ಸಾಕು ತಂದೆಯ ವಚನ ಪಾಲಿಸಲು ಮುಂದಾಗಿ ಸಿಎಂ ಗೊಂದಲದಲ್ಲಿದ್ದಾರೆ – ಬಿಎಸ್ವೈ ವಿರುದ್ಧ ಯತ್ನಾಳ್ ಪರೋಕ್ಷ ವಾಗ್ದಾಳಿ
ಬೆಳಗಾವಿ: ಸಾಕು ತಂದೆಯ ವಚನ ಪಾಲಿಸಲು ಮುಂದಾಗಿ ಸಿಎಂ ಗೊಂದಲದಲ್ಲಿದ್ದಾರೆ ಮೀಸಲಾತಿಗಾಗಿ ನೋಡೋಣ ಸಿಎಂ ಏನು ಆಟ ಆಡ್ತಾರೆ, ಅವರ ಹಿಂದೆ ಯಾರ ಇದ್ದಾರೆ ನೋಡೋಣ. ಸಿಹಿ ಸುದ್ದಿನೋ ನಾಟಕನಾ ಗೊತ್ತಿಲ್ಲ. ಹುಚ್ಚು ಸಾಹಸಕ್ಕೆ ಸಿಎಂ ಕೈಹಾಕಬಾರದು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಪರೋಕ್ಷವಾಗಿ ಮಾಜಿ ಸಿಎಂ ಯಡಿಯೂರಪ್ಪ (BS Yediyurappa) ವಿರುದ್ಧ ಕಿಡಿಕಾರಿದ್ದಾರೆ.ಪಂಚಮಸಾಲಿ 2ಎ ಮೀಸಲಾತಿ (Panchamasali Community 2A Reservation) ಹೋರಾಟ ಹಿನ್ನೆಲೆ ಬೆಳಗಾವಿಯಲ್ಲಿ (Belagavai) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎರಡೂ ವರ್ಷ ಆಯ್ತು ಕಥೆ ಬೇಡ. ಬೇಗ ವರದಿ ತರಿಸಲು ಹೇಳಿದ್ದೆವು. ಅಂತಿಮ ವರದಿ ಎಂದು ಕಥೆ ಹೇಳ್ತಾರೆ. ಅವರ ಮೇಲಿನ ಅಂತಿಮ ದಿನದ ಭರವಸೆ. ತಂದೆ ಸಮಾನ ಎನ್ನುವವರು ಆಟವಾಡುತ್ತಿದ್ದಾರೆ. ಆಟ ಆಡಿದರೆ ಇವರ ಭವಿಷ್ಯ ಉಳಿಯಲ್ಲ, ಅವರದು ಭವಿಷ್ಯ ಇರಲ್ಲ. ಇವತ್ತು ಕ್ಯಾಬಿನೆಟ್ ಇದೆ ಮಧ್ಯಾಹ್ನ ಬಹಿರಂಗ ಪಡಿಸುತ್ತೇವೆ. ಸತ್ಯ ನ್ಯಾಯ ಎಲ್ಲಿದೆ ಅಲ್ಲೇ ಇರುತ್ತೇನೆ. ತಮ್ಮ ಭವಿಷ್ಯಕ್ಕಾಗಿ ಬಹಳ ಜನರನ್ನು ಹಾಳು ಮಾಡಲು ಹೊರಟವರು ಇದ್ದಾರೆ. ಸಾಕು ಮಗನಿಗೆ ಗೊತ್ತಾಗುತಿಲ್ಲ. ಮಾತು ಕೇಳೇ ಹಾಳಾಗ್ತಾರೆ, ಸಾಕು ತಂದೆಯ ವಚನ ಪಾಲಿಸಲು ಅವರು ಮುಂದಾಗಿದ್ದಾರೆ ಎಂದು ಪರೋಕ್ಷವಾಗಿ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಾವು ಕತ್ತಿ ಗನ್ ತೆಗೆದುಕೊಂಡು ಹೋಗಲ್ಲ ಪ್ರಜಾತಂತ್ರ ಇದೆ. ಒಂದೊಂದು ಸಮುದಾಯವನ್ನು ಎತ್ತಿ ಕಟ್ಟಲಾಗುತ್ತಿದೆ. ಶಕ್ತಿ ಪ್ರದರ್ಶನ ಆರಂಭ ಅಗಿದೆ. ಸಂಪುಟದಲ್ಲಿ ಯಡಿಯೂರಪ್ಪ ಇದ್ದಾಗ ಕೆಲವರು ವಿರೋಧ ಮಾಡಿದ್ರು. ಈಗ ಅವರು ಮಾಜಿ. ಯಾರು ವಿರೋಧ ಮಾಡ್ತಾರೆ ಅವರೆಲ್ಲ ಮಾಜಿ ಆಗ್ತಾರೆ. ಚುನಾವಣೆಯಲ್ಲಿ ಜನ ಪಾಠ ಕಲಿಸ್ತಾರೆ. ಇದನ್ನು ಮಾಜಿ ಸಿಎಂ ಹೇಳಬೇಕು ಬೊಮ್ಮಾಯಿ (Basavaraj Bommai) ಏನು ಪ್ರಕಟ ಮಾಡ್ತಾರೆ ಅದರ ಮೇಲೆ ನಮ್ಮ ಹೋರಾಟ ಎಂದು ಗುಡುಗಿದ್ದಾರೆ.ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ವಿಚಾರವಾಗಿ ಮಧ್ಯಂತರ ವರದಿ ಸಲ್ಲಿಕೆ ವಿಚಾರವಾಗಿ ಮಾತನಾಡಿ, ಅದರಲ್ಲೇನು ಮಧ್ಯಂತರ ಎರಡು ವರ್ಷ ಸರ್ಕಾರವಿದ್ದಾಗ ಆಯೋಗ ಏನ್ ಮಾಡಿತು. ಸುಮ್ಮನೇ ಡೈವರ್ಟ್ ಮಾಡುವ ಕುತಂತ್ರ ಬೇಡ. ಮಧ್ಯಂತರ ಅಲ್ಲ ಶಾಶ್ವತ ಪರಿಪೂರ್ಣ ವರದಿ ಅಂತಾ ಡಿಕ್ಲೇರ್ ಮಾಡಿ. ನೀವು ಕೊಡ್ತಿರೋ ಇಲ್ಲವೋ ಅಷ್ಟೇ ಹೇಳಿ ಕಥೆ ಹೇಳಬೇಡಿ. ನಾನೇ ಕರ್ನಾಟಕದ ಕೊನೆಯ ಬಿಜೆಪಿ ಸಿಎಂ ಆಗ್ತೀನಿ ಅಂದ್ರೆ ಬಿಡಿ. ಮುಂಬರುವ ದಿನಗಳಲ್ಲಿ ಜನ ಪಾಠ ಕಲಿಸುತ್ತಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿಗೆ ಎಚ್ಚರಿಕೆ ನೀಡಿದ್ದಾರೆ.