ಜ. ೭ ರ ಶಿರಸಿಯಲ್ಲಿನ ಸ್ವಪ್ರೇರಣ ಬಂದ್ಗೆ ಬೆಂಬಲಿಸಿ;
ಅರಣ್ಯವಾಸಿಗಳನ್ನು ಉಳಿಸಿ-ರವೀಂದ್ರ ನಾಯ್ಕ ಮನವಿ
ಶಿರಸಿ: ಅರಣ್ಯವಾಸಿಗಳ ಸಮಸ್ಯೆಗಳಿಗೆ ಸರಕಾರ ನಿರ್ಣಾಯಕ ಪರಿಹಾರ ಒದಗಿಸಲು ಅಗ್ರಹಿಸಿ ಜನವರಿ ೭ ಮುಂಜಾನೆ ೮ ರಿಂದ ೧೨ ಗಂಟೆಯವರೆಗೆ ಅರ್ಧದಿನದ ಸ್ವಪ್ರೇರಣೆ ಬಂದ್ಗೆ ಸಾರ್ವಜನಿಕರು ಬೆಂಬಲಿಸಿ ಅರಣ್ಯವಾಸಿಗಳನ್ನು ಉಳಿಸಬೇಕೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.
ಅವರು ಇಂದು ಶಿರಸಿಯಲ್ಲಿನ ಹೋರಾಟಗಾರರ ವೇದಿಕೆÀಯಲ್ಲಿ ಜನವರಿ ೭ರ ಸ್ವಪ್ರೇರಣೆ ಬಂದ್ಗೆ ಕರೆದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಸುಫ್ರೀಂ ಕೋರ್ಟನಲ್ಲಿ ಅರಣ್ಯ ಹಕ್ಕು ಕಾಯಿದೆಯಲ್ಲಿ ತೀರಸ್ಕಾರವಾಗಿರುವ ಅತಿಕ್ರಮಣದಾರರನ್ನ ಹಂತಹAತವಾಗಿ ಒಕ್ಕಲೆಬ್ಬಿಸಲು ರಾಜ್ಯ ಸರಕಾರ ಪ್ರಮಾಣ ಪತ್ರ ಸಲ್ಲಿಸಿರುವುದು, ಬೆಳಗಾವಿ ವಿಧಾನ ಸಭಾ ಅಧಿವೇಶನದಲ್ಲಿ ನಿರ್ಣಯಿಸಿ ತಿದ್ದುಪಡಿ ಪ್ರಮಾಣ ಪತ್ರ ಸಲ್ಲಿಸಲು ಮತ್ತು ಕಾನೂನು ಬಾಹಿರವಾಗಿ ಜಿಪಿಎಸ್ ಆಧಾರದ ಮೇಲೆ ಅರಣ್ಯ ಅಧಿಕಾರಿಗಳು ಒಕ್ಕಲೆಬ್ಬಿಸುವ ಪ್ರಕ್ರೀಯೆ ಸ್ಥಗಿತಗೊಳಿಸುವ ಆದೇಶ ನೀಡದೆ ಇರುವುದರಿಂದ ಸ್ವಪ್ರೇರಣೆ ಬಂದ್ಗೆ ಕರೆ ನೀಡಿದ್ದೇವೆ ಎಂದು ಅವರು ತಿಳಿಸಿದ್ದರು.
ಜಿಲ್ಲೆಯ ೮೫ ಸಾವಿರ ಅರಣ್ಯವಾಸಿಗಳ ಕುಟುಂಬಗಳು ಅತಂತ್ರರಾಗುವ ಆತಂಕವಿರುವುದರಿAದ ಅರಣ್ಯವಾಸಿಗಳ ಹಿತ ಕಾಪಾಡುವ ಮತ್ತು ಮಾನವೀಯತೆ ದೃಷ್ಟಿಯಿಂದ ಸಾರ್ವಜನಿಕರು ಸ್ವಪ್ರೇರಣೆ ಬಂದ್ಗೆ ಸಹಕರಿಸಲು ವಿನಂತಿಸಿದರು.
ಸಭೆಯಲ್ಲಿ ಲಕ್ಷö್ಮಣ ಮಾಳ್ಳಕ್ಕನವರ, ಇಬ್ರಾಹಿಂ ಗೌಡಳ್ಳಿ, ನೇಹರೂ ನಾಯ್ಕ ಬಿಳೂರು, ದೇವರಾಜ ನಾಯ್ಕ, ದುಗ್ಗು ಮರಾಠಿ ಕೃಷ್ಣ, ಮರಾಠಿ ಸೊಂದಾ, ದೇವರಾಜ ಮರಾಠಿ ಬಂಡಲ, ಎಮ್.ಕೆ ನಾಯ್ಕ ಕಂಡ್ರಾAಜಿ, ಅಬ್ದುಲ್ ರಪೀಕ್ ಗೌಡಳ್ಳಿ, ನಾಗರಾಜ ದನಗನಹಳ್ಳಿ, ರಘುಪತಿ ಬಡಗಿ, ಶಿವು ಹಿಲಿಯಾ ಗೌಡ, ರಿಯಾಜ್ ಅಹಮ್ಮದ್, ಜಾನ್ ಎ ಫರ್ನಾಂಡಿಸ್, ಜಾಕೀರಾಬಿ, ಸಮರೀನ್ ನಾಸೀರ್ ಶೇಖ್, ಮಾರುತಿ ಗಣಪತಿ ವೈಧ್ಯ, ಸ್ವಾತಿ ಜೈನ್, ಆನಂದ ಗಾಣಿಗೇರ್, ಗಂಗಾಧರ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.
ಶಾಲಾ, ಕಾಲೇಜು, ವಾಣಿಜ್ಯ ವ್ಯವಹಾರ ಬಂದ್:
ಜ. ೭ ರ ಮುಂಜಾನೆ ೮ ರಿಂದ ೧೨ ಗಂಟೆಯವರೆಗೆ ಶಿರಸಿ ನಗರ ಪ್ರದೇಶದ ಶಾಲಾ, ಕಾಲೇಜು, ವಾಣಿಜ್ಯ ವ್ಯವಹಾರವನ್ನು ಸ್ವಪ್ರೇರಣೆಯ ಬಂದ್ಗೆ ಸಹಕರಿಸುವಂತೆ ಸಂಸ್ಥೆಗಳಿಗೆ ವಿನಂತಿಸಲಾಗಿದೆ ಎಂದು ರವೀಂದ್ರ ನಾಯ್ಕ ಹೇಳಿದರು.