ಧರ್ಮಸ್ಥಳದಲ್ಲಿ ಭೀಕರ ರಸ್ತೆ ಅಪಘಾತ ಓರ್ವ ಸಾವು, ಗಂಭೀರವಾಗಿ ಗಾಯಗೊಂಡ 7 ಜನರು
ಬೆಳ್ತಂಗಡಿ : ಭೀಕರ ರಸ್ತೆ ಅಪಘಾತ ನಡೆದು ಓರ್ವ ಸಾವನ್ನಪ್ಪಿ, ಏಳು ಜನರು ಗಂಭೀರವಾಗಿ ಗಾಯಗೊಂಡ ಘಟನೆ ಧರ್ಮಸ್ಥಳದ ಕುದ್ರಾಯದಲ್ಲಿ ನಿನ್ನೆ ಸಂಜೆ ನಡೆದಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅಗಮಿಸುತ್ತಿದ್ದ ಮಂಡ್ಯ ಜಿಲ್ಲೆಯ ಹತ್ತು ಮಂದಿಯ ಕುಟುಂಬ ನಿಡ್ಲೆ ಗ್ರಾಮದ ಕುದ್ರಾಯ ಎಂಬಲ್ಲಿ ಬೊಲೇರೋ ವಾಹನವನ್ನು ರಸ್ತೆಯ ಬಲಕ್ಕೆ ಪಾರ್ಕ್ ಮಾಡಿ ನಿಲ್ಲಿಸಿ ಇಳಿದು ಅಂಗಡಿ ಹೋಗುತ್ತಿದ್ದರು. ಈ ವೇಳೆ ಧರ್ಮಸ್ಥಳ ಡಿಪೋದಿಂದ ಮೈಸೂರಿಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಿಂತಿದ್ದವರಿಗೆ ಹಾಗೂ ಬೊಲೋರೊ ವಾಹನಕ್ಕೆ ಡಿಕ್ಕಿ ಹೊಡೆದಿದೆ .
ಈ ವೇಳೆ ಮಂಡ್ಯ ಜಿಲ್ಲೆಯ ಚೆನ್ನಸಾಂದ್ರ ನಿವಾಸಿಯಾದ ಮಹದೇವ(63) ಸ್ಥಳದಲ್ಲೇ ಸಾವನ್ನಪ್ಪಿದ್ದು, ಐದು ಜನ ಮಹಿಳೆಯರು , ಓರ್ವ ಗಂಡಸು ,ಒಂದು ಮಗು ಸೇರಿ ಏಳು ಮಂದಿಗೆ ಗಂಭೀರ ಗಾಯವಾಗಿದೆ.
ಗಾಯಾಳುಗಳನ್ನು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.