ರಾಜ್ಯದಲ್ಲಿ ಈ ಅಪ್ಪ-ಮಕ್ಕಳ ಸಂಪೂರ್ಣ ಹಿಡಿತದಲ್ಲಿರುವ ಬಿಜೆಪಿ ಪಕ್ಷವನ್ನು ರಕ್ಷಿಸಲು ನಾನು ನಾಮಪತ್ರ ಸಲ್ಲಿಸಿದೆನೆ – ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ- ಬಿಜೆಪಿ ಪಕ್ಷ ನನ್ನ ಮಾತೃ ಸಮಾನ ಎಂದು ಪಕ್ಷ ನಿಷ್ಠೆ, ಧರ್ಮ ನಿಷ್ಠೆ ಮತ್ತು ಹಿಂದೂ ಪರವಾಗಿ ನಿಂತಿದ್ದ ನನ್ನಂತ ಹಲವಾರು ನಾಯಕರಿಗೆ ಈ ಅಪ್ಪ – ಮಕ್ಕಳಿಂದ ಆಗಿರುವ ಅನ್ಯಾಯದ ವಿರುದ್ಧ ಹಾಗೂ ಈ ಅಪ್ಪ-ಮಕ್ಕಳ ಬಿಜೆಪಿ ಪಕ್ಷ ದ್ರೋಹಿ ಚಟುವಟಿಕೆಗಳು, ಕುಟುಂಬ ರಾಜಕಾರಣ ಮತ್ತು ಹೊಂದಾಣಿಕೆ ರಾಜಕಾರಣದ ವಿರುದ್ಧ ನಾವೆಲ್ಲರೂ ಒಂದಾಗುವ ಸಮಯ ಬಂದಿದೆ. ಈ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತನ ಬೆಂಬಲ ಬೇಕಾಗಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಮಾಜಿ ಉಪಮುಖ್ಯಮಂತ್ರಿ ಕೆ. ಎಸ್.ಈಶ್ವರಪ್ಪನವರು ತಿಳಿಸಿದ್ದಾರೆ.ಈ ಚುನಾವಣೆಯು ಮುಂದೊಂದು ದಿನ ಅಸಂಖ್ಯಾತ ಬಿಜೆಪಿ ಕಾರ್ಯಕರ್ತರಿಗೆ ಆಶಾಕಿರಣವಾಗಲಿದೆ. ಶಿವಮೊಗ್ಗದಲ್ಲಿ ಮತ್ತು ಕರ್ನಾಟಕ ರಾಜ್ಯದಲ್ಲಿ ಈ ಅಪ್ಪ-ಮಕ್ಕಳ ವಿರುದ್ಧ ನನ್ನೊಂದಿಗೆ ಕೈಜೋಡಿಸಿ ನಾವೆಲ್ಲರೂ ನಮ್ಮ ಪಕ್ಷದ ಸಿದ್ಧಾಂತವನ್ನು ಮತ್ತಷ್ಟು ಗಟ್ಟಿಗೊಳಿಸೋಣ ಎಂದು ತಿಳಿಸಿದ್ದಾರೆ. ಕರ್ನಾಟಕ ದಲ್ಲಿ ಬಿಜೆಪಿ ಪಕ್ಷವನ್ನು ಈ ಅಪ್ಪ-ಮಕ್ಕಳ ಹಿಡಿತದಿಂದ ಮುಕ್ತಿಗೊಳಿಸೋಣ ಎಂದು ಕಾರ್ಯಕರ್ತ ರಿಗೆ ಕರೆ ನೀಡಿದರು.