ಕೆಳ ಮನೆ ಆಂಟಿ ಮತ್ತು ಮೇಲ್ಗಡೆ ಮನೆ ಅಂಕಲ್ ನಡುವೆ ಲವ್- ಆಂಟಿ ಜೊತೆ ಓಡಿ ಹೋದ ಅಂಕಲ್
ಬೆಂಗಳೂರು- ಕೆಳಮನೆಯಲ್ಲಿದ್ದ ಹೆಂಡತಿ ಕಾಣ್ತಿಲ್ಲ ಮೇಲಿನ ಮನೆಯಲ್ಲಿದ್ದ ಗಂಡ ಕಾಣ್ತಿಲ್ಲ. ಇಬ್ಬರು ಒಟ್ಟಿಗೆ ಎಸ್ಕೇಪ್.
ಈಗ ಕೆಳ ಮಹಡಿಯ ಗಂಡ ಹಾಗೂ ಮೇಲ್ಮನೆಯಲ್ಲಿರುವ ಹೆಂಡತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬೆಂಗಳೂರಿನ ಜ್ಙಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಮಾರುತಿ ನಗರ್ ನಲ್ಲಿ ಇಬ್ಬರು ವಾಸವಾಗಿದ್ದಾರೆ.
ಹೆಂಡತಿ ಕಾಣೆ ಅಂತ ಗಂಡನಿಂದ ದೂರು, ಗಂಡ ಕಾಣೆಯಾಗಿದ್ದಾನೆ ಅಂತಾ ಹೆಂಡತಿಯಿಂದ ದೂರು. ಈಗ ಇವರಿಬ್ಬರ ಪಜೀತಿ ಯಾರಿಗೂ ಬೇಡ. 12 ವರ್ಷದ ಹಿಂದೆ ನವೀದ್ ಮತ್ತು ಝೀನತ್ ಮದುವೆ ಆಗಿದ್ದರು. ಹಾಗೆಯೇ 8 ವರ್ಷದ ಹಿಂದೆ ಮುಬಾರಕ್ ಮತ್ತು ಶಾಜಿಯಾ ವಿವಾಹವಾಗಿದ್ದರು. ಈ ಇಬ್ಬರು ದಂಪತಿಗೂ ಇಬ್ಬರು ಮಕ್ಕಳಿದ್ದಾರೆ. ಇಬ್ಬರು ಡಿಸಂಬರ್ 9 ರ, 2022 ರಂದು ಕಾಣೆಯಾಗಿದ್ದಾರೆ. ಆಂದು ಮನೆಯಿಂದ ಹೊರಹೋದವರು ವಾಪಸ್ ಬರಲೇ ಇಲ್ಲ.
ಇಬ್ಬರು ಒಟ್ಟಿಗೆ ಹೋಗಿದ್ದಾರೆಂದು ಆರೋಪಿಸುತ್ತಿರುವ ಝೀನತ್ ಮತ್ತು ಮುಬಾರಕ್
ಶಾಜಿಯಾ ಪುಟ್ಟ ಮಗುವನ್ನು ಕರೆದೊಯ್ದಿದ್ದಾಳೆ ಎಂದು ಮುಬಾರಕ್ ಭಾವುಕರಾಗಿ ನುಡಿದಿದ್ದಾರೆ. ಇಬ್ಬರಿಂದ ಜ್ಙಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ನೀಡಿದ್ದಾರೆ. ಆದರೆ ದೂರು ನೀಡಿ ಒಂದು ತಿಂಗಳು ಪೋಲಿಸರು ಪತ್ತೆ ಮಾಡಿಲ್ಲ ಎಂದು ಗೋಳು ತೋಡಿಕೊಂಡಿದ್ದಾರೆ. ಈ ವೇಳೆ ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ ನಿಂಬರಗಿ ಭೇಟಿ ಮಾಡಿ ಇಬ್ಬರನ್ನೂ ಪತ್ತೆ ಮಾಡುವಂತೆ ಕೇಳಿಕೊಂಡಿದ್ದಾರೆ.