ಅರಣ್ಯವಾಸಿಗಳಿಂದ ತೀವ್ರ ಆಕ್ರೋಶ;
ಯಶಸ್ವಿ ಸ್ವಪ್ರೇರಣೆ ಶಿರಸಿ ಬಂದ್, ಪರಿಹಾರಕ್ಕೆ ಅಗ್ರಹಿಸಿ ಧರಣಿ, ಮೆರವಣಿಗೆ ಹಾಗೂ ತಾಲೂಕಾ ಕಚೇರಿಗೆ ಮುತ್ತಿಗೆ.
ಶಿರಸಿ: ಅರಣ್ಯವಾಸಿಗಳ ಸಮಸ್ಯೆಗಳ ಪರಿಹಾರಕ್ಕೆ ಅಗ್ರಹಿಸಿ ಅರಣ್ಯ ಅತಿಕ್ರಮಣದಾರರಿಂದ ಅರ್ಧ ದಿನದ ಸ್ವಪ್ರೇರಣೆ ಶಿರಸಿ ಬಂದ್, ಮೆರವಣಿಗೆ, ತಾಲೂಕಾ ಕಚೇರಿಗೆ ಮುತ್ತಿಗೆ, ಪರಿಹಾರಕ್ಕೆ ಅಗ್ರಹಿಸಿ ಧರಣಿ, ಅರಣ್ಯಾಧಿಕಾರಿಗಳಿಗೆ ತರಾಟೆ, ಜಿಲ್ಲಾಧಿಕಾರಿಗಳ ಮಧ್ಯಪ್ರವೇಶ ಮುಂತಾದ ವಿವಿಧ ರೀತಿಯ ಬೃಹತ್ ಪ್ರತಿಭಟನೆಗಳೊಂದಿಗೆ ಅರಣ್ಯ ಅತಿಕ್ರಮಣದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಶ್ರಯದಲ್ಲಿ, ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ನೇತ್ರತ್ವದಲ್ಲಿ ವಿವಿಧ ಸಂಘಟನೆಯ ಮುಖಂಡರ ಉಪಸ್ಥಿತಿಯಲ್ಲಿ ಪ್ರತಿಭಟನೆ ಜರುಗಿದವು.
ಸುಫ್ರೀಂ ಕೋರ್ಟನಲ್ಲಿ ಅರಣ್ಯವಾಸಿಗಳ ಪರವಾಗಿ ತಿದ್ದುಪಡಿ ಪ್ರಮಾಣ ಪತ್ರ ಸಲ್ಲಿಸಲು ಹಾಗೂ ಕಾನೂನು ಬಾಹಿರ ಅಸಮರ್ಪಕ ಜಿಪಿಎಸ್ ಸರ್ವೇ ಆಧಾರದ ಮೇಲೆ ಒಕ್ಕಲೆಬ್ಬಿಸುವ ಪ್ರಕ್ರೀಯೆ ಸ್ಥಗಿತಗೊಳಿಸುವ ಆದೇಶಕ್ಕೆ ಅಗ್ರಹಿಸಿ ಹಾಗೂ ಅರಣ್ಯ ಸಿಬ್ಬಂದಿಗಳ ದೌರ್ಜನ್ಯ, ಕಿರುಕುಳ ಖಂಡಿಸಿ ತೀವ್ರ ಪ್ರತಿಭಟನೆ ಜರುಗಿದವು.
ಅರಣ್ಯ ಅಧಿಕಾರಿಗಳಿಗೆ ತರಾಟೆ:
ತಹಶೀಲ್ದಾರ್ ಕಚೇರಿ ಏದುರು ಧರಣಿ ಸಂದರ್ಭದಲ್ಲಿ ಹಿರಿಯ ಅರಣ್ಯ ಅಧಿಕಾರಿಗಳ ಆಗಮನಕ್ಕೆ ಪಟ್ಟು ಹಿಡಿದ ಅರಣ್ಯವಾಸಿಗಳು ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳಿಗೆ ಅರಣ್ಯ ಅತಿಕ್ರಮಣದಾರರಿಂದ ತೀವ್ರ ತರಾಟೆಗೆ ಒಳಪಟ್ಟಿರುವುದು ಇಂದಿನ ಪ್ರತಿಭಟನೆಯ ವಿಶೇಷವಾಗಿತ್ತು.
ಜಿಲ್ಲಾಧಿಕಾರಿಗಳಿಂದ ಆಶ್ವಾಸನೆ:
ಅಸಮರ್ಪಕ ಜಿಪಿಎಸ್ ಮೇಲ್ಮನವಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಸ್ವೀಕರಿಸಲು ಸ್ಥಳದಲ್ಲಿಯೇ ಆದೇಶ, ಅರಣ್ಯ ಸಿಬ್ಬಂದಿಗಳಿAದ ದೌರ್ಜನ್ಯ ನಿಯಂತ್ರಿಸಲು ಕ್ರಮ ಹಾಗೂ ಜಿಪಿಎಸ್‌ಗೆ ಸಂಬAಧಿಸಿದ ಹೋರಾಟಗಾರರ ಪತ್ರಕ್ಕೆ ಒಂದು ವಾರದಲ್ಲಿ ಉತ್ತರಿಸುವ ಆಶ್ವಾಸನೆಯನ್ನು ಜಿಲ್ಲಾಧಿಕಾರಿ ಪ್ರಭುಲಿಂಗ ಕೌಳಿಕಟ್ಟಿ ನೀಡಿದ ಹಿನ್ನೆಲೆಯಲ್ಲಿ ಧರಣಿ ಕಾರ್ಯಕ್ರಮ ಅಂತ್ಯಗೊAಡಿತು.
ಈ ಸಂದರ್ಭದಲ್ಲಿ ಡಿ.ಎಫ್.ಒ ಅಜ್ಜಯ್ಯ, ಹೆಚ್ಚುವರಿ ಎಸ್.ಪಿ ಜಯ ಕುಮಾರ್, ಡಿ.ವೈ.ಎಸ್.ಪಿ ಡಿ.ಎಲ್ ಗಣೇಶ್, ತಹಶೀಲ್ದಾರ್ ಶ್ರೀಧರ ಮುಂದಲಮನಿ,
ಮುಂದಿನ ಒಂದುವಾರದಲ್ಲಿ ಅರಣ್ಯವಾಸಿಗಳ ಸಮಸ್ಯೆಗೆ ಪರಿಹಾರ ಸಿಗದಿದ್ದಲ್ಲಿ ಜನವರಿ ೧೫ ರಂದು ಶಿರಸಿಗೆ ಆಗಮಿಸುವ ಮುಖ್ಯಮಂತ್ರಿ ವಿರುದ್ಧ ಭಿನ್ನ ರೀತಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಪ್ರತಿಭಟನಾ ಸಭೆ:
ಶಿರಸಿ ಹಳೆ ಬಸ್‌ಸ್ಟಾಂಡ್ ಸರ್ಕಲ್‌ನಲ್ಲಿ ಜರುಗಿದ ಪ್ರತಿಭಟನೆಯ ಸಭೆಯನ್ನು ಉದ್ದೇಶಿಸಿ ಹೋರಾಟಗಾರರಾದ ಬಾಲಚಂದ್ರ ಶೆಟ್ಟಿ ಅಂಕೋಲಾ, ರೈತ ಮುಖಂಡ ಚಿದಾನಂದ್ ಹರಿಜನ, ರಾಘವೇಂದ್ರ ನಾಯ್ಕ ಬೆಳಲೆ, ಪ್ರದೀಪ ಶೆಟ್ಟಿ, ಸುರೇಶ್ ಮೇಸ್ತ ಹೊನ್ನಾವರ, ರಮಾನಂದ ನಾಯ್ಕ ಅಚಿವೆ, ಅಣ್ಣಪ್ಪ ಕಣ್ಣಿಗೇರಿ, ಸವಿತಾ ಸಮಾಜ ಅಧ್ಯಕ್ಷ ಗೋಪಾಲ ವಿ ಕೊಂಕಲ್, ಸ್ವಾತಿ ಜೈನ್, ರಿಕ್ಷಾ ಯೂನಿಯನ್ ಅಧ್ಯಕ್ಷ ವಿಶ್ವನಾಥ ಆಚಾರಿ, ವೆಂಕಟೇಶ್ ಬೈಂದೂರು ಮುಂತಾದವರು ಮಾತನಾಡಿದರು.
ಮೆರವಣಿಗೆಯ ನೇತ್ರತ್ವವನ್ನ ಲಕ್ಷö್ಮಣ ಮಾಳ್ಳಕ್ಕನವರ, ಶಾರಂಬಿ ಬೆಟ್ಕುಳಿ, ಯಾಕೂಬ್ ಬೆಟ್ಕುಳಿ, ಭೀಮ್ಸಿ ವಾಲ್ಮೀಕಿ, ಶಿವಾನಂದ ಜೋಗಿ, ರಾಘು ನಾಯ್ಕ ಕವಂಚೂರು, ಹರಿಹರ ನಾಯ್ಕ ಓಂಕಾರ, ಸೀತಾರಮ ಗೌಡ ಹುಕ್ಕಳಿ, ನೆಹರೂ ನಾಯ್ಕ, ದಿನೇಶ್ ನಾಯ್ಕ ಬೇಡ್ಕಣಿ, ಮೀರ್ ಸಾಬ್ ಕಸ್ತೂರಬಾನಗರ, ಸುನೀಲ್ ನಾಯ್ಕ ಸಿದ್ಧಾಪುರ, ಸತೀಶ್ ನಾಯ್ಕ ಶೇಲೂರು, ಶೇಖಯ್ಯ ಹಿರೇಮಠ ಮುಂಡಗೋಡ, ಕಸ್ತೂರಿ ಬಾಯ್ ಶೆಟ್ಟಿ, ದಾವುದ್ ಹೊನ್ನಾವರ, ರಜಾಕ್ ಸಾಬ್ ಮುಂತಾದವರು ವಹಿಸಿದ್ದರು.