ವಿದ್ಯಾರ್ಥಿನಿ ಜತೆ ಅನುಚಿತವಾಗಿ ವರ್ತಿಸಿದ ಕ್ಯಾಬ್ ಡ್ರೈವರನ ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು
ಕಡೂರು-ವಿದ್ಯಾರ್ಥಿನಿ ಜತೆ ಅನುಚಿತವಾಗಿ ವರ್ತಿಸಿದ ಕ್ಯಾಬ್ ಚಾಲಕನೊರ್ವನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಘಟನೆ ಜಿಲ್ಲೆಯ ಕಡೂರು ತಾಲೂಕಿನ
ಸಖರಾಯಪಟ್ಣಣದ ಸಿದ್ದರಹಳ್ಳಿಯಲ್ಲಿ ನಡೆದಿದೆ.
ಗ್ರಾಮಸ್ಥರಿಂದ ಚಾಲಕ ರಾಜಪ್ಪನನ್ನ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಚಾಲಕ ರಾಜಪ್ಪನ ಮೇಲೆ ಪೋಸ್ಕೋ ಕೇಸು ದಾಖಲಾಗಿದೆ. ಕ್ಯಾಬ್ ನಲ್ಲಿ ಕಡೂರಿನಿಂದ ಸಿದ್ದರಹಳ್ಳಿಗೆ ಶಿಕ್ಷಕಿಯರನ್ನ ರಾಜಪ್ಪ ಕರೆದು ತರುತ್ತಿದ್ದ. ಬೆಳಗ್ಗೆಯಿಂದ ಸಂಜೆವರೆಗೂ ಶಾಲೆ ಬಳಿಯೇ ಇರುತ್ತಿದ್ದ ರಾಜಪ್ಪ.
ಸಖರಾಯಪಟ್ಣಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.