ಸೌಜನ್ಯ ಹೋರಾಟಕ್ಕೆ ದೆಹಲಿ ಗ್ಯಾಂಗ್ ರೇಪ್ ಗೆ ಬಲಿಯಾದ ನಿರ್ಭಯ ತಾಯಿ ಆಶಾದೇವಿ ಬೆಂಬಲ.
ದೆಹಲಿ-ನಾನು ಆಶಾದೇವಿ, ನಿರ್ಭಯಾಳ ತಾಯಿ. ನಾನು ಮಂಗಳೂರು ಜಿಲ್ಲೆಯಲ್ಲಿ ನಡೆದ ಘಟನೆ ಕುರಿತು ಮಾತನಾಡುತ್ತಿದ್ದೇನೆ. ಆ ಮಗುವಿನ ಹೆಸರು ಸೌಜನ್ಯ. ಹನ್ನೊಂದು ವರ್ಷದ ಹಿಂದೆ ಆ ಘಟನೆ ನಡೆದಿದೆ. ಆ ಮಗುವನ್ನು ಗ್ಯಾಂಗ್ ರೇಪ್ ಮಾಡಿ ಬರ್ಬರವಾಗಿ ಕೊಲ್ಲಲಾಗಿದೆ. ಕಳೆದ ಹತ್ತು ವರ್ಷದಿಂದ ಆ ಮಗುವಿನ ತಂದೆ ತಾಯಿ ನ್ಯಾಯಕ್ಕಾಗಿ ಸಂಘರ್ಷ ನಡೆಸುತ್ತಿದ್ದಾರೆ. ಆದರೆ ಅವರ ಜೊತೆಗಿರುವ ಹೋರಾಟಗಾರರ ಮೇಲೆಯೇ ಕೇಸು ಹಾಕಲಾಗಿದೆ.
ನಿಜವಾದ ಅಪರಾಧಿಗಳನ್ನು ಹಿಡಿಯಲಿಲ್ಲ. ಆದರೆ ಅದರಲ್ಲಿ ಒಬ್ಬನನ್ನು ಹಿಡಿದು ಹನ್ನೊಂದು ವರ್ಷದ ನಂತರ ಆತನನ್ನು ಬಿಡುಗಡೆ ಮಾಡಿದ್ದಾರೆ. ಹಾಗಾದರೆ ನಿಜವಾದ ಅಪರಾಧಿಗಳು ಯಾರು ಅನ್ನುವುದನ್ನು ಯಾಕೆ ಪತ್ತೆ ಹಚ್ಛಲಿಲ್ಲ?
ಆದ್ದರಿಂದ ಅಲ್ಲಿಯ ಯಾವದೇ ಸರ್ಕಾರ ಇದ್ದರೂ ಆ ರಾಜ್ಯ ಸರ್ಕಾರ ಮತ್ತು ಇಲ್ಲಿಯ ( ದೆಹಲಿ )ಕೇಂದ್ರ ಸರ್ಕಾರಕ್ಕೆ ಈ ಪ್ರಕರಣದ ಮರುತನಿಖೆ ಮಾಡಿಸಿ ನಿಜವಾದ ಅಪರಾಧಿಗಳಿಗೆ ಶಿಕ್ಷೆ ಕೊಡಿಸಬೇಕು ಎಂದು ಆಗ್ರಹಿಸುತ್ತೇನೆ.
ಸೌಜನ್ಯ ತಾಯಿ ಕುಸುಮಾವತಿ ಮತ್ತು ಹತ್ತು ಹನ್ನೊಂದು ವರ್ಷದಿಂದ ಅವರ ಪರವಾಗಿ ನಿಂತ ಮಹೇಶ ಶೆಟ್ಟಿ ಅವರ ಜೊತೆಗೆ ನಾನು ಇದ್ದೇನೆ ಮತ್ತು ಇಡೀ ಹೋರಾಟಕ್ಕೆ ಬೆಂಬಲಿಸುತ್ತೇನೆ. ನನ್ನ ಮಗಳು ನಿರ್ಭಯಾ ಪ್ರಕರಣದಲ್ಲಿ ನಾನು ಈ ಎಲ್ಲ ನೋವನ್ನು ದಾಟಿದ್ದೇನೆ. ಒಟ್ಟಿನಲ್ಲಿ ನಿಜವಾದ ಅಪರಾಧಿಗಳು ಅವರು ಎಂಥ ರಾಜಕೀಯ ಬಲಿಷ್ಠ ಆಗಿರಲಿ ಅಥವಾ ಸಾಮಾನ್ಯ ಆಗಿರಲಿ ಅವರಿಗೆ ಶಿಕ್ಷೆ ಆಗಿ ಸೌಜನ್ಯ ತಾಯಿಗೆ ನ್ಯಾಯ ಸಿಗಲಿ ಎಂದು ವಿಡಿಯೋ ದಲ್ಲಿ ಆಗ್ರಹಿಸಿದ್ದಾರೆ.