹವಾಗಿ ಸುದ್ದಿಯಾಗಿದ್ದಾರೆ.
ಬಿಹಾರ ರಾಜ್ಯದ ಸಮಸ್ಟಿಪುರದಲ್ಲಿ ಈ ವಿವಾಹ ನಡೆದಿದೆ. 42 ವರ್ಷದ ಸಂಗೀತಾ ಕುಮಾರ್ ಅದೇ ಊರಿನಲ್ಲಿ ರೊಸ್ದ ಬಜಾರ್ ಎಂಬಲ್ಲಿ ಇಂಗ್ಲಿಷ್ ಕೋಚಿಂಗ್ ಕ್ಲಾಸ್ ನಡೆಸುತ್ತಿದ್ದರು. ಅಲ್ಲಿಗೆ 20 ವರ್ಷದ ವಿದ್ಯಾರ್ಥಿನಿ ಶ್ವೇತಕುಮಾರಿ ಕೋಚಿಂಗ್‌ಗಾಗಿ ಬಂದಿದ್ದು, ಈ ವೇಳೆ ಇಬ್ಬರ ನಡುವೆ ಪ್ರೀತಿ ಚಿಗುರೊಡೆದಿದೆ.
ಬಳಿಕ ಇಬ್ಬರೂ ಮದ್ವೆಯಾಗಲೂ ನಿರ್ಧರಿಸಿದ್ದು, ಸಮೀಪದ ದೇವಸ್ಥಾನಕ್ಕೆ ತೆರಳಿ ಸಪ್ತಪದಿ ತುಳಿದಿದ್ದಾರೆ. ಇಬ್ಬರು ದೇಗುಲವೊಂದರಲ್ಲಿ ಸಪ್ತಪದಿ ತುಳಿಯುತ್ತಿರುವ ಫೋಟೋ ವೈರಲ್ ಆಗಿದೆ.
ಈ ಪ್ರೇಮ ಪ್ರಕರಣವು ಈ ಹಿಂದೆ ಬಿಹಾರದಲ್ಲಿ ಸಮಸ್ಟಿಪುರದಲ್ಲೇ ನಡೆದಿದ್ದ ಮತುಕನಾಥ್ ಹಾಗೂ ಜುಲಿಯಾ ಪ್ರೇಮಕತೆಯನ್ನು ನೆನಪಿಸುವಂತೆ ಮಾಡಿದೆ. ಮತುಕನಾಥ್ ಹಾಗೂ ಜುಲಿಯಾ ಪ್ರೇಮಕತೆಯೂ ಇದೇ ರೀತಿ ಇದ್ದು, ಆದರೆ ಅದು ದುರಂತ ಅಂತ್ಯಗೊಂಡಿತ್ತು.
ಬಿಹಾರದ ನಿವಾಸಿಯಾಗಿದ್ದ ಮತುಕನಾಥ್ ಪಾಟ್ನಾ ವಿಶ್ವ ವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ಅವರು ವಿದ್ಯಾರ್ಥಿಗಳಿಗೆ ಕ್ಯಾಂಪೊಂದನ್ನು ಆಯೋಜಿಸಿದ್ದರು. ಇದಕ್ಕೆ ವಿದ್ಯಾರ್ಥಿನಿಯಾಗಿ ಜ್ಯೂಲಿ ಕೂಡ ಸೇರಿಕೊಂಡಿದ್ದಳು. ಕ್ಯಾಂಪ್‌ನಲ್ಲಿ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿತ್ತು. ಇಬ್ಬರು ಪರಸ್ಪರ ತಮ್ಮ ದೂರವಾಣಿ ಸಂಖ್ಯೆಗಳನ್ನು ಬದಲಿಸಿಕೊಂಡಿದ್ದರು. ಇದಾದ ಬಳಿಕ ಇವರು ಸುದೀರ್ಘ ಸಂಭಾಷಣೆಯನ್ನು ಆರಂಭಿಸಿದ್ದರು. ಆದರೆ, ಅತ್ತ ಮತುಕನಾಥ್‌ಗೆ ಆಗಲೇ ವಿವಾಹವಾಗಿ ಮಕ್ಕಳು ಕೂಡ ಇದ್ದರು. ಆದರೆ, ಆತ ಯುವತಿಯ ಪ್ರೀತಿಗಾಗಿ ತನ್ನ ಮೊದಲ ಮದುವೆ ಪತ್ನಿ ಮಕ್ಕಳನ್ನು ಬಿಟ್ಟು ಬಂದಿದ್ದರು. ಪರಿಣಾಮ ಅವರನ್ನು ಕೆಲಸದಿಂದಲೂ ಅಮಾನತು ಮಾಡಲಾಗಿತ್ತು. ಇಷ್ಟೆಲ್ಲದರ ಮಧ್ಯೆಯೂ ಇವರ ಪ್ರೀತಿ ಮುಂದುವರೆದಿತ್ತು.
ಆದರೆ ನಂತರ ಇವರಿಬ್ಬರ ಫೋಟೋಗಳು ಸ್ಥಳೀಯ ಪತ್ರಿಕೆಯಲ್ಲಿಯೂ ಕಾಣಿಸಿಕೊಂಡಿದ್ದವು. ಮತುಕನಾಥ್ ಮುಂದೆ ಲವ್ ಗುರು ಎಂದೇ ಫೇಮಸ್ ಆದರು. ಈ ಪ್ರಣಯ ಜೋಡಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆದವು. ಆದರೆ, 2017ರಲ್ಲಿ ಈ ಪ್ರೊಫೆಸರ್ ಅನ್ನು ಆಕೆ ತೊರೆದು ಆಧ್ಮಾತ್ಮಿಕ ಗುರುವಾಗಿ ಬದಲಾಗಿದ್ದಳು. ಈ ಹೊಸ ಪ್ರೇಮ ಪ್ರಸಂಗದೊಂದಿಗೆ ಹಳೆಯ ಮತುಕನಾಥ್– ಜ್ಯೂಲಿ ಪ್ರೇಮಕತೆಯನ್ನು ಸ್ಮರಿಸುವಂತೆ ಮಾಡಿದೆ.