ಧರ್ಮ ಮುಚ್ಚಿಟ್ಟು ಹಿಂದೂ ಯುವತಿಯ ವಿವಾಹಕ್ಕೆ ಯತ್ನ: ಮದುವೆಗೆ ಕೆಲವು ದಿನವಿರುವಾಗ ಮುಸ್ಲಿಂ ವರ ಹಸೀನ್ ಸೈಫಿ ಬಂಧನ
ಉತ್ತರಪ್ರದೇಶ: ಮದುವೆಗೆ ಕೆಲವು ದಿನ ಬಾಕಿ ಇರುವಾಗ ಮದುಮಗನೋರ್ವನನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಹುಡುಗಿ ಮನೆಯವರಿಗೆ ತನ್ನ ಗುರುತಿನ ಬಗ್ಗೆ ಸುಳ್ಳು ಹೇಳಿದ ಆರೋಪ ಈತನ ಮೇಲಿದೆ. ತನ್ನ ಹೆಸರು ಮತ ಧರ್ಮದ ಬಗ್ಗೆ ಆತ ಸುಳ್ಳು ಹೇಳಿ ಹೆಣ್ಣಿನ ಮನೆಯವರನ್ನು ಮದುವೆಗೆ ಒಪ್ಪಿಸಿದ್ದು, ಈತನ ವಿರುದ್ಧ ಮತಾಂತರದ ಆರೋಪ ಮಾಡಲಾಗಿದೆ.*
*ಹಸೀನ್ ಸೈಫಿ ಬಂಧಿತ ಆರೋಪಿ, ಈತ ತಾನು ವಿವಾಹವಾಗಬೇಕಿದ್ದ ಹುಡುಗಿಗೆ ಅಶಿಶ್ ಠಾಕೂರ್ ಎಂದು ತನ್ನನ್ನು ತಾನು ಪರಿಚಯಿಸಿಕೊಂಡಿದ್ದ. ಆದರೆ ಮದುವೆಯಾಗುವ ಮುನ್ನವೇ ಯುವತಿ ಮನೆಯವರೆದುರು ಈತನ ಬಣ್ಣ ಬದಲಾಗಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಇವರ ಮದುವೆ ನಿನ್ನೆ ನಡೆಯಬೇಕಿತ್ತು. ಈತನ ವಿರುದ್ಧ ವಿರುದ್ಧ ಈಗ ಪೊಲೀಸರು ಅತ್ಯಾಚಾರ ಒತ್ತಾಯಪೂರ್ವಕ ಮತಾಂತರ, ಹಾಗೂ ಮೋಸ ಮಾಡಿದ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. ಉತ್ತರಾಖಂಡ್ ಮೂಲದ ಮಹಿಳೆಯೊಬ್ಬರು ಈತನ ವಿರುದ್ಧ ದೂರು ನೀಡಿದ್ದಾರೆ.*
*ಮಹಿಳೆ ಗ್ರೇಟರ್ ನೋಯ್ಡಾದ ದದ್ರಿಯಲ್ಲಿ ವಾಸ ಮಾಡುತ್ತಿದ್ದಾಗ ಹಸೀನ್ ಸೈಫಿ ಆಕೆಗೆ ಪರಿಚಯವಾಗಿದ್ದ, ಅಲ್ಲದೇ ಮಹಿಳೆ ಇತ್ತೀಚೆಗೆ ಕೆಲಸ ಕಳೆದುಕೊಂಡಿದ್ದಳು. ಈ ಸಂದರ್ಭದಲ್ಲಿ ಆಕೆಗೆ ಇನ್ನಷ್ಟು ಹತ್ತಿರವಾಗಿದ್ದ ಈತ, ನಂತರ ದದ್ರಿಯಲ್ಲಿರುವ ಎಸ್ಕಾರ್ಟ್ ಕಾಲೋನಿಯ ಪ್ಲಾಟ್ ಒಂದರಲ್ಲಿ ಬಾಡಿಗೆ ಮನೆ ಪಡೆದು ಆಕೆಯೊಂದಿಗೆ ಅಲ್ಲಿ ಹೋಗಿ ಜೀವಿಸಲು ಆರಂಭಿಸಿದ್ದ. ಅಲ್ಲದೇ ಈ ಮಹಿಳೆಯ ಜೊತೆ ದೈಹಿಕ ಸಂಬಂಧವನ್ನು ಆರೋಪಿ ಹೊಂದಿದ್ದ, ಅಲ್ಲದೇ ಆಕೆಯ ಜೊತೆ ಅಶ್ಲೀಲ ವಿಡಿಯೋಗಳನ್ನು ಮಾಡಿದ್ದ ಆರೋಪಿ ನಂತರ ಆಕೆಗೆ ಆ ವಿಡಿಯೋ ತೋರಿಸಿ ಮದುವೆಯಾಗುವಂತೆ ಬ್ಲಾಕ್‌ಮೇಲ್ ಮಾಡಿದ್ದ ಎಂದು ಗ್ರೇಟರ್ ನೋಯ್ಡಾದ ಹೆಚ್ಚುವರಿ ಡೆಪ್ಯುಟಿ ಪೊಲೀಸ್ ಕಮೀಷನರ್ ದಿನೇಶ್ ಕುಮಾರ್ ಹೇಳಿದ್ದಾರೆ.
*ಆದರೆ ಈತ ಹಿಂದೂವಲ್ಲ ಎಂಬುದು ಮಹಿಳೆಗೆ ಇತ್ತೀಚೆಗೆ ವಿವಾಹಕ್ಕೆ ದಿನವಿರುವಾಗ ತಿಳಿದಿದೆ. ಅದೂ ಹಸೀನ್ ಶೈಫಿ ಅವರ ತಂದೆ ಶಕೀಲ್ ಸೈಫಿ ಆತನನ್ನು ಹುಡುಕಿಕೊಂಡು ಇವರಿಬ್ಬರಿದ್ದ ಅಪಾರ್ಟ್‌ಮೆಂಟ್‌ಗೆ ಆಗಮಿಸಿದ ನಂತರ ಮಹಿಳೆಗೆ ಈ ವಿಚಾರ ತಿಳಿದಿದೆ. ಆದರೆ ಈ ವೇಳೆ ಈ ಜೋಡಿ ಮನೆಯಲ್ಲಿ ಇರಲಿಲ್ಲ. ಈ ವೇಳೆ ಸೈಫಿ ತಂದೆ ಶಕೀಲ್, ತನ್ನ ಮಗನ ಬಗ್ಗೆ ನೆರೆಮನೆಯವರಲ್ಲಿ ವಾಸಿಸುತ್ತಿದ್ದವರನ್ನು ಕೇಳಿದ್ದಾರೆ. ಈ ವೇಳೆ ನೆರೆಮನೆಯವರು ಅಲ್ಲಿ ಹಸಿನ್ ಎಂಬುವವರು ವಾಸವಿಲ್ಲ ಅಲ್ಲಿ ವಾಸ ಮಾಡುತ್ತಿದ್ದವರ ಹೆಸರು ಅಶೀಶ್ ಠಾಕೂರ್ ಎಂದು ಹೇಳಿದ್ದಾರೆ. ನಂತರ ನೆರೆಮನೆಯವರು ಈ ಮಹಿಳೆಗೆ ವಿಚಾರ ತಿಳಿಸಿದ್ದು, ನಂತರ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೇ ನಂಬಿಕೆಗೆ ವಂಚನೆ ಮಾಡಿದ ಹಿನ್ನೆಲೆಯಲ್ಲಿ ಆತನನ್ನು ಮದುವೆಯಾಗಲು ನಿರಾಕರಿಸಿದ್ದಾರೆ. ನಂತರ ಆತನನ್ನು ಪೊಲೀಸರು ಬಂಧಿಸಿದ್ದಾರೆ.*