ನಾಗಮಂಗಲ. ನ:- 6 ಸಮಾಜ ಹಾಗೂ ಜನರ ಮಧ್ಯೆ ಇದ್ದು ಸಮಸ್ಯೆಗಳಿಂದ ಹರಿತು ಜನಸೇವೆ ಮಾಡುವ ಹಂಬಲ ಇದೆ ಎಂದು ಫೈಟರ್ ರವಿಯವರು ತಮ್ಮ ಮನದಾಳದ ಹಿಂಗಿತವನ್ನು ತಿಳಿಸಿದರು.
ಅವರಿಂದು ನಾಗಮಂಗಲ ತಾಲೂಕಿನ ಕಾಚೇನಹಳ್ಳಿ ಗ್ರಾಮಕ್ಕೆ ಬರುವ ಮುನ್ನ ನಾಗಮಂಗಲ ತಾಲೂಕಿನ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ಮಾಡಿಕೊಂಡು ಕಾಚೇನಹಳ್ಳಿ ಗ್ರಾಮಕ್ಕೆ ಬರಮಾಡಿ ಕೊಂಡರು.
ಕಚೇನಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ಮಾಡುತ್ತ ಇಂದು ಸಮಾಜದ ವಿವಿಧ ಮುಖಗಳಲ್ಲಿ ಗ್ರಾಮ ಅಭಿವೃದ್ಧಿ ಕನಸು ಕಂಡವರಲ್ಲಿ ನನ್ನದಾಗಿದ್ದು ಈ ಸಮಸ್ಯೆಗಳನ್ನು ಹರಿಯಲು ತಾಲೂಕಿನ ಪ್ರತಿ ಗ್ರಾಮದಲ್ಲಿ ಜನರ ಮಧ್ಯೆ ಇದ್ದು ಜನಸೇವೆ ಮಾಡುವ ಅಭಿಲಾಷೆ ಹೊಂದಿದ್ದು ಎಂಬ ಕನಸು ನನ್ನ ಗುರಿಯಾಗಿದೆ ಎಂದು ತಿಳಿಸಿದರು.
ಕರ್ನಾಟಕ ಅಭಿಮಾನ ಕನ್ನಡ ನಾಡು ನುಡಿಯ ಬಗ್ಗೆ ಪ್ರತಿಯೊಬ್ಬರಲ್ಲೂ ಸ್ವಾಭಿಮಾನ ಮೈಗೂಡಿಸಿಕೊಂಡು ಕನ್ನಡದ ಶಕ್ತಿಯನ್ನು ತೋರಿಸಬೇಕಾಗಿರುವ ಕರ್ತವ್ಯ ನಮ್ಮದಾಗಿದೆ ಎಂದು ತಿಳಿಸಿದರು .
ನನ್ನ ಸಮಾಜ ಸೇವೆಯ ಉದ್ದೇಶ ಉತ್ತಮ ಆರೋಗ್ಯ ಶುದ್ಧ ನೀರು ಪೂರೈಸುವ ಅಭಿಲಾಷೆ ಇದ್ದು ಊರಿನ ಸೇವ ಅಭಿವೃದ್ಧಿಗೆ ಸಮಸ್ಯೆಗಳನ್ನ ಅರಿತು ನನ್ನನ್ನು ಬಳಸಿಕೊಳ್ಳುವಂತೆ ಈ ಸಂದರ್ಭದಲ್ಲಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಸಿ.ಜೆ ಕುಮಾರ್ ರಾಮಕೃಷ್ಣ. ಸುರೇಶ್ ಬೆಟ್ಟೆಗೌಡ ಹಾಗೂ ಗ್ರಾಮದ ಯುವಕರು ಮುಖಂಡರು ಹಾಜರಿದ್ದರು.