ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಬ್ರಹತ್ ಜನಜಾಗೃತಿ ಸಮಾವೇಶ ಯಶಸ್ವಿ.
ಜಿಲ್ಲೆಯ ಜನತೆಯು ಅತೀ ದೊಡ್ಡ ಶಕ್ತಿ ಕೊಡಲಿದ್ದಾರೆ -ಕೆಪಿಸಿಸಿ ಅಧ್ಯಕ್ಷ ಶಿವಕುಮಾರ
ಕುಮಟಾ: ಪರೇಶ ಮೇಸ್ತಾ ಪ್ರಕರಣದಲ್ಲಿ ಬಿಜೆಪಿಗರು ಜಿಲ್ಲೆಯ ಜನರಿಗೆ ಮಾಡಿದ ಅನ್ಯಾಯವನ್ನು ತೆರೆದಿಡುವ ಉದ್ದೇಶದಿಂದ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಣಕಿ ಮೈದಾನದಲ್ಲಿ ಹಮ್ಮಿಕೊಂಡ ಬೃಹತ್ ಜನಜಾಗೃತಿ ಸಮಾವೇಶವು ಯಶಸ್ವಿಯಾಗಿ ಸಂಪನ್ನಗೊಂಡಿತು. ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ ಜನಸಾಗರವೇ ಹರಿದು ಬಂದಿತ್ತು.
ಕಾರ್ಯಕ್ರಮವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಉದ್ಘಾಟಿಸಿ ಮಾತನಾಡಿ ಉತ್ತರ ಕನ್ನಡ ಜಿಲ್ಲೆಯ ಜನತೆಯು ಅತೀ ದೊಡ್ಡ ಶಕ್ತಿ ಕೊಡಲಿದ್ದಾರೆ ಎಂಬ ಭರವಸೆಯನ್ನಿಟ್ಟಿದ್ದೇವೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪರೇಶ ಮೇಸ್ತಾ ಪ್ರಕರಣವನ್ನು ಬಿಜೆಪಿಗರು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ. ಪ್ರತಿ ರಕ್ತದ ಹನಿಗೂ ನ್ಯಾಯ ಕೊಡಿಸುತ್ತೇವೆ ಎಂದವರ ಪತ್ತೆಯೇ ಈಗಿಲ್ಲ. ಸಾವಿರಾರು ಅಮಾಯಕರ ಮೇಲೂ ಪೋಲಿಸ್ ಪ್ರಕರಣ ದಾಖಲಾಗಿತ್ತು. ಅವರಿಗೆ ನ್ಯಾಯ ಕೊಡಿಸುವಲ್ಲಿ ಬಿಜಪಿ ವಿಫಲವಾಗಿದೆ.
ಕೇವಲ ಹಿಂದೂ ಎನ್ನುವ ಸರ್ಕಾರ ನಮ್ಮದಲ್ಲ.ನಾವೆಲ್ಲರೂ ಒಂದು ಎನ್ನುವ ಸರ್ಕಾರ ನಮ್ಮದು.ಡಬಲ್ ಇಂಜಿನ್ ಸರ್ಕಾರವಿದ್ದರೂ ನಿರುದ್ಯೋಗ ಸಮಸ್ಯೆ, ಬೆಲೆ ಏರಿಕೆ ಮುಂತಾದ ಸಮಸ್ಯೆಗಳಿಂದ ಜನತೆ ಕಂಗೆಟ್ಟಿದೆ.ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದದ್ದೇ ಆದಲ್ಲಿ ಜನೋಪಯೋಗಿ ಕಾರ್ಯಗಳನ್ನು ಮಾಡಿ ಜನತೆ ನೆಮ್ಮದಿಯಿಂದ ಬದುಕಲು ಅನುವು ಮಾಡಿಕೊಡುತ್ತೇವೆ ಎಂದರು.
ಉದ್ಯೋಗಾವಕಾಶ, ಬೆಲೆ ಏರಿಕೆಗೆ ಪರಿಹಾರ ಹಾಗೂ ಜಿಲ್ಲೆಯ ಬಹುಮುಖ್ಯ ಬೇಡಿಕೆಯಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಿ, ಉತ್ತರ ಕನ್ನಡದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಕ್ಕೆ ಕಾಂಗ್ರೆಸ್ ಪಕ್ಷ ಬದ್ಧ ಎಂದು ಹೇಳುತ್ತಾ ಅಚ್ಚುಕಟ್ಟಾಗಿ ಆಯೋಜನೆಗೊಂಡ ಜನಜಾಗೃತಿ ಸಮಾವೇಶದ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಆರ್.ವಿ. ದೇಶಪಾಂಡೆ ಬಿಜೆಪಿಯು ನ್ಯಾಯ ಮಾರ್ಗದಿಂದ ಕೆಲಸ ಮಾಡಿ, ಬಡವರ ಸಮಸ್ಯೆ ದೂರವಾಗಿಸಿ ಅಧಿಕಾರಕ್ಕೆ ಬರುವ ಯೋಚನೆಯಲ್ಲಿಲ್ಲ. ಕೇವಲ ಪ್ರಚೋದನೆ ಕೊಟ್ಟು ಕೋಮುಗಲಭೆ ಸೃಷ್ಟಿಸಿ ಅಧಿಕಾರಕ್ಕೆ ಬರುವ ಯೋಜನೆಗಳನ್ನು ಮಾಡುತ್ತಿದೆ ಎಂದರು.
ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಐವನ್ ಡಿಸೋಜಾ ಮಾತನಾಡಿ ಈ ಜನಜಾಗೃತಿ ಸಮಾವೇಶವು, ಸುಳ್ಳು ಹೇಳುವರ ವಿರುದ್ಧ, ಜಾತಿ ಮತವೆಂಬ ದ್ವೇಷ ಬೀಜ ಬಿತ್ತಿ ಸಮಾಜವನ್ನು ಒಡೆಯುವವರ ವಿರುದ್ದವಾಗಿದೆ ಎಂದರು.
ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮಾತನಾಡಿ, ಈ ಬೃಹತ್ ಸಮಾವೇಶಕ್ಕೆ ಸಾರ್ವಜನಿಕರು ನಿರೀಕ್ಷೆ ಮೀರಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಒಟ್ಟಾರೆಯಾಗಿ ಜಿಲ್ಲೆಯ ವಿವಿಧ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಸಾರ್ವಜನಿಕರು, ಕಾರ್ಯಕರ್ತರಿಂದಾಗಿ ಕಾರ್ಯಕ್ರಮ ಯಶಸ್ವಿಗೊಂಡಿತು. ಆಗಮಿಸಿದ ಎಲ್ಲರಿಗೂ ಆಸನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಊಟದ ವ್ಯವಸ್ಥೆಯನ್ನೂ ಏರ್ಪಡಿಸಲಾಗಿತ್ತು.
ಸಭೆಯಲ್ಲಿ ಕಾಂಗ್ರೇಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ್, ಪ್ರಮುಖರಾದ ಮಧು ಬಂಗಾರಪ್ಪ, ಸ್ಹ್.ಟಿಅಸಕ . ಖಾದರ್, ಮಾಜಿ ಶಾಸಕರಾದ ಸತೀಶ್ ಸೈಲ್,ಮಂಕಾಳ ವೈದ್ಯ ಮಾಜಿ ಶಾಸಕಿ ಶಾರದಾ ಶೆಟ್ಟಿ, ಮಾಜಿ ಶಾಸಕ ಜೆ.ಡಿ.ನಾಯ್ಕ , ಭಟ್ಕಳದ ಎಂ.ಎಲ್.ಎ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಶ್ರೀಧರ್ ನಾಯ್ಕ ಕೈಕಿಣಿ, ಜಿಲ್ಲೆಯ ವಿವಿದ ತಾಲೂಕ ಕಾಂಗ್ರೆಸ್ ಮುಖಂಡರು, ಸಾವಿರಾರು ಕಾರ್ಯಕರ್ತರು ಹಾಜರಿದ್ದರು..