ಬೆಂಗಳೂರು -ಉತ್ತರಪ್ರದೇಶ ಮೂಲದ ವೈದ್ಯೆಯೊಬ್ಬರು ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಉತ್ತರಪ್ರದೇಶದ ಲಖನೌ ಮೂಲದ ಪ್ರಿಯಾಂನ್ಶಿ ತ್ರಿಪಾಠಿ (25) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇವರು ಬೆಂಗಳೂರಿನ ಎಂ ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ದಂತವೈದ್ಯೆಯಾಗಿ ಕೆಲಸ ಮಾಡುತ್ತಿದ್ದರು. ಜನವರಿ 25 ರಂದು ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರೇಮ ವೈಫಲ್ಯಕ್ಕೆ ಬೇಸತ್ತು ಪ್ರಿಯಾಂನ್ಶಿ ತ್ರಿಪಾಠಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಎಂ ಎಸ್ ರಾಮಯ್ಯ ಆಸ್ಪತ್ರೆಯಲ್ಲಿರುವ ಇನ್ನೋರ್ವ ವೈದ್ಯ ಸುಮಿತ್ ಅವರನ್ನು ಪ್ರಿಯಾಂನ್ಶಿ ತ್ರಿಪಾಠಿ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ ಸುಮಿತ್ ಪ್ರಿಯಾಂನ್ಶಿ ತ್ರಿಪಾಠಿ ಪ್ರೀತಿಯನ್ನು ಒಪ್ಪಿಕೊಂಡಿರಲಿಲ್ಲ, ಈ ಕಾರಣಕ್ಕೆ ಮನನೊಂದು ಪ್ರಿಯಾಂನ್ಶಿ ತ್ರಿಪಾಠಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.