ಆಕಳು ಕರುವಿನ ಮೇಲೆ ಅತ್ಯಾಚಾರ
ಮಾಡಿದ ಯುವಕ ಮುಸ್ಲಿಂ ಇಮ್ತಿಯಾಜ್ ಅರೆಸ್ಟ್
ರಾಯಚೂರು-ಆಕಳು ಕರುವಿನ ಮೇಲೆ ಯುವಕ ಅತ್ಯಾಚಾರ ಎಸಗಿರುವ ವಿಕೃತ ಘಟನೆ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಕಸಬಾ ಲಿಂಗಸಗೂರು ಗ್ರಾಮದಲ್ಲಿ ನಡೆದಿದೆ. ಘಟನೆ ಸಂಬಂಧ ಲಿಂಗಸುಗೂರು ಠಾಣೆ ಪೊಲೀಸರು ಇಮ್ತಿಯಾಜ್ (24)ನನ್ನ ಬಂಧಿಸಿದ್ದಾರೆ.
ವೃತ್ತಿಯಲ್ಲಿ ಅಟೋ ಡ್ರೈವರ್ ಆಗಿದ್ದ ಆರೋಪಿ ಇಮ್ತಿಯಾಜ್, ಯಾವಾಗಲು ತೋಟದ ಮನೆಯಲ್ಲೇ ಮಲಗುತ್ತಿದ್ದ. ನಿನ್ನೆ ಯಾರೂ ಇಲ್ಲದ ವೇಳೆ ಅಮರೇಶ ಎಂಬ ವ್ಯಕ್ತಿಗೆ ಸೇರಿದ್ದ ಆಕಳ ಕರುವಿನ ಕಾಲು ಕಟ್ಟಿ ಹಾಕಿ ಅತ್ಯಾಚಾರ ಎಸಗಿದ್ದಾನೆ. ಸುಮಾರು 7-8 ಆಕಳು ಸಾಕಾಣಿಕೆ ಮಾಡುತ್ತಿದ್ದ ಅಮರೇಶ ಕೊಟ್ಟಿಗೆಯಲ್ಲಿ ಆಕಳು ಕಟ್ಟಿ ಮನೆಗೆ ಹೋದಾಗ ಘಟನೆ ನಡೆದಿದೆ. ಇಮ್ತಿಯಾಜ್ ನ ಪೈಶಾಚಿಕ ಕೃತ್ಯ ಕಣ್ಣಾರೆ ಕಂಡಿದ್ದ ಅಮರೇಶ ಬಳಿಕ ಇಮ್ತಿಯಾಜ್ ನ ಪೊಲೀಸ್ ಠಾಣೆಗೆ ಒಪ್ಪಿಸಿ ದೂರು ನೀಡಿದ್ದಾರೆ. ಸೆಕ್ಷನ್ 377 ಅಡಿಯಲ್ಲಿ ಇಮ್ತಿಯಾಜ್ ವಿರುದ್ಧ ಎಫ್ಐಆರ್ ದಾಖಲಾಗಿದೆ.