*ಅಡಿಕೆ ತೋಟಗಳಿಗೆ ಎಲೆ ಚುಕ್ಕಿ ರೋಗ ಬಾಧೆ, ಪರಿಹಾರಕ್ಕೆ ಕೇಂದ್ರದಿಂದ ತೀರ್ಥಹಳ್ಳಿಗೆ ಇಂದು ಆಗಮಿಸಿದ ಅಧ್ಯಯನ ತಂಡ..!*
*ಅಡಿಕೆ ಬೆಳೆಗಾರರು ಆತಂಕ ಪಡುವ ಅಗತ್ಯವಿಲ್ಲ,*
*ಕೇಂದ್ರ ರಾಜ್ಯ ಸರ್ಕಾರ ನಿಮ್ಮ ಬೆಂಬಲಕ್ಕೆ ಇದೆ…!*
*ಎಲಚುಕ್ಕಿ ರೋಗಕ್ಕೆ ಶಾಶ್ವತ ಪರಿಹಾರ ಕೊಂಡುಕೊಳ್ಳೋಣ- ಅರಗ ಜ್ಞಾನೇಂದ್ರ…!*
ತೀರ್ಥಹಳ್ಳಿ:-ಮಲೆನಾಡಿನಲ್ಲಿ ಅಡಿಕೆ ತೋಟಗಳಿಗೆ ತಗಲಿರುವ ಎಲೆಚುಕ್ಕಿ ರೋಗ ಅಧ್ಯಯನಕ್ಕಾಗಿ ಇಂದು ಕೇಂದ್ರ ತಂಡ ತೀರ್ಥಹಳ್ಳಿಗೆ ಆಗಮಿಸಿದ್ದು ರಾಜ್ಯದ ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷರು, ಗೃಹ ಸಚಿವರಾದ ಅರಗ ಜ್ಞಾನೇಂದ್ರ ಆತ್ಮೀಯವಾಗಿ ಸ್ವಾಗತಿಸಿ ಪ್ರವಾಸಿ ಮಂದಿರದಲ್ಲಿ ಕೇಂದ್ರ ಅಧ್ಯಯನ ತಂಡ ಮತ್ತು ತೋಟಗಾರಿಕೆ ಇಲಾಖೆ ಹಾಗು ರಾಜ್ಯದ ಕೆಲವು ಸಂಶೋಧನಾ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ್ದು ಸ್ಥಳೀಯ ಅಡಿಕೆ ಬೆಳೆಗಾರರ ಹಿತ ಕಾಪಾಡುವ ನಿಟ್ಟಿನಲ್ಲಿ ಅನೇಕ ಸಲಹೆ ಸೂಚನೆಗಳನ್ನು ನೀಡಿದ್ದಾರೆ ಮತ್ತು ಕೇಂದ್ರ ತಂಡ
ಇಂದಿನಿಂದ ತೀರ್ಥಹಳ್ಳಿಯಲ್ಲಿ ಎಲೆ ಚುಕ್ಕಿ ರೋಗ ಉಂಟಾಗಿರುವ ತೋಟಗಳಿಗೆ ಕುದ್ದು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಲಿದ್ದು ಅಡಿಕೆ ಬೆಳೆಗೆ ತಗಲಿರುವ ಈ ರೋಗಕ್ಕೆ ಶಾಶ್ವತವಾಗಿ ಪರಿಹಾರ ಕಂಡುಹಿಡಿವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದ್ದು ಕ್ಷೇತ್ರದ ಅಡಿಕೆ ಬೆಳೆಗಾರ ರೈತರು ಯಾವುದೇ ಆತಂಕಕ್ಕೆ ಒಳಗಾಗದೆ ಧೈರ್ಯ ಕಳೆದುಕೊಳ್ಳುವ ಅಗತ್ಯವಿಲ್ಲ
ಕೇಂದ್ರ ಅಧ್ಯಯನ ತಂಡ ಆದಷ್ಟು ಬೇಗ ಇದಕ್ಕೊಂದು ಪರಿಹಾರ ಕೊಂಡುಕೊಂಡು ರೈತರಿಗೆ ನೆರವಾಗುತ್ತದೆ ಎಂದು ಭರವಸೆ ನೀಡಿದರು.
ಈ ಸಭೆಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾದ ಜೀವರಾಜ್,
ಇಲಾಖೆ ಅಧಿಕಾರಿಗಳು,
ವಿವಿಧ ಸಹಕಾರ ಸಂಸ್ಥೆಯ ಮುಖ್ಯಸ್ಥರುಗಳು,ಸ್ಥಳೀಯ ರೈತ ಮುಖಂಡರುಗಳು ಉಪಸ್ಥಿತರಿದ್ದರು.