ಶಿರಸಿಯ ಯುವ ನಾಯಕ ಗಣಪತಿ ನಾಯ್ಕ ಅವರಿಗೆ ಹೆಚ್ಚುವರಿಯಾಗಿ ಜೆಡಿಎಸ್ ಹಿಂದುಳಿದವರ ವರ್ಗದ ರಾಜ್ಯ ಉಪಾಧ್ಯಕ್ಷ ಹುದ್ದೆ.
ಬೆಂಗಳೂರು- ಶಿರಸಿ ಮೂಲದ ಜೆಡಿಎಸ್ ರಾಜ್ಯ ಯುವ ಮುಖಂಡ ಹಾಗು ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಗಣಪತಿ ನಾಯ್ಕ ಶಿರಸಿ ಅವರಿಗೆ ಹೆಚ್ಚುವರಿಯಾಗಿ ಜೆಡಿಎಸ್ ರಾಜ್ಯ ಹಿಂದುಳಿದವರ ವರ್ಗದ ರಾಜ್ಯ ಉಪಾಧ್ಯಕ್ಷ ಹುದ್ದೆಯನ್ನು ನೀಡಲಾಗಿದೆ , ಚುನಾವಣೆ ಹತ್ತಿರ ಬರುತ್ತಿರುವಂತೆ ರಾಜ್ಯವಾರು ಹಿಂದುಳಿದವರ ವರ್ಗದ ಜನರನ್ನು ಸಂಘಟಿತ ರನ್ನಾಗಿ ಮಾಡುವ ಗುರಿಇಟ್ಟುಕೊಂಡು ಕ್ರಿಯಾಶೀಲ ಯುವನಾಯಕ ಈ ಹುದ್ದೆಗೆ ಆಯ್ಕೆ ಮಾಡಲಾಗಿದೆ . ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು ರಾಜ್ಯದಲ್ಲಿ ನನಗೆ ನೀಡಿರುವ ಹೆಚ್ಚುವರಿ ಹುದ್ದೆ ಖುಷಿ ತಂದಿದೆ, ಹಿಂದುಳಿದ ವರ್ಗಗಳ ಪರವಾಗಿ ಕೆಲಸ ಮಾಡುವ ಅವಕಾಶ ಬಂದಿದೆ, ಇದಕ್ಕಾಗಿ ಪಕ್ಷದ ವರಿಷ್ಠರಿಗೆ ಮತ್ತು ಹಿರಿಯರಿಗೆ ಧನ್ಯವಾದ ತಿಳಿಸಿದರು.ತನಗೆ ನೀಡಿರುವ ಈ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಶಾಸಕರು ಆಯ್ಕೆ ಆಗಲು ದುಡಿಯುವೇನು ಎಂದು ತಿಳಿಸಿದರು.