ಬೆಂಗಳೂರು-ತಾಯಿ ಜೊತೆ ಸ್ಕೂಟರ್ ನಲ್ಲಿ ಹೋಗುತ್ತಿದ್ದ 15 ವರ್ಷದ ಬಾಲಕಿ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸಾವದ ಘಟನೆ ಬೆಂಗಳೂರಿನಲ್ಲಿ ಮಂಗಳವಾರ ಸಂಭವಿಸಿದೆ.
ಲಾವ್ಯಶ್ರೀ (15) ಮೃತಪಟ್ಟ ಬಾಲಕಿ. ಈಕೆ ಸೋದರ ಯಾಶ್ವಿನ್ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟಿಸಿ ಪಾಳ್ಯದಿಂದ ಭಟ್ಟರಹಳ್ಳಿ ಮಾರ್ಗದಲ್ಲಿ ಸ್ಕೂಟರ್ ನಲ್ಲಿ ತಾಯಿ ಪ್ರಿಯದರ್ಶಿನಿ ಜೊತೆ ಮಕ್ಕಳು ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಭಟ್ಟರಹಳ್ಳಿ ಸಿಗ್ನಲ್ ಬಳಿ ಸ್ಕೀಡ್ ಆಗಿ ಸ್ಕೂಟರ್ ಕೆಳಗೆ ಬಿದ್ದಿದ್ದು, ಪ್ರಿಯದರ್ಶನಿ ಮತ್ತು ಯಾಶ್ವಿನ್ ಎಡಗಡೆ ಬಿದ್ದು ಗಾಯಗೊಂಡರೆ, ಬಲಗಡೆ ಬಿದ್ದ ಲಾವ್ಯಶ್ರೀ ಮೇಲೆ ಬಿಎಂಟಿಸಿ ಬಸ್ ಹರಿದಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕೆಆರ್ ಪುರಂ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪೊಲೀಸ್ ತನಿಖೆ ಕೈ ಗೊಂಡಿದ್ದಾರೆ.