ನಿಶ್ಚಿತ ಪಿಂಚಣಿಗೆ ಎನ್‍ಪಿಎಸ್ ನೌಕರರ ಸಂಘ ಒತ್ತಾಯ ಡಿ.19ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ಚಲೋ: ನಿಂಗರಾಜು
ನಾಗಮಂಗಲ: ಸರ್ಕಾರ ಜಾರಿಗೆ ತಂದಿರುವ ಹೊಸ ಪಿಂಚಣಿ ಯೋಜನೆ(ಎನ್‍ಪಿಎಸ್) ರದ್ದುಗೊಳಿಸಿ ನಿಶ್ಚಿತ ಪಿಂಚಣಿ ಯೋಜನೆಯನ್ನು ಮತ್ತೆ ಜಾರಿಗೆ ತರುವಂತೆ ಒತ್ತಾಯಿಸಿ ಡಿ.19ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ಚಲೋ ನಡೆಸಲಾಗುವುದು ಎಂದು ಎನ್‍ಪಿಎಸ್ ನೌಕರರ ಸಂಘದ ಅಧ್ಯಕ್ಷ ನಿಂಗರಾಜು ತಿಳಿಸಿದರು.
ಅವರು ನಾಗಮಂಗಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 1-6-2006 ರಿಂದ ಸರ್ಕಾರಿ ಸೇವೆಗೆ ಸೇರಿರುವ 2.5ಲಕ್ಷಕ್ಕೂ ಹೆಚ್ಚು ನೌಕರರು ಸರ್ಕಾರದ ಹೊಸ ಪಿಂಚಣಿ ಯೋಜನೆಗೆ ಸೇರುವುದರಿಂದ ಅವರಿಗೆ ನಿವೃತ್ತಿಯ ನಂತರ ಅನ್ಯಾಯವಾಗಲಿದೆ. ಅವರಿಗೆ ನಿವೃತ್ತಿಯ ನಂತರ ಮಾಸಿಕ 2 ರಿಂದ 4 ಸಾವಿರವಷ್ಟೇ ಪಿಂಚಣಿ ಸಿಗುತ್ತಿದ್ದು, ನೌಕರರು ನಿವೃತ್ತಿ ಪಡೆದ ನಂತರ ಇಷ್ಟು ಕನಿಷ್ಟ ಪಿಂಚಣಿಯಲ್ಲಿ ಜೀವನ ನಡೆಸಲು ಸಾಧ್ಯವಿಲ್ಲ. ಒಂದ ಮಾತ್ರೆಯನ್ನು ತೆಗೆದುಕೊಳ್ಳಲಾಗದ ಈ ಯೋ ಜನೆಯಿಂದ ನೌಕರರಿಗೆ ಅನ್ಯಾಯ ವಾಗಲಿದೆ.
ಈ ಹಿಂದಿನ ಹಳೆ ಪಿಂಚಣಿ ಹೋಜನೆಯನ್ನು ಜಾರಿಗೆ ತರಬೇಕುಎಂದುಸರ್ಕಾರವನ್ನುಒತ್ತಾಯಿಸಿಡಿ.19ರಂದು ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಕರೆ ನೀಡಲಾಗಿದೆ ಎಂದರು.
ಪ್ರಧಾನ ಕಾರ್ಯದರ್ಶಿ ಮನುಕುಮಾರ್ ಮಾತನಾಡಿ, ಹೊಸ ಪಿಂಚಣಿ ಯೋಜನೆಯಡಿ ನೌಕರರು ಶೇ.10ರಷ್ಟು ಹಣವನ್ನು ಹಾಗೂ ಸರ್ಕಾರ ಶೇ.14ರಷ್ಟು ಹಣವನ್ನು ಸೇರಿಸಿ ಅದನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸುತ್ತಾರೆ. ಈ ರೀತಿ ಮಾಡುವುದು ಒಂದು ಜೂಜಾಟವಾಗಿದ್ದು, ಅದರಿಂದ ಬರುವ ಹಣದಲ್ಲಿ ನಿವೃತ್ತ ನೌಕರರಿಗೆ 800, ಸಾವಿರ, ಎರಡು ಸಾವಿರ ಪಿಂಚಣಿ ನೀಡಲಾಗುತ್ತಿದೆ. ಸರ್ಕಾರದ ನಿವೃತ್ತ ಯೋದರೊಬ್ಬರು 4300 ರು. ಪಿಂಚಣಿ ಪಡೆದಿದ್ದೆ ಹೆಚ್ಚಾಗಿದ್ದು, ನಿವೃತ್ತಿಯ ನಂತರ ಇಷ್ಟು ಕನಿಷ್ಟ ಹಣದಲ್ಲಿ ಜೀವನ ನಡೆಸಲು ಸಾಧ್ಯವೆ? ಸರ್ಕಾರದ ಸೇವೆಯನ್ನು ಹಗಲು-ರಾತ್ರಿ ಮಾಡಿದ ನೌಕರರಿಗೆ ಕೊನೆಗಾಲದಲ್ಲಿ ಈ ರೀತಿ ಅನಿಶ್ಚಿತತೆಗೆ ತಳ್ಳುವುದು ಸರಿಯೆ? ಎಂದು ಪ್ರಶ್ನಿಸಿದ ಅವರು, ಸರ್ಕಾರ ಮತ್ತೆ ನಿಶ್ಚಿತ ಪಿಂಚಣಿ ಯೋಜೆನೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಡಿ.19ರಂದು ನಡೆಯುವ ಫ್ರೀಡಂ ಪಾರ್ಕ ಚಲೋ ಹೋರಾಟದ ಪೂರ್ವಭಾವಿ ಸಭೆ ಡಿ.3ರಂದು ನಾಗಮಂಗಲ ಪಟ್ಟಣದ ಶಿಕ್ಷಕರ ಭವನದಲ್ಲಿ ಮದ್ಯಾಹ್ನ 2 ಗಂಟೆಗೆ ನಡೆಯಲಿದ್ದು, ತಾಲೂಕಿನ ಎಲ್ಲಾ ಸರ್ಕಾರಿ ನೌಕರರು ಹಾಜರಾಗಬೇಕೆಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಎನ್‍ಪಿಎಸ್ ನೌಕರರ ಸಂಘದ ಗೌರವ ಅಧ್ಯಕ್ಷೆ ಪೇಮ, ಖಜಾಂಚಿ ಸಂತೋಷ್, ಶ್ರೀನಿವಾಸ್, ದಿಲಿಪ್, ಎಸ್.ಆರ್.ಮಂಜು ಸೇರಿದಂತೆ ಅನೇಕರು ಹಾಜರಿದ್ದರು