ಪೆಸೆಂಟ್ ಒಬ್ಬರಿಗೆ ಕಿಡ್ನಿ ಸ್ಟೋನ್ ಆಗಿದೆ ಎಂದು ಹೇಳಿ ಸರ್ಜರಿ ಮಾಡಿ ರೋಗಿಯ ಕಿಡ್ನಿಯನ್ನೇ ಕಳ್ಳತನ ಮಾಡಿದ ಡಾಕ್ಟರ್
ಉತ್ತರಪ್ರದೇಶದ ಅಲಿಗಢ ಕಸ್ಗಂಜ್ ಜಿಲ್ಲೆಯ ನಾಗ್ಲಾ ತಾಲ್ ಗ್ರಾಮದ ನಿವಾಸಿ ಸುರೇಶ್ ಚಂದ್ರ(53) ಹೊಟ್ಟೆ ನೋವೆಂದು ಹೋಗಿದ್ದಾರೆ.ಈ ವೇಳೆ ವೈದ್ಯರು ಅಲ್ಟ್ರಾಸೌಂಡ್ ಮಾಡಲು ಹೇಳಿದ್ದಾರೆ.ಈ ವೇಳೆ ಕಿಡ್ನಿಯಲ್ಲಿ ಕಲ್ಲುಗಳಿರುವುದು ಕಂಡು ಬಂದಿದೆ.
ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಆಪರೇಷನ್ ಮಾಡಿಸಿಕೊಳ್ಳಲು ತಿಳಿಸಿದ್ದಾರೆ.ಅದರಂತೆ ಸರ್ಜರಿಯೂ ನಡೆದಿದೆ.
ಆದರೆ ಇದಾದ ಕೆಲ ತಿಂಗಳ ಬಳಿಕ ಸುರೇಶ್ ಗೆ ಹೊಟ್ಟೆಯ ಕೆಳಭಾಗದಲ್ಲಿ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಅಲ್ಟ್ರಾಸೌಂಡ್ ಮಾಡಿಸಿಕೊಂಡಿದ್ದಾನೆ.ಆ ವೇಳೆ ಒಂದು ಕಿಡ್ನಿಯೇ ನಾಪತ್ತೆ ಆಗಿರುವುದು ಬೆಳಕಿಗೆ ಬಂದಿದೆ.
ಅಲ್ಟ್ರಾಸೌಂಡ್ ವರದಿಯಲ್ಲಿ ಅವರ ಎಡ ಮೂತ್ರಪಿಂಡ ಕಾಣೆಯಾಗಿದೆ ಎಂದು ತೋರಿಸಿದೆ. ಸಂತ್ರಸ್ತರಿಂದ ಮಾಹಿತಿ ಪಡೆದ ಸಿಡಿಒ ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.
ಕಾಸ್ಗಂಜ್ ಸಿಡಿಒ ಸಚಿನ್ “ಈ ವಿಷಯದ ಬಗ್ಗೆ ತನಿಖೆ ನಡೆಸಿ ವರದಿಯನ್ನು ಸಲ್ಲಿಸಲು ಮುಖ್ಯ ವೈದ್ಯಕೀಯ ಅಧಿಕಾರಿಗೆ ಸೂಚಿಸಲಾಗಿದೆ” ಎಂದು ಹೇಳಿದರು.
ಖಾಸಗಿ ಆಸ್ಪತ್ರೆಯ ಆಡಳಿತಾಧಿಕಾರಿಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.