ಕೆಲೂರಿನ ಶ್ರೀ ಗುರು ಮಂಟೇಶ್ವರ ದೇವಸ್ಥಾನದಲ್ಲಿ ಪೌರ್ಣಿಮೆಯಂದು ಧರ್ಮಚಿಂತನ ಕಾರ್ಯಕ್ರಮ
ಕೆಲೂರ:ಇಲಕಲ್ಲ ತಾಲೂಕಿನ ಕೆಲೂರ ಗ್ರಾಮದ ಶ್ರೀ ಗುರು ಮಂಟೇಶ್ವರ ದೇವಸ್ಥಾನದಲ್ಲಿ ದಿನಾಂಕ 08-12-2022ರ ಗುರುವಾರ ಹೊಸ್ತಿಲು ಹುಣ್ಣಿಮೆ ದಿನದಂದು ನೆಡೆಯುವ ಪೌರ್ಣಿಮಾ ಧರ್ಮಚಿಂತನ ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಪೂಜ್ಯ ಶ್ರೀ ಷ ಬ್ರ ಡಾ.ಮಲಯ ಶಾಂತಮುನಿ ದೇಶಿಕೇಂದ್ರಶಿವಾಚಾರ್ಯ ಮಹಾಸ್ವಾಮಿಗಳವರು ವಹಿಸಿ ಆಶೀರ್ವಚನ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಈ ತಿಂಗಳು ಹುಟ್ಟುಹಬ್ಬ ಇದ್ದರೆ ಅವರ ಹುಟ್ಟುಹಬ್ಬವನ್ನು ಕೂಡಾ ಆಚರಣೆ ಮಾಡಲಾಗುವುದು. ಆಸಕ್ತಿಯುಳ್ಳವರು ತಮ್ಮ ಹೆಸರನ್ನು ಒಂದು ಭಾವಚಿತ್ರದೊಂದಿಗೆ ನೋಂದಾಯಿಸಿಕೊಳ್ಳಲು ಈ ಮೂಲಕ ಗುರುಮಂಟೇಶ್ವರ ಧರ್ಮವಾಹಿನಿಯ ಸಂಘಟಕರು ವಿನಂತಿಸಿಕೊಂಡಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಆಗಮಿಸಿ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಬೇಕಾಗಿ ಶ್ರೀ ಗುರುಮಂಟೇಶ್ವರ ಧರ್ಮವಾಹಿನಿಯ ಮೂಲಕ ವಿನಂತಿ.ಇದೆ ಸಂದರ್ಭದಲ್ಲಿ ದಾಸ ಶ್ರೇಷ್ಠ ಶ್ರೀ ಭಕ್ತ ಕನಕದಾಸರ ಜಯಂತೋತ್ಸವ ಆಚರಣೆ ಮಾಡಲಾಗುವುದು.