ಶಾಲಾ ಮಕ್ಕಳಿಂದ ಉರ್ದು ಪ್ರಾರ್ಥನೆ ಹೇಳಿಸಿದ್ದ ಪ್ರಿನ್ಸಿಪಾಲ್ ಸಸ್ಪೆನ್ಡ್
ಬರೇಲಿ- ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಮಕ್ಕಳಿಂದ ಉರ್ದು ಪ್ರಾರ್ಥನೆ ಹೇಳಿಸಿದ್ದ ಪ್ರಾಂಶು ಪಾಲರನ್ನು ಅಮಾನತು ಮಾಡಲಾಗಿದೆ.
*ಮಕ್ಕಳಿಗೆ ಶಾಲಾ ಪ್ರಾರ್ಥನೆ ವೇಳೆ ಉರ್ದು ಭಾಷೆಯ ಜನಪ್ರಿಯ ಪ್ರಾರ್ಥನೆ “ಲ್ಯಾಬ್ ಪೆ ಆತಿ ಹೈ ದುವಾ ಬಂಕೆ ತಮನ್ನಾ ಮೇರಿ” ಹಾಡನ್ನು ಹಾಡಿಸಲಾಗಿದೆ. ಈ ವೀಡಿಯೊ ಕ್ಲಿಪ್ ಸಾಮಜಿಕ ತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿ ಜನರ ಆಕ್ರೋಶಕ್ಕೆ ಕಾರಣ ವಾಗಿತ್ತು. ಈ ಬಗ್ಗೆ ಬಲಪಂಥೀಯ ಗುಂಪುಗಳು ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ರಾಜ್ಯದ ಶಿಕ್ಷಣ ಇಲಾಖೆಯು ಪ್ರಾಂಶುಪಾಲರನ್ನು ಅಮಾನತುಗೊಳಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.*
*ಮಕ್ಕಳು “ಮೇರೆ ಅಲ್ಲಾ ಬುರೈ ಸೆ ಬಚಾನಾ ಮುಜ್ಕೋ” ಎಂಬ ಸಾಲುಗಳನ್ನು ಹಾಡು ತ್ತಿರುವುದನ್ನು ಕ್ಲಿಪ್ ತೋರಿಸುತ್ತದೆ. ಈ ಪ್ರಾರ್ಥನೆಯು ಸರ್ಕಾರಿ ಶಾಲೆಗಳ ದೈನಂದಿನ ಪ್ರಾರ್ಥನಾ ವೇಳಾಪಟ್ಟಿಯ ಭಾಗವಾಗಿಲ್ಲ.*
*ಜೊತೆಗೆ ನಿರ್ದಿಷ್ಠ “ಧರ್ಮದೊಂದಿಗೆ” ಸಂಬಂಧಿಸಿರುವುದರಿಂದ ನಾವು ಪ್ರಕರಣವನ್ನು ದಾಖಲಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.*
*ಈ ಹಾಡನ್ನು 1902 ರಲ್ಲಿ ಉರ್ದು ಕವಿ ಮೊಹಮ್ಮದ್ ಇಕ್ಬಾಲ್ ಬರೆದಿದ್ದಾರೆ. 2019 ರಲ್ಲೂ ಸಹ ಇಂತಹದ್ದೇ ವಿವಾದ ವೇರ್ಪಟ್ಟಿತ್ತು.