ಉತ್ತರ ಕನ್ನಡ ಜಿಲ್ಲೆ ಇಬ್ಬಾಗ ಮಾಡುವ ಕುರಿತು ನಾನು ಯಾವತ್ತು ಪ್ರಸ್ತಾಪ ಮಾಡಿಲ್ಲ- ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್
ಕಾರವಾರ-ಉತ್ತರ ಕನ್ನಡ ಜಿಲ್ಲೆ ಇಬ್ಬಾಗ ಮಾಡುವ ಕುರಿತು ನಾನು ಯಾವತ್ತು ಪ್ರಸ್ತಾಪ ಮಾಡಿಲ್ಲ, ಈ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ, ಜಿಲ್ಲೆಯ ಇಬ್ಬಾಗದ ಬಗ್ಗೆ ಮಾತನಾಡಲು ನಾನು ಜಿಲ್ಲಾ ಉಸ್ತುವಾರಿ ಸಚಿವನೂ ಅಲ್ಲ, ಜವಬ್ದಾರಿ ಸಹ ನನ್ನದಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.
ಪಟ್ಟಣದಲ್ಲಿ ಶನಿವಾರ ನಡೆದ ರಾಜ್ಯ ನೋಟರಿ ಸಮಾವೇಶದಲ್ಲಿ ಪಾಲ್ಗೊಂಡ ನಂತರ ಶಿರಸಿ ಪ್ರತ್ಯೇಕ ಜಿಲ್ಲೆ ವಿಚಾರದ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವರಾಮ ಹೆಬ್ಬಾರ ಜಿಲ್ಲೆಯ ಶಾಸಕನಾಗಿ ನಾನು ಮಾತನಾಡುವುದು ಅವಶ್ಯಕತೆ ಇದೆ. ಜಿಲ್ಲೆ ಇಬ್ಬಾಗದ ಕುರಿತು ಬುದ್ಧಿ ಜೀವಿಗಳ ಜೊತೆಗೆ, ನಮ್ಮೆಲ್ಲ ಶಾಸಕರ ಜೊತೆ ಚರ್ಚೆ ಮಾಡುತ್ತೆನೆ ಎಂದಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಎಲ್ಲರ ಅಭಿಮತ ಮುಖ್ಯ.ಕಾಲಕ್ಕೆ ತಕ್ಕಂತೆ ಬದಲಾವಣೆ ಆಗಬೇಕು, ಆದರೆ ಎಲ್ಲರ ಅಭಿಪ್ರಾಯದೊಂದಿಗೆ ಆಗಬೇಕು. ಶಿರಸಿ ಪ್ರತ್ಯೇಕ ಜಿಲ್ಲೆ ಬಗ್ಗೆ ಕಾಗೇರಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.
ಇನ್ನು ವಿಶ್ವನಾಥ ಅವರು ಬಿಜೆಪಿ ತೊರೆದು ಬೇರೆ ಪಕ್ಷ ಸೇರುತ್ತಿರುವ ವಿಚಾರ, ಕುರಿತು ಪ್ರತಿಕ್ರಿಯೆ ನೀಡಿದ ಹೆಬ್ಬಾರ್, ಈ ವಿಷಯದ ಬಗ್ಗೆ ನನಗೆ ಗೊತ್ತಿಲ್ಲ, ಪತ್ರಿಕೆಯಲ್ಲಿ ಓದಿದ್ದೆನೆ. ವಿಶ್ವನಾಥ್ ನನ್ನ ಸ್ನೇಹಿತರು ಅವರೊಂದಿಗೆ ಈ ವಿಚಾರದ ಕುರಿತು ನಾನು ಮಾತನಾಡಿಲ್ಲ. ಅವರ ಮನವೊಲಿಸಲು ನಾನು ಯಾವುದೇ ಮುಂದಾಳತ್ವನ್ನ ವಹಿಸಿಕೊಳ್ಳಲ್ಲ. ಅವರು ಹಿರಿಯರು ನಿಶ್ಚಿತವಾಗಿ ಅವರೊಂದಿಗೆ ಚರ್ಚೆ ಮಾಡುತ್ತೆವೆ ಎಂದಿದ್ದಾರೆ.