ಅಕ್ರಮ ಮಧ್ಯ* *ಮಾರಾಟದಿಂದ ರೋಸಿ ಹೋದ*
*ಗ್ರಾಮಸ್ಥರು…!*
*ಎಷ್ಟು ಬಾರಿ ಮನವಿ* *ಮಾಡಿದರು ಅಕ್ರಮ ಮಧ್ಯ*
*ತಡೆಯದೆ ಕಣ್ಮುಚ್ಚಿ ಕುಳಿತ ತೀರ್ಥಹಳ್ಳಿ ಅಬಕಾರಿ ಇಲಾಖೆ..!*
*ಸರ್ಕಾರ,ಇಲಾಖೆ, ಜನಪ್ರತಿನಿಧಿಗಳ ಮೇಲೆ ನಂಬಿಕೆ ಕಳೆದುಕೊಂಡ ನೊಂದ ಗ್ರಾಮಸ್ಥರಿಂದ ದೇವರ ಮೊರೆ..!*
*ದೇವರ ಸನ್ನಿಧಾನದಲ್ಲಿ ಅಕ್ರಮ ಮಧ್ಯ ಮಾರಲ್ಲ ಎಂದು ಪ್ರಮಾಣ…!*
*ರಾಜ್ಯದ ಗೃಹ ಸಚಿವರ ಕ್ಷೇತ್ರದಲ್ಲೊಂದು ವಿಚಿತ್ರ ಘಟನೆ…!*
*ತೀರ್ಥಹಳ್ಳಿ ಮಂಜು✍️*
*9108594842*
ತೀರ್ಥಹಳ್ಳಿ:- ರಾಜ್ಯದ ಪ್ರಭಾವಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಸ್ವಕ್ಷೇತ್ರದಲ್ಲಿ ಪ್ರತಿ ಹಳ್ಳಿ, ಪಟ್ಟಣದ ಕೆಲವು ದಿನಸಿ ಅಂಗಡಿ, ಚಿಕನ್ ಸ್ಟಾಲ್, ಹೋಟೆಲ್ ಗಳಲ್ಲಿ ಅಕ್ರಮ ಮಧ್ಯ ಮಾರಾಟ ವ್ಯಾಪಕವಾಗಿ ಮಾರಾಟವಾಗುತ್ತಿದ್ದು,
ಅನೇಕ ಬಾರಿ ಹೋಂ ಮಿನಿಸ್ಟರ್ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮಧ್ಯದ ಬಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಬಕಾರಿ ಇಲಾಖೆಗೆ ಸೂಚನೆ ಕೊಡುತ್ತಿದ್ದರು ಅಬಕಾರಿ ಇಲಾಖೆ ಅಧಿಕಾರಿಗಳು ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಯಾಕೆಂದರೆ ಈ ಅಕ್ರಮ ಮಧ್ಯ ಮಾರಾಟದ ಹಿಂದೆ ಅಮಿತೋತ್ಸವದ ಕೆಲವು ಅಬಕಾರಿ ಅಧಿಕಾರಿಗಳಿಗೆ ಜಣಜಣ ಕಾಂಚಾಣವಿದೆ.
ಯಾರ ಬಡವರ ಸಂಸಾರ ಬೀದಿಗೆ ಬಿದ್ದು, ವಿದ್ಯಾರ್ಥಿಗಳ ಭವಿಷ್ಯ ಹಾಳಾದರೇನು ಇವರ ಜೋಬು ಬರ್ತಿಯಾದರೆ ಸಾಕು ಎಂಬುವ ಹಣದ
ಹಪಹಪಿ ಭ್ರಷ್ಟ ಅಧಿಕಾರಿಗಳು ಇರುವ ತನಕ ಮದ್ಯ ಮಾರಾಟಕ್ಕೆ ಕಡಿವಾಣ ಬಿಡುವುದಿಲ್ಲ,
ಹಾಗೆಯೇ ಮಂಡಗದ್ದೆ ಸಿಂಗನ ಬಿದ್ರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹವ್ಯಕ್ತವಾಗಿ ಅಕ್ರಮ ಮಧ್ಯ ಮಾರಾಟ ನಡೆಯುತ್ತಿದ್ದು ಅನೇಕ ಬಾರಿ ಗ್ರಾಮಸ್ಥರು, ವಿದ್ಯಾರ್ಥಿಗಳು, ಮಹಿಳೆಯರು, ಗ್ರಾಮ ಪಂಚಾಯಿತಿ ಆಡಳಿತ, ಅಕ್ರಮ ಮಧ್ಯ ಮಾರಾಟ ತಡೆಯುವಂತೆ
ಮನವಿ ಮಾಡಿಕೊಂಡು ಗ್ರಾಮ ಸಭೆಗಳಲ್ಲಿ ಹೇಳಿದರು ಅಕ್ರಮ ಮಧ್ಯ ಮಾರಾಟಕ್ಕೆ ತಡಿಯುವಲ್ಲಿ ತೀರ್ಥಹಳ್ಳಿ ಅಬಕಾರಿ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದು,
ಮೊನ್ನೆ ದಿನ ಗ್ರಾಮಸ್ಥರು
ಗ್ರಾಮದ ಆರಾಧ್ಯ ದೇವತೆಯಾದ ನಲ್ಲಿಸರ ಕ್ಯಾಂಪ್ ನಲ್ಲಿರುವ ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಮೊರೆ ಹೋಗಿದ್ದು,
ನಂತರದಲ್ಲಿ ಸಿಂಗನ ಬಿದರೆ ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದ ಕೆಲವರು ದೇವಸ್ಥಾನಕ್ಕೆ ಬಂದು ಪಲ್ಲಕ್ಕಿ, ಹಾಗೂ ಗ್ರಾಮಸ್ಥರ
ಮುಂದೆ ಇನ್ನು ಮುಂದೆ ನಾವು ಮಧ್ಯ ಮಾರಾಟ ಮಾಡುವುದಿಲ್ಲ ಎಂದು ಪ್ರಮಾಣ ಮಾಡಿದ್ದಾರೆ.
ಒಟ್ಟಾರೆ ರಾಜ್ಯದ ಗೃಹ ಸಚಿವರ ಸ್ವಕ್ಷೇತ್ರ ತೀರ್ಥಹಳ್ಳಿಯಲ್ಲಿ ಅಕ್ರಮ ಮಧ್ಯ ಮಾರಾಟಕ್ಕೆ ತಡೆಗೆ ಸರ್ಕಾರದ ಅಬಕಾರಿ ಇಲಾಖೆ ಅಧಿಕಾರಿಗಳು ವಿಫಲವಾಗಿದ್ದು,
ಸರ್ಕಾರದ ಮೇಲೆ ನಂಬಿಕೆ ಕಳೆದುಕೊಂಡ
ಗ್ರಾಮಸ್ಥರು ಇದೀಗ ದೇವರ ಮೊರೆ ಹೋಗಿ ಸಮಸ್ಯೆ ಬಗೆಹರಿಸಿಕೊಂಡಿರುವುದು ನಿಜಕ್ಕೂ ಅಧಿಕಾರಿಗಳ ಈ ಕರ್ತವ್ಯ ಲೋಪ, ಭ್ರಷ್ಟಾಚಾರ ತನದ ಹಪಹಪ್ಪಿಗೆ ಆಡಳಿತ ನಡೆಸುವವರು ತಲೆತಗ್ಗಿಸುವ ಪರಿಸ್ಥಿತಿ ನಿರ್ಮಾಣವಾಗಿರುವುದು ನಿಜಕ್ಕೂ ದುರಂತವೇ
ಇನ್ನಾದರೂ ಹೊದ್ದು ಮಲಗಿರುವ ತೀರ್ಥಹಳ್ಳಿ ಅಬಕಾರಿ ಇಲಾಖೆ ಅಧಿಕಾರಿಗಳ
ಕರ್ತವ್ಯ ಲೋಪಕ್ಕೆ ಅಕ್ರಮವಾಗಿ ನಡೆಯುತ್ತಿರುವ ಮಧ್ಯ ಮಾರಾಟದ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗುವಂತೆ ಸಚಿವರು ಗಮನ ಹರಿಸುವಂತೆ ಮಾಡುತ್ತಾರ ಕಾದು ನೋಡಬೇಕಿದೆ.