ಕರ್ನಾಟಕ ರಣಧೀರರ ವೇದಿಕೆಯ ಹೋರಾಟದ ಫಲಶ್ರುತಿ- ನೆಲಮಂಗಲ ತಾಲೂಕ ಆಡಳಿತದಿಂದ ಅಕ್ರಮ ಒತ್ತುವರಿ ಜಮೀನು ತೆರವು
ನೆಲಮಂಗಲ-ಕರ್ನಾಟಕ ರಣಧೀರರ ವೇದಿಕೆಯು ನೆಲಮಂಗಲ ತಾಲ್ಲೂಕು ಗೊಲ್ಲಹಳ್ಳಿ ಗ್ರಾಮದ ಸರ್ವೆ ನಂಬರ್ 28ರಲ್ಲಿ ಇದ್ದಂತಹ ಸರ್ಕಾರಿ ಜಮೀನಾದ ಗುಂಡು ತೋಪು ಭೂಮಿಯು ಒತ್ತುವರಿಯಾಗಿರುವುದನ್ನ ಗಮನಿಸಿ ನೆಲಮಂಗಲ ತಾಲೂಕು ಆಡಳಿತಕ್ಕೆ ದಿನಾಂಕ 02/08/2022 ರಂದು ದೂರನ್ನು ನೀಡಿರುತ್ತದೆ. ಈ ದೂರಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಸಾರ್ವಜನಿಕ ಹಿತಾಸಕ್ತಿ ಕಾಯುವಂತೆ ಸಂಬಂಧಪಟ್ಟ ನೆಲಮಂಗಲ ತಾಲ್ಲೂಕು ಆಡಳಿತದ ಅಧಿಕಾರಿಗಳೊಂದಿಗೆ ಕಾನೂನು ಹೋರಾಟ ಮಾಡಿ ಸರ್ಕಾರಿ ಜಮೀನನ್ನ ಒತ್ತುವರಿಯನ್ನು ತೆರವುಗೊಳಿಸುವಲ್ಲಿ ಜಯಶೀಲವಾಗಿದೆ. ಸರ್ಕಾರಿ ಜಮೀನನ್ನು ಅಕ್ರಮವಾಗಿ ಅಕ್ರಮ ಬಡಾವಣೆಗಳಿಗೆ ಹೋಗಲು ರಸ್ತೆಗಳನ್ನು ನಿರ್ಮಾಣ ಮಾಡಿಕೊಂಡು ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದ
ಭೂಗಳ್ಳರಿಗೆ ಬಿಸಿ ಮುಟ್ಟಿಸುವ ಕೆಲಸವನ್ನು ಕರ್ನಾಟಕ ರಣಧೀರರ ವೇದಿಕೆ ಮಾಡಿದೆ.
ಇದೇ ಸಂದರ್ಭದಲ್ಲಿ ಮಾತನಾಡಿದ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶಂಕರ್ ಗೌಡ್ರು ಕೆ.ಆರ್ ರವರು ನೆಲಮಂಗಲ ತಾಲೂಕಿನಾದ್ಯಂತ ಹಾಗೂ ಸರ್ಕಾರಿ ಜಮೀನು, ರಾಜಕಾಲುವೆ, ಕಾಲುದಾರಿ, ಬಂಡಿಜಾಡು, ಒತ್ತುವರಿ ಮಾಡಿಕೊಂಡಿರುವ ಭೂಗಳ್ಳರ ವಿರುದ್ಧ ನಿತ್ಯ ಕಾನೂನು ಚೌಕಟ್ಟಿನಲ್ಲಿ ಹೋರಾಟ ಮಾಡಲಾಗುತ್ತದೆ ಹಾಗೂ ಒತ್ತುವರಿಯಾದ ಸರ್ಕಾರಿ ಜಾಗವನ್ನು ಅಧಿಕಾರಿಗಳ ಗಮನ ಸೆಳೆದು ಒತ್ತುವರಿಯನ್ನು ತೆರೆವುಗೊಳಿಸಿಸಿ ಸರ್ಕಾರದ ಸ್ವಾದಿನಕ್ಕೆ ಪಡೆದು ಸಾರ್ವಜನಿಕರ ಮೀಸಲಿಡುವಂತೆ ರಾಜ್ಯದ್ಯಂತ ನಮ್ಮ ಕರ್ನಾಟಕ ರಣಧೀರರ ವೇದಿಕೆಯು ಭೂಗಳ್ಳರ ವಿರುದ್ಧ ಕಾನೂನು ಸಮರಕ್ಕೆ ಸಿದ್ಧವಾಗಿದೆ, ಹಾಗೂ ನೆಲಮಂಗಲ ತಾಲ್ಲೂಕು ಆಡಳಿತದ ಅಧಿಕಾರಿಗಳು ಈ ನಮ್ಮ ದೂರು ಅರ್ಜಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಒತ್ತುವರಿಯನ್ನು ತೆರೆವುಗಳಿಸಿದಕ್ಕೆ ಹೃದಯಪೂರ್ವಕವಾದ ಧನ್ಯವಾದಗಳನ್ನು ತಿಳಿಸುತ್ತೇವೆ ಹಾಗೂ ತಾಲೂಕಿನದ್ಯಂತ ಸಾಕಷ್ಟು ಒತ್ತುವರಿಯಾಗಿರುವ ವಿಚಾರವಾಗಿ ದೂರು ಅರ್ಜಿಗಳನ್ನ ನೆಲಮಂಗಲ ತಾಲ್ಲೂಕು ಆಡಳಿತದ ಅದನ್ನು ಕೂಡ ಆದಷ್ಟು ಬೇಗ ಕ್ರಮವಹಿಸಿ ಒತ್ತುವರಿಯನ್ನು ತೆರವುಗೊಳಿಸಬೇಕೆಂದು ಈ ಮೂಲಕ ಆಗ್ರಹದ ಮನವಿ ಆಗಿರುತ್ತದೆ, ತಾಲೂಕಿನ ಅತ್ಯಂತ ಒತ್ತುವರಿಯನ್ನು ತೆರವುಗೊಳಿಸದೇ ಇದ್ದಲ್ಲಿ ನೆಲಮಂಗಲ ತಾಲ್ಲೂಕು ಆಡಳಿತ ಅಧಿಕಾರಿಯಾದ ತಹಸೀಲ್ದಾರ್ ಹಾಗೂ ತಾಲ್ಲೂಕು ದಂಡಾಧಿಕಾರಿಗಳಾದ ಮಂಜುನಾಥ್.ಕೆ. ರವರ ವಿರುದ್ಧ ಬೃಹತ್ ಮಟ್ಟದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಈ ಮೂಲ ಎಚ್ಚರಿಸುತ್ತೇವೆ ಎಂದು ತಿಳಿಸಿದರು. ನಮ್ಮ ಈ ಹೋರಾಟಕ್ಕೆ ಸ್ಪಂದಿಸಿದ ನಮ್ಮ ಸಂಘಟನೆಯ ಎಲ್ಲಾ ಪದಾಧಿಕಾರಿಗಳಿಗೂ ಅಭಿನಂದನೆಗಳನ್ನು ತಿಳಿಸುತ್ತಾ ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದ ಹೋರಾಟದ ಮೂಲಕ ಸಮಾಜದ ಹಿತ ಕಾಯುವಂತೆ ನಮ್ಮ ಕರ್ನಾಟಕ ರಣಧೀರರ ವೇದಿಕೆಯ ಪದಾಧಿಕಾರಿಗಳಿಗೆ ಈ ಮೂಲಕ ತಿಳಿಸುತ್ತೇವೆ ಎಂದು ಹೇಳಿದರು.