ಹಾವೇರಿ ನಗರ ಸಭಾ ಸದಸ್ಯರನ್ನು ಭೇಟಿ ಮಾಡಿ ಬೆಂಬಲ ಕೋರಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಹಾವೇರಿ-*ನಿಕಟ ಪೂರ್ವ ಮುಖ್ಯಮಂತ್ರಿಗಳು ಹಾಗೂ ಬಿಜೆಪಿ ಅಭ್ಯರ್ಥಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ಅವರು ನಮ್ಮ ಹಾವೇರಿಯ ನಗರ ಸಭೆಯ ಸದಸ್ಯರಾದ ಶ್ರೀ ಬಸವರಾಜ ಬೆಳವಡಗಿ ಅವರ ಮನೆಗೆ ಭೇಟಿ ನೀಡಿ ತಮ್ಮ ಗೆಲುವಿಗೆ ಸಹಕರಿಸುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಹಾವೇರಿ ನಗರ ಸಭೆಯ ಚುನಾಯಿತ ಸದಸ್ಯರು ಶ್ರೀಮತಿ ಚನ್ನಮ್ಮ ಬಿ ಬ್ಯಾಡಗಿ ಅವರ ನೇತೃತ್ವದಲ್ಲಿ ಅವರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಹಾವೇರಿ ನಗರ ಸಭಾ ಸದಸ್ಯರು ಹಾಜರಿದ್ದರು.