ಗಂಡ ನ ವಿರುದ್ದ ಪೊಲೀಸ್ ಕಂಪ್ಲೇಂಟ್ ಕೊಡಲು ಸ್ಟೇಶನ್ ಗೆ ಬಂದ್ 23 ರ ಯುವತಿಯನ್ನು ಬಲೆಗೆ ಬಿಳಿಸಿಕೊಂಡ 53 ರ ಎ. ಎಸ್.ಐ
ತೆಲಂಗಾಣ-ಅಯ್ಯಾ ನಮಗೆ ನ್ಯಾಯ ಕೊಡಿ, ನನ್ನ ಗಂಡ ದಿನಾಲು ಕುಡಿದು ಬಂದು ಗಲಾಟೆ ಮಾಡತಾನೆ. ಹೀಗಂತ ಯಾವೊಬ್ಬ ಮಹಿಳೆ ಪೊಲೀಸ್ ಠಾಣೆಗೆ ಹೋಗಿ ಪಿರ್ಯಾದು ಮಾಡಿದರೆ, ಸಂತ್ರಸ್ತ ಮಹಿಳೆಗೆ ನ್ಯಾಯ ಕೊಡಿಸಬೇಕಾಗಿರುವುದು ಅವರ ಧರ್ಮ. ಆದರೆ, ನ್ಯಾಯ ಕೊಡಬೇಕಾದ ಪೊಲೀಸರೇ ಅನ್ಯಾಯ ಎಸಗಿ ಜನರಿಗೆ ತೊಂದರೆ ಕೊಡುತ್ತಿದ್ದರೆ ಬೇರೆ ಯಾರಿಗೆ ಕಷ್ಟ ಹೇಳಿಕೊಳ್ಳುವುದು ನೀವೇ ಹೇಳಿ.
ವಿಷಯ ಏನಪ್ಪ ಅಂದ್ರೆ ಇಲ್ಲೋಬ್ಬ ಎಎಸ್ಐ ನ್ಯಾಯಕ್ಕಾಗಿ ಪೊಲೀಸ್ ಠಾಣೆಗೆ ಹೋದ ಮಹಿಳೆಯನ್ನೇ ತನ್ನ ಬುಟ್ಟಿಗೆ ಬೀಳಿಸಿಕೊಂಡ ಘಟನೆ ತೆಲಂಗಾಣದ ಇಬ್ರಾಹಿಂಪಟ್ಟಣ ಮಂಡಲದಲ್ಲಿ ನಡೆದಿದೆ.
ತೆಲಂಗಾಣದ ವರ್ಷಕೊಂಡ ಗ್ರಾಮದ 23 ವರ್ಷದ ಯುವತಿಯೊಬ್ಬಳು ಇಬ್ರಾಹಿಂಪಟ್ಟಣ ಪೊಲೀಸ್ ಠಾಣೆಗೆ ಕಳೆದ ಕೆಲ ದಿನಗಳ ಹಿಂದೆ ತನ್ನ ಗಂಡ ಕುಡಿದ ಅಮಲಿನಲ್ಲಿ ತನಗೆ ಥಳಿಸುತ್ತಾನೆಂದು ದೂರು ದಾಖಲಿಸಿದ್ದಳು. ಯುವತಿಯಿಂದ ಪ್ರಕರಣ ದಾಖಲಿಸಿಕೊಳ್ಳುವ ಸಮಯದಲ್ಲಿ ಠಾಣೆಯಲ್ಲಿ 53 ವರ್ಷದ ಎಎಸ್ಐ ರಾಮುಲು ಕೂಡ ಹಾಜರಿದ್ದರು.
ಸಾಮಾನ್ಯವಾಗಿ ಗಂಡ-ಹೆಂಡತಿ ಜಗಳದ ವಿಷಯದಲ್ಲಿ ಇಬ್ಬರನ್ನು ಕರೆಯಿಸಿ ಬುದ್ದಿ ಮಾತು ಹೇಳಿ ಕಳುಹಿಸಿಕೊಡುತ್ತಾರೆ. ಹಾಗೇಯೇ ಈ ಕೇಸಿನಲ್ಲಿಯೋ ಗಂಡ ಹೆಂಡತಿಯನ್ನು ಕರೆಯಿಸಿ ಕೌನ್ಸೆಲಿಂಗ್ ಮಾಡಿ ಕಳುಹಿಸಿದ್ದಾರೆ.
ಆದಾಗ್ಯೂ ಗಂಡನ ವರ್ತನೆಯಲ್ಲಿ ಯಾವುದೇ ಬದಲಾವಣೆ ಕಾಣದೆ ಪ್ರತಿದಿನ ಗಂಡ-ಹೆಂಡತಿ ನಡುವೆ ಜಗಳ ನಡೆಯುತ್ತಲೇ ಇತ್ತು. ಯುವತಿ ಆಗಾಗ ಠಾಣೆಗೆ ಬಂದು ದೂರು ನೀಡುವುದು ಸಾಮಾನ್ಯವಾಗಿತ್ತು. ಹೀಗಾಗಿ ಯುವತಿಯ ಗಂಡನನ್ನು ಕರೆದು ಬುದ್ಧಿವಾದ ಹೇಳುತ್ತಿದ್ದ ಎಎಸ್ಐ ರಾಮುಲು ಕಣ್ಣು ಯುವತಿಯ ಮೇಲೆ ಬಿದ್ದಿ ಫರಿಣಾಮ ಆಗಾಗ ಫೋನ್ನಲ್ಲಿ ಮಾತನಾಡುತ್ತಾ ಯುವತಿಗೆ ಆಪ್ತನಾಗಿದ್ದಾನೆ
ವಿಚಾರಣೆ ನೆಪದಲ್ಲಿ ಯುವತಿ ಮತ್ತು ಆಕೆಯ ಗಂಡನನ್ನು ಠಾಣೆಗೆ ಕರೆಸಿಕೊಳ್ಳುತ್ತಿದ್ದ ರಾಮುಲು ಯುವತಿಗೆ ಹತ್ತಿರವಾಗುವುದರೊಂದಿಗೆ ಸಲುಗೆಯು ಬೆಳೆಯಿತು. ಎಎಸ್ಐ ವಿಚಾರ ಠಾಣೆಯ ಸಬ್ ಇನ್ಸ್ಪೆಕ್ಟರ್ ಗಮನಕ್ಕೆ ಬಂದ ನಂತರ ಮೇಟಪಲ್ಲಿಯ ಸರ್ಕಲ್ ಇನ್ಸ್ಪೆಕ್ಟರ್ ಗಮನಕ್ಕೆ ತಂದರು. ಆದರೆ ಶೀಘ್ರದಲ್ಲೇ ಎಎಸ್ಐ ರಾಮುಲು ನಿವೃತ್ತಿಯಾಗುತ್ತಿದ್ದರಿಂದ ಉನ್ನತ ಅಧಿಕಾರಿಗಳಿಗೆ ದೂರು ನೀಡದೆ, ಇನ್ನೊಮ್ಮೆ ಈ ರೀತಿ ಮಾಡಬೇಡ ಎಂದು ಬೈದು ಬುದ್ಧಿವಾದ ಹೇಳಲಾಗಿತ್ತು. ಆದರೂ ಎಎಸ್ಐ ವರ್ತನೆಯಲ್ಲಿ ಮಾತ್ರ ಯಾವುದೇ ಬದಲಾವಣೆ ಕಾಣಲಿಲ್ಲ.
ಈ ನಡುವೆ ಕಳೆದ ಎರಡು ದಿನಗಳಿಂದ ಯುವತಿಯ ಜತೆಯಲ್ಲಿ ಎಎಸ್ಐ ರಾಮುಲು ತುಂಬಾ ಸಲುಗೆಯಿಂದ ಇರುವ ಖಾಸಗಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸ್ಥಳೀಯವಾಗಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರ ಉನ್ನತ ಅಧಿಕಾರಿಗಳ ಗಮನಕ್ಕೂ ಬಂದಿದ್ದು, ಎಎಸ್ಐ ವಿರುದ್ಧ ಕ್ರಮ ಕೈಗೊಳ್ಳದೇ ಮತ್ತೆ ಹೀಗೆ ಮಾಡಬೇಡ ಅಂತ ಬುದ್ಧಿವಾದ ಹೇಳಿ ಪ್ರಕರಣ ಮುಗಿಸಿದ್ದಾರೆ.