ಬೆಳಗಾವಿ: ಬಿಜೆಪಿಯವರು (BJP) ನನ್ನನ್ನು ಕ್ರಿಮಿನಲ್ (Criminal) ಮಾಡಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿಯನ್ನೂ ಸಹ ಕ್ರಿಮಿನಲ್ ಮಾಡಿದ್ದಾರೆ. ರಾಜಕೀಯವಾಗಿ ಯಾರು ಯಾರು ಬೆಳೆಯುತ್ತಾರೆ, ಪ್ರಬಲವಾಗಿ ಇರುವವರನ್ನು ಕ್ರಿಮಿನಲ್ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಹೇಳಿದರು.ತಾಲೂಕಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿನಯ್ ಕುಲಕರ್ಣಿ (Vinay Kulkarni) ಹುಟ್ಟುಹಬ್ಬದ (Birthday) ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆ ದೃಷ್ಠಿಯಿಂದ ನಾಯಕರು, ಅವರ ಅಭಿಮಾನಿಗಳು, ಕಾರ್ಯಕರ್ತರು ಹುಟ್ಟುಹಬ್ಬ ಮಾಡುತ್ತಿದ್ದಾರೆ. ಧಾರವಾಡಕ್ಕೆ ಹೋಗಲು ಕೋರ್ಟ್ ನಿರ್ಬಂಧ ಹೇರಿದೆ. ಹೀಗಾಗಿ ಪಕ್ಕದ ಕ್ಷೇತ್ರದಲ್ಲಿ ಅವರ ಕಾರ್ಯಕ್ರಮ ಮಾಡುತ್ತಿದ್ದಾರೆ. ಹುಟ್ಟುಹಬ್ಬ ಆಚರಣೆಯಲ್ಲಿ ಒಬ್ಬೊಬ್ಬರದ್ದು ಒಂದೊಂದು ಶೈಲಿ ಇರುತ್ತದೆ. ನಾನು ಕೇದಾರನಾಥಕ್ಕೆ ಹೋಗಿದ್ದೆ. ಕೆಲವರು ಆಸ್ಪತ್ರೆಗೆ ಹೋಗಿ ಹಣ್ಣು ಹಂಪಲು ಕೊಟ್ಟು ಆಚರಿಸುತ್ತಾರೆ. ಆಗಸ್ಟ್ 3 ರಂದು ಸಿದ್ದರಾಮಯ್ಯನವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಆಚರಿಸಿದರು. ವಿನಯ್ ಕುಲಕರ್ಣಿ 2-3 ಬಾರಿ ಶಾಸಕರಾಗಿದ್ದವರು. ಕಾರ್ಯಕರ್ತರ ಭಾವನೆಗೆ ಅನುಗುಣವಾಗಿ ಹುಟ್ಟುಹಬ್ಬ ಆಚರಣೆ ಮಾಡಲಾಗುತ್ತದೆ. ಅವರಿಗೆ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ, ಬೆಳಗಾವಿ ಜಿಲ್ಲೆ ಜವಾಬ್ದಾರಿ ಕೊಟ್ಟಿದ್ದೇವೆ ಎಂದರು.
ಕೊಲೆ ಆರೋಪಿ, ಕ್ರಿಮಿನಲ್ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದಾರೆ ಎಂಬ ಬಿಜೆಪಿಯವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು ನನ್ನನ್ನೂ ಕ್ರಿಮಿನಲ್ ಮಾಡಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿಯನ್ನೂ ಸಹ ಕ್ರಿಮಿನಲ್ ಮಾಡಿದ್ದಾರೆ. ರಾಜಕೀಯವಾಗಿ ಯಾರು ಯಾರು ಬೆಳೆಯುತ್ತಾರೋ ಪ್ರಬಲವಾಗಿ ಇರುವವರನ್ನು ಕ್ರಿಮಿನಲ್ ಮಾಡಿದ್ದಾರೆ. ಯಾರನ್ನು ಕಂಡರೆ ಅವರಿಗೆ ಭಯ ಇರುತ್ತೋ ಅವರ ಮೇಲೆ ಕೇಸ್‌ಗಳನ್ನು ಹಾಕುವುದು, ತೊಂದರೆ ಕೊಡುವುದು ಮಾಡುತ್ತಾರೆ ಎಂದು ದೂರಿದರು.
ವಿನಯ್ ಕುಲಕರ್ಣಿ ಮೇಲೆ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದನ್ನು ರಾಜಕೀಯ ಉದ್ದೇಶದಿಂದ ಬಿಜೆಪಿಯವರು ಪ್ರಭಾವ ಬೀರಿ ಸಿಬಿಐಗೆ ವಹಿಸಿದ್ದಾರೆ. ಸಿಬಿಐ ಯಾವ ರೀತಿ ಕೆಲಸ ಮಾಡುತ್ತಿದೆ ಎಂಬುದನ್ನು ನಾನು ಬಿಡಿಸಿ ಹೇಳಬೇಕಾಗಿಲ್ಲ. ವಿನಯ್‌ಗೆ ಧಾರವಾಡಕ್ಕೆ ನಿರ್ಬಂಧದ ನ್ಯಾಯಾಲಯದ ಹಕ್ಕನ್ನು ನಾನು ಪ್ರಶ್ನಿಸುವುದಿಲ್ಲ ಎಂದರು.
ಡಿಕೆಶಿ ಇಂಧನ ಸಚಿವರಿದ್ದಾಗ ನಡೆದ ಭ್ರಷ್ಟಾಚಾರ ಬಗ್ಗೆ ತನಿಖೆ ಮಾಡುತ್ತೇವೆ ಎಂಬ ಸಿಎಂ ಹೇಳಿಕೆ ವಿಚಾರಕ್ಕೆ, ಮುಖ್ಯಮಂತ್ರಿಗಳ ಕ್ರಮ ಸ್ವಾಗತ ಮಾಡುತ್ತೇನೆ. ನಾನೇನೂ ಕಣ್ಣು ಮುಚ್ಚಿ ಕುಳಿತುಕೊಂಡಿಲ್ಲ. ಇಂಧನ ಸಚಿವರು, ಜಲಸಂಪನ್ಮೂಲ ಸಚಿವರು ಬಿಜೆಪಿ ಆಡಳಿತದಲ್ಲಿ ಏನೇನೋ ಗುತ್ತಿಗೆ ಕೊಟ್ಟಿದ್ದಾರೆ. 1,000 ಕೋಟಿ ಇರೋದನ್ನು 1,300 ಕೋಟಿ ಮಾಡಿದ್ದಾರೆ. 300 ಕೋಟಿ ಇರೋದನ್ನು 700 ಕೋಟಿ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲೂ ಇದರ ಬಗ್ಗೆ ಸಾಕಷ್ಟು ಉದಾಹರಣೆಗಳಿವೆ. ನಾನೇನೂ ಕಣ್ಣು ಮುಚ್ಚಿಕೊಂಡು ರಾಜಕಾರಣ ಮಾಡುತ್ತಿಲ್ಲ. ಸಮಯ ಬಂದಾಗ ಎಲ್ಲದಕ್ಕೂ ಉತ್ತರ ಕೊಡುತ್ತೇನೆ ಎಂದರು.
ಜನಾರ್ದನ ರೆಡ್ಡಿ ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ನನ್ನ ಹತ್ರ ಯಾವ ಸಂಪರ್ಕವೂ ಮಾಡಿಲ್ಲ. ಬೇರೆಯವರು ಬಹಳ ಜನ ಸಂಪರ್ಕದಲ್ಲಿದ್ದಾರೆ. ಕೆಲವರೆಲ್ಲರೂ ಪಕ್ಷಕ್ಕೆ ಅರ್ಜಿ ಹಾಕುವವರಿದ್ದಾರೆ, ಬಂದಾಗ ಜಿಲ್ಲಾವಾರು ಲಿಸ್ಟ್ ಬಿಡುಗಡೆ ಮಾಡುತ್ತೇವೆ. ಕಾಂಗ್ರೆಸ್ ಪಕ್ಷಕ್ಕೆ ಯರ‍್ಯಾರು ನಮ್ಮ ತತ್ವ ಸಿದ್ಧಾಂತದಲ್ಲಿ ನಂಬಿಕೆ ಇದ್ದವರು ಅರ್ಜಿ ಹಾಕಲಿ ಆಮೇಲೆ ನೋಡೋಣ ಎಂದರು.
ವರದಿ ಆಕಾಶ್ ಚಲವಾದಿ ಬೆಂಗಳೂರು 9008827439