ಡಿ. ೧೦ ರಂದು ರಾಜ್ಯಮಟ್ಟದ ಅರಣ್ಯವಾಸಿಗಳನ್ನ ಉಳಿಸಿ ರ‍್ಯಾಲಿ;
ಐತಿಹಾಸಿಕ ಜಾಥವನ್ನಾಗಿ ಸಂಘಟಿಸಲು ತಿರ್ಮಾನ- ರವೀಂದ್ರ ನಾಯ್ಕ.
ಶಿರಸಿ: ಅರಣ್ಯವಾಸಿಗಳ ಸಮಸ್ಯೆ ಸಮಗ್ರ ಕ್ರೂಢೀಕರಿಸಿ ಅರಣ್ಯವಾಸಿಗಳ ಹಿತ ಕಾಪಾಡುವ ಮತ್ತು ಭೂಮಿ ಹಕ್ಕಿಗೆ ಅಗ್ರಹಿಸಿ ಡಿಸೆಂಬರ್ ೧೦ ರಂದು ಶಿರಸಿಯಲ್ಲಿ ರಾಜ್ಯಮಟ್ಟದ ಬೃಹತ್ ಅರಣ್ಯವಾಸಿಗಳನ್ನ ಉಳಿಸಿ ರ‍್ಯಾಲಿಯನ್ನು ಐತಿಹಾಸಿಕ ಜಾಥವನ್ನಾಗಿ ಸಂಘಟಿಸಲು ಹೋರಾಟಗಾರರ ವೇದಿಕೆಯು ತಿರ್ಮಾನಿಸಿದೆ.
ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅಧ್ಯಕ್ಷತೆಯಲ್ಲಿ ಇಂದು ಶಿರಸಿಯ ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ ಜರುಗಿದ ಸಭೆಯಲ್ಲಿ ಮೇಲಿನಂತೆ ತಿರ್ಮಾನಿಸಲಾಯಿತು.
ಅರಣ್ಯವಾಸಿಗಳ ಸಮಸ್ಯೆಗಳಿಗೆ ಕಾನೂನಾತ್ಮಕ ಪರಿಹಾರ ನೀಡುವಲ್ಲಿ ಉಂಟಾದ ವೈಫಲ್ಯದಿಂದ ಇಂದು ಅರಣ್ಯವಾಸಿಗಳು ಅತಂತ್ರರಾಗುವ ಸಂದರ್ಭ ಬಂದೊದಗಿದೆ. ಸಂಘಟನಾತ್ಮಕ ಮತ್ತು ಕಾನೂನಾತ್ಮಕ ಹೋರಾಟ ಮುಂದುವರೆಸುವ ಹಿನ್ನೆಲೆಯಲ್ಲಿ ಅರಣ್ಯವಾಸಿಗಳನ್ನ ಉಳಿಸಿ ಜಾಥ ಸಂಘಟಿಸಲಾಗಿದ್ದು ರಾಜ್ಯದ ೧೬ ಜಿಲ್ಲೆಗಳಿಂದ ಅರಣ್ಯವಾಸಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ರವೀಂದ್ರ ನಾಯ್ಕ ಹೇಳಿದರು.
ಸಭೆಯಲ್ಲಿ ಕೃಷ್ಣ ಮರಾಠಿ ಮಂಜಗುಣಿ, ಎಮ್ ಆರ್ ನಾಯ್ಕ ಕಂಡ್ರಾಜಿ, ದೇವರಾಜ ಮರಾಠಿ ಬಂಡಲ, ಎಮ್ ಕೆ ನಾಯ್ಕ ಕಂಡ್ರಾಜಿ, ನೆಹರೂ ನಾಯ್ಕ ಬಿಳುರೂ, ಇಬ್ರಾಹಿಂ ಗೌಡಳ್ಳಿ, ದುಗ್ಗು ಮರಾಠಿ ಔಡಾಳ ಮುಂತಾದವರು ಉಪಸ್ಥಿತರಿದ್ದರು.
ಪ್ರಬಲ ಹೋರಾಟಕ್ಕೆ ನಿರ್ಧಾರ:
ಸುಫ್ರೀಂ ಕೋರ್ಟನಲ್ಲಿ ಅರಣ್ಯವಾಸಿಗಳ ಅರಣ್ಯ ಭೂಮಿ ಹಕ್ಕಿಗೆ ಸಂಬAಧಿಸಿ ಅಂತಿಮ ವಿಚಾರಣೆಯ ಹಿನ್ನೆಲೆಯಲ್ಲಿ ಹಾಗೂ ಅರಣ್ಯವಾಸಿಗಳ ಪರವಾಗಿ ಸರಕಾರ ಕ್ರಮ ಜರುಗಿಸುವ ಅವಶ್ಯಕತೆ ಇರುವುದರಿಂದ ಪ್ರಬಲ ಹೋರಾಟ ಮುಂದುವರೆಸಲು ಸಭೆ ತಿರ್ಮಾನಿಸಿತು ಎಂದು ರವೀಂದ್ರ ನಾಯ್ಕ ತಿಳಿಸಿದರು.