ಹಾವೇರಿ ಜಿಲ್ಲೆ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯದರ್ಶಿಯಾಗಿ ಹಾವೇರಿ ನಗರಸಭೆ ಸದಸ್ಯೆ ಶ್ರೀಮತಿ ಚನ್ನಮ ಬಿ ಬ್ಯಾಡಗಿ ಆಯ್ಕೆ
ಹಾವೇರಿ- ಹಾವೇರಿ ಜಿಲ್ಲೆಯ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯದರ್ಶಿಯನ್ನಾಗಿ ಹಾವೇರಿ ನಗರಸಭೆ ಸದಸ್ಯೆ ಶ್ರೀಮತಿ ಚನ್ನಮ್ಮ ಬಿ ಬ್ಯಾಡಗಿ ಅವರನ್ನು ಹಾವೇರಿ ಜಿಲ್ಲೆ ಬಿಜೆಪಿ ಅಧ್ಯಕ್ಷ ಅರುಣ್ ಕುಮಾರ್ ಪೂಜಾರ ಅವರ ಅದೇಶದ ಮೇರೆಗೆ ಹಾವೇರಿ ಜಿಲ್ಲೆ ಮಹಿಳಾ ಮೋರ್ಚಾ ಅಧ್ಯಕ್ಷರಾದ ಸ್ರಷ್ಟಿ ಪಾಟೀಲ್ ಅವರು ಆಯ್ಕೆ ಮಾಡಿ ಅದೇಶ ಹೊರಡಿಸಿದ್ದಾರೆ.
.ಆದೇಶದಲ್ಲಿ ಪಕ್ಷದ ತತ್ವ ಸಿದ್ದಂತಾಗಳಿಗೆ ಬದ್ಧರಾಗಿ ಅವುಗಳನ್ನು ಅಳವಡಿಸಿಕೊಂಡು ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡುವ ನಿಟ್ಟಿನಲ್ಲಿ ಮುಂದಿನ 3 ವರುಷ ಅವಧಿಗೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವಂತೆ ತಿಳಿಸಿದ್ದಾರೆ.ಈ ಅವಧಿಯಲ್ಲಿ ಪಕ್ಷ ಸಂಘಟನೆ ಗೆ ಪರಿಶ್ರಮ ಮತ್ತು ತಮ್ಮ ಸಮಯ ಅವಶ್ಯವಾಗಿದ್ದು ಆದ ಕಾರಣ ತಾವು ಸಂಪೂರ್ಣವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಕೋರಿಕೊಡಿದ್ದಾರೆ.