ಮೂವರು ವಿವಾಹಿತ ಶಿಕ್ಷಕರ ನಡುವಿನ ಪ್ರೀತಿಯ ತಿಕ್ಕಾಟಕ್ಕೆ ಬಲಿಯಾದ ಏನು ಅರಿಯದ ಬಡ ವಿದ್ಯಾರ್ಥಿ
ಗದಗ – ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಅತಿಥಿ ಸಹ ಶಿಕ್ಷಕಿ ಹಾಗೂ ವಿದ್ಯಾರ್ಥಿಯ ಮೇಲೆ ಅತಿಥಿ ಶಿಕ್ಷಕನೊಬ್ಬ ಮನಬಂದಂತೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರು, ಆರೋಪಿ ಅತಿಥಿ ಶಿಕ್ಷಕ ಮುತ್ತಪ್ಪನನ್ನು ಬಂಧಿಸಿದ್ದಾರೆ.
ಇನ್ನೂ ಗಂಭೀರವಾಗಿ ಗಾಯಗೊಂಡ ಗೀತಾ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಈ ಮಧ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹಲ್ಲೆಗೊಳಗಾದ ಅತಿಥಿ ಶಿಕ್ಷಕಿ ಗೀತಾ, ಅತಿಥಿ ಶಿಕ್ಷಕ ಮುತ್ತಪ್ಪ ಹಡಗಲಿ ಜತೆ ಸಲುಗೆಯಿಂದ ಇದ್ದಳು. ಇನ್ನೊಬ್ಬ ಅತಿಥಿ ಶಿಕ್ಷಕ ಸಂಗನಗೌಡ ಪಾಟೀಲ್ ಜತೆಗೂ ಈಕೆ ಸಲುಗೆಯಿಂದಿದ್ದಳು.
ಆದರೆ ಈಕೆ ಸಂಗನಗೌಡ ಪಾಟೀಲ್ ಜೊತೆ ಸಲುಗೆಯಿಂದ ಇರುವುದು ಮುತ್ತಪ್ಪನಿಗೆ ಇಷ್ಟವಿರಲಿಲ್ಲ. ಇನ್ನು ಇತ್ತೀಚೆಗೆ ಶೈಕ್ಷಣಿಕ ಪ್ರವಾಸ ಹೋದ ವೇಳೆ ಸಂಗನಗೌಡ ಹಾಗೂ ಗೀತಾ ಸಲುಗೆಯನ್ನು ಗಮನಿಸಿದ್ದ ಮುತ್ತಪ್ಪ, ಅವರಿಬ್ಬರನ್ನೂ ಕೊಲೆ ಮಾಡಲು ಸಂಚು ಹೂಡಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ರೊಚ್ಚಿಗೆದ್ದ ಆತ ಶಾಲೆಯಲ್ಲಿ ಈ ದುಷ್ಕೃತ್ಯ ಎಸಗಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.
ವಿಪರ್ಯಾಸವೆಂದರೆ ಈ ಮೂವರೂ ವಿವಾಹಿತರು ಇನ್ನೂ ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.