ಗೃಹ ಸಚಿವರ ತವರೂರಲ್ಲಿ ಕಾರ್ಮಿಕ ಇಲಾಖೆಯ ಕರ್ಮಕಾಂಡ…!*
*ಶಾಲೆಯ ಮಕ್ಕಳಿಗೆ ಕಿಟ್ ಬಂದು ತಿಂಗಳುಗಟ್ಟಲೆ ಕಳೆದಿದ್ದರೂ ವಿಲೇವಾರಿ ಮಾಡದೆ ಬೇಜವಾಬ್ದಾರಿ..!*
*ಸರ್ಕಾರದ ಯೋಜನೆ ಅನುಷ್ಠಾನಗೊಳಿಸುವುದು ಹೀಗೆಯೇ..!*
*ಜಿಲ್ಲಾಧಿಕಾರಿಗಳೇ ಸರ್ಕಾರದ ಯೋಜನೆಗಳು ಅರ್ಹ ಪಲಾನುಭವಿಗಳಿಗೆ ಸರಿಯಾಗಿ ಸಿಗುತ್ತಿಲ್ಲ ಈ ಬಗ್ಗೆ ವಿಶೇಷ ಗಮನ ಹರಿಸಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿ..!*
*ತೀರ್ಥಹಳ್ಳಿ ಮಿತ್ರ ಮಂಜು✍️*
*9108594842*
ತೀರ್ಥಹಳ್ಳಿ:- ತಾಲೂಕಿನ ಕಾರ್ಮಿಕ ಇಲಾಖೆಗೆ ಅದ್ಯಾವ ಗ್ರಹಣ ಬಿಡದಿದೆಯೋ ಗೊತ್ತಿಲ್ಲ
ಸದಾಕಾಲ ಒಂದಲ್ಲೊಂದು ಕರ್ತವ್ಯ ಲೋಪದಲ್ಲಿ ಮುಳುಗಿರುತ್ತದೆ,
ಇತ್ತೀಚಿಗೆ ತೀರ್ಥಹಳ್ಳಿ ಕಾರ್ಮಿಕ ಇಲಾಖೆಯಲ್ಲಿ ಲಂಚವತಾರ ಹೆಚ್ಚಾಗಿದ್ದು ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಬೇಕಾದರೆ ಎಲ್ಲದಕ್ಕೂ ಹಣ ಕೊಡಬೇಕು ಎಂದು ಕಾರ್ಮಿಕರು ತೀರ್ಥಹಳ್ಳಿ ಕಾರ್ಮಿಕ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿ,
ರಾಘವೇಂದ್ರ ಎನ್ನುವ ಕಾರ್ಮಿಕ ಇಲಾಖೆ ಸಿಬ್ಬಂದಿಯನ್ನ ವಜಾ ಗೊಳಿಸಲಾಗಿತ್ತು,
ಇದೀಗ ಮತ್ತೆ ಕಾರ್ಮಿಕ ಇಲಾಖೆ ತನ್ನ ಬೇಜವಾಬ್ದಾರಿ ಪ್ರದರ್ಶಿಸುತ್ತಿದ್ದು ರಾಜ್ಯ ಸರ್ಕಾರ ಇತ್ತೀಚಿಗೆ ಒಂದರಿಂದ ಆರನೇ ತರಗತಿಯ ಶಾಲಾ ಮಕ್ಕಳಿಗೆ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ನೆರವಾಗುವ
ನಿಟಿನಲ್ಲಿ ಕಾರ್ಮಿಕ ಇಲಾಖೆಯ ನೊಂದಾಯಿತ ಕುಟುಂಬದ ಮಕ್ಕಳಿಗೆ ಕಿಟ್ ನೀಡಿದ್ದು ರಾಜ್ಯದ ಸರ್ಕಾರದ ಸಚಿವ ಸಂಪುಟದಲ್ಲಿ ಸಚಿವರಾಗಿರುವ
ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಸ್ವಕ್ಷೇತ್ರದಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳು ಎಷ್ಟು ಬೇಜವಾಬ್ದಾರಿ ಕರ್ತವ್ಯ ಲೋಪ ನಡೆಸುತ್ತಿದ್ದಾರೆ ಎಂದರೆ ಸರ್ಕಾರದಿಂದ ಇ ಕಿಟ್ ಬಂದು ತಿಂಗಳುಗಟ್ಟಲೆ ಕಳೆದಿದ್ದರು ಅದನ್ನ ಕಚೇರಿಯಲ್ಲಿ ಇಟ್ಟುಕೊಂಡು ಕಾರ್ಮಿಕರಿಂದ ವಿರೋಧವಾದ ನಂತರ ನಿನ್ನೆ ಮಂಗಳವಾರ ದಿನ ಅರ್ಧಂಬರ್ಧ ಬಂದವರಿಗೆ ಮಾತ್ರ ಕಟ್ಟು ವಿತರಿಸಿ ಮಾರನೇ ದಿನ ಕಾರ್ಮಿಕರು ಬಂದು ಕೇಳಿದರೆ ಅವರಿಗೆ ಮುಂದಿನ ಮಂಗಳವಾರ ಅಂದರೆ ಒಂದು ವಾರ ಬಿಟ್ಟು ತೆಗೆದುಕೊಂಡು ಹೋಗಿ ಎಂದು ಕಾರ್ಮಿಕ ಇಲಾಖೆ ಸಿಬ್ಬಂದಿ ಹೇಳಿ ವಾಪಸು ಕಳಿಸಿದ್ದಾರೆ,
ಸರ್ಕಾರದ ಜನಪರ ಯೋಜನೆಗಳನ್ನ ಅನುಷ್ಠಾನಕ್ಕೆ ತಂದು, ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕಾದ ಕಾರ್ಮಿಕ ಇಲಾಖೆಯ ಅಧಿಕಾರಿಗಳು
ರಾಜ್ಯದ ಸಚಿವರೊಬ್ಬರ ಕ್ಷೇತ್ರದಲ್ಲಿ ಈ ರೀತಿ ಬೇಜವಾಬ್ದಾರಿ ತೋರುತ್ತಿರುವುದು ನಿಜಕ್ಕೂ ವಿಪರ್ಯಾಸ,
ತಾಲೂಕಿನ ಕಾರ್ಮಿಕ ಇಲಾಖೆಯಲ್ಲಿ ಕಾಯಂ ಹುದ್ದೆಯ ಅಧಿಕಾರಿಗಳಿಲ್ಲದೆ ವರ್ಷಾನುಗಟ್ಟಲೆ ಕಳೆದಿದೆ
ತೀರ್ಥಹಳ್ಳಿಯ ಕಾರ್ಮಿಕ ಇಲಾಖೆಯಲ್ಲಿ ಕಳೆದ ಒಂದು ವರ್ಷಕ್ಕಿಂತ ಹೆಚ್ಚಾಗಿ ಭದ್ರಾವತಿಯ ಕಾರ್ಮಿಕ ಇಲಾಖೆ ಅಧಿಕಾರಿ ಒಬ್ಬರನ್ನ ಹೆಚ್ಚುವರಿಯಾಗಿ ನಿಯೋಜನೆ ಮಾಡಿದ್ದು ಅವರಿಗೆ ಕರ್ತವ್ಯದ ಹೊಣೆಗಾರಿಕೆ ಹೆಚ್ಚಿದೆ,
ಇಲ್ಲಿರುವ ಸ್ಥಳೀಯ ಸಿಬ್ಬಂದಿಗಳ ನಡೆ ಬಗೆ ನೊಂದಾಯಿತ ಕಾರ್ಮಿಕರು ಅ ಸಮಾಧಾನ ವ್ಯಕ್ತಪಡಿಸುತ್ತಿದ್ದು ದಿನದ ಕೆಲಸ ಕಾರ್ಯ ಬಿಟ್ಟು ಸರ್ಕಾರದ ಯೋಜನೆ ಪಡೆಯಲು ಬರುವ ಕಾರ್ಮಿಕರನ್ನು ವಾಪಾಸು ಕಳಿಸುವ ಮನಸಾದರೂ ಇವರಿಗೆ ಹೇಗೆ ಬರುತ್ತದೋ ತಿಳಿಯುವುದಿಲ್ಲ
ಈ ಬಗೆ ಮಾನ್ಯ ಜಿಲ್ಲಾಧಿಕಾರಿಗಳು ವಿಶೇಷವಾಗಿ ಗಮನಹರಿಸಿ ಕಾರ್ಮಿಕ ಇಲಾಖೆಯಲ್ಲಿ ನಡೆಯುತ್ತಿರುವ ಈ ರೀತಿಯ ಕರ್ತವ್ಯ ಲೋಪದ ಹಾಗೂ ಜನರಿಗೆ ತಲುಪಬೇಕಾದ ಸರ್ಕಾರದ ಯೋಜನೆಗಳು ಸರಿಯಾಗಿ ತರಪದಿರುವ ಬಗೆ ವಿಶೇಷ ಗಮನಹರಿಸಿ ಇಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗಿ ಸರ್ಕಾರದ ಯೋಜನೆಗಳು ಜನರಿಗೆ ತಲುಪಿಸುವಂತೆ ಕ್ರಮ ಕೈಗೊಳ್ಳಬೇಕಿದೆ.