. ೧೧ ರಂದು ಶಿರಸಿಯಲ್ಲಿ ಕನ್ನಡ ನಾಡು- ನುಡಿ ನಮನ ;
ಸಾವಿರ ಯುವ ಸಮೋಹದಿಂದ ಪುನೀತ್ ಹಾಡಿಗೆ ಹೇಜ್ಜೆ- ರವೀಂದ್ರ ನಾಯ್ಕ.
ಶಿರಸಿ: ರಾಜ್ಯಮಟ್ಟದಲ್ಲಿಯೇ ಮೂದಲಾಗಿ ಶಿರಸಿಯಲ್ಲಿ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾದ ಕನ್ನಡ ನುಡಿ ನಮನದಲ್ಲಿ ಪುನೀತ್ ರಾಜಕುಮಾರ ನೆನಪಿನ ಕಾರ್ಯಕ್ರಮದಲ್ಲಿ ಸುಮಾರು ಒಂದು ಸಾವಿರ ಯುವಕ, ಯುವತಿಯರು ಪುನೀತ್ ರಾಜಕುಮಾರ ನಟಿಸಿದ ಚಿತ್ರದ ಹಾಡಿಗೆ ಹೇಜ್ಜೆ ಹಾಕುವ ವಿನೂತನ ಕಾರ್ಯಕ್ರಮ ಸಂಘಟಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಸ್ಫಂದನ ಸಾಂಸ್ಕçತಿಕ ಏಕಾಡೆಮಿ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅವರು ಇಂದು ಶಿರಸಿಯ ಏಕಾಡೆಮಿಯ ಕಾರ್ಯಾಲಯದಲ್ಲಿ ಪುನೀತ್ ರಾಜ್ಕುಮಾರ ಅವರ ಭಾವಚಿತ್ರ ಪ್ರದರ್ಶಿಸುತ್ತಾ ನವೆಂಬರ್ ೧೧ ರಂದು ಸಂಘಟಿಸಲಾದ ನುಡಿ ನಮನ ಕಾರ್ಯಕ್ರಮದ ವಿವರಣೆ ನೀಡಿದ ಸಂದರ್ಭದಲ್ಲಿ ತಿಳಿಸಿದರು.
ನೃತ್ಯದಲ್ಲಿ ಸ್ಥಳೀಯ ಯುವ ಸಮೂಹಕ್ಕೂ ಸಾಕಷ್ಟು ಅವಕಾಶ ನೀಡುವ ಉದ್ದೇಶದಿಂದ ಮೂರು ಪ್ರತ್ಯೇಕ ವೇದಿಕೆ ನಿರ್ಮಿಸಿದ್ದು, ಯುವತಿಯರಿಗೆ ಪ್ರತ್ಯೇಕ ವೇದಿಕೆ ಮೀಸಲಿಡಲಾಗಿದೆ ಎಂದು ಅವರು ತಿಳಿಸಿದರು.
ಸಾಂಸ್ಕçತಿಕ ಕಾರ್ಯಕ್ರಮ:
ಬೆಂಗಳೂರು ಪ್ರಖ್ಯಾತ ಗಾಯಕರಿಂದ ಮನರಂಜನೆ, ರಾಜ್ಯದ ಮೂರು ಪ್ರಮುಖ ನೃತ್ಯ ತಂಡದಿAದ ನೃತ್ಯ, ಜನಪದ ಕಲೆ ಪ್ರದರ್ಶನ, ಮಣಿಪುರ ಸ್ಟೀಕ್ ಮತ್ತು ಬೆಂಕಿ ನೃತ್ಯ, ಭರತನಾಟ್ಯ, ಸಮೂಹ ನೃತ್ಯ ಮುಂತಾದ ಕಾರ್ಯಕ್ರಮ ಹಾಗೂ ಜೂನಿಯರ್ ರಾಜಕುಮಾರ ಮನರಂಜಿಸಲಿದ್ದಾರೆ ಮತ್ತು ಪ್ರತಿಭೆಗಳನ್ನು ಪುರಸ್ಕರಿಸಲು ತೀರ್ಮಾನಿಸಲಾಗಿದೆ ಎಂದು ರವೀಂದ್ರ ನಾಯ್ಕ ತಿಳಿಸಿದರು.
ಕಾರ್ಯಕ್ರಮದಲ್ಲಿ ವಾದಿರಾಜ ಪಾವಸ್ಕರ ಲೈಟ್ ತಂತ್ರಜ್ಞ, ಮಂಜು ಶೆಟ್ಟಿ ಮಿಮಿಕ್ರಿ ಕಲಾವಿದ, ಮಹೇಶ್ ಶೆಟ್ಟಿ ನೃತ್ಯ ತರಭೇತುದಾರ, ಕಾರ್ತಿಕ್ ಹಾಡುಗಾರ, ಕಿಶೋರ ನೇತ್ರೇಕರ್ ಸಂಗೀತಗಾರ ಮುಂತಾದವರು ಉಪಸ್ಥಿತರಿದ್ದರು.
ಕಲಾ ತಂಡದ ಜಾಥಾ:
ಜಿಲ್ಲೆಯ ವಿಶೇಷವಾದ ಜಾನಪಥ ಕಲಾತಂಡದೊAದಿಗೆ ಭುವನೇಶ್ವರಿ ಮತ್ತು ಪುನೀತ್ ರಾಜಕುಮಾರ ಸ್ಥಬ್ದ ಚಿತ್ರದೊಂದಿಗೆ ಕಲಾವಿದರು, ಸಾಹಿತಾಸಕ್ತರು ಹಾಗೂ ಪುನೀತ್ ರಾಜ್ಕುಮಾರ ಅಭಿಮಾನಿ ವೃಂದದೊAದಿಗೆ ಅಂದು ಸಂಜೆ ೪:೩೦ ಕ್ಕೆ ಶಿರಸಿಯ ಮಾರಿಕಾಂಬ ದೇವಾಲಯದಿಂದ ಜಾಥಾ ನಗರದ ಪ್ರಮುಖ ಬೀದಿಯಲ್ಲಿ ಸಂಚರಿಸಿ ಸ್ಥಳೀಯ ರಂಗಮAದಿರದಲ್ಲಿ ಸಾಂಸ್ಕçತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವದು ಎಂದು ರವೀಂದ್ರ ನಾಯ್ಕ ಹೇಳಿದರು.