ಚಳ್ಳಕೆರೆ-ಸರಕಾರಿ ಹಾಗೂ ಖಾಸಗಿ ಭೂಮಿಯಲ್ಲಿ ಅಕ್ರಮ ಮಣ್ಣು ಸಾಗಾಟ ವಿರೋಧಿಸಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ರಾಜ್ಯ ರೈತ ಸಂಘದ ಹಿರಿಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ತಹಶೀಲ್ದಾರ್ ಕಚೆರಿಗೆ ಮನವಿ ಸಲ್ಲಿಸಿದರು.
ಚಳ್ಳಕೆರೆ ತಾಲ್ಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ವ್ಯಾಪ್ತಿಯ ಬಂಗಾರದೇವರಹಟ್ಟಿ ಗ್ರಾಮದ ರಿ.ಸ.ನಂ. ೭೫ ಮತ್ತು ೭೬ ರಲ್ಲಿ ಪಿಎಸ್ಸಿ ಕಂಪನಿಯವರಿಗೆ ಸ್ಥಳೀಯ ಗ್ರಾಪಂ ಹಾಗೂ ಸಂಬAಧಪಟ್ಟ ಅಧಿಕಾರಿಗಳಿಂ ಮಾಹಿತಿ ಪಡೆಯದೆ ರಸ್ತೆ ಅಭಿವೃದ್ಧಿಗೆ ಫಲವತ್ತಾತ ಮಣ್ಣು ಕೊಟ್ಟಿರುವುದು ಹಾಗೂ ಮಣ್ಣು ತುಂಬುವಲ್ಲಿ ಕಾನೂನು ಉಲ್ಲಂಘಸಿದ ಕಂಪನಿಯವರ ವಿರುದ್ದ ಕ್ರಮ ಕೈಗೊಳ್ಳದೆ ಇರುವುದನ್ನು ಖಂಡಿಸಿ ಪರವಾನಿಗೆ ಕೊಟ್ಟಿರುವುದನ್ನು ರದ್ದು ಪಡಿಸುವಂತೆ ಜಿಲ್ಲಾಧಿಕಾರಿ, ತಾಲೂಕು ಕಚೇರಿ ಸೇರಿದಂತೆ ಸಂಬAಧ ಪಟ್ಟ ಇಲಾಖೆಗಳಿಗ ಎಮನವಿ ನೀಡಿದರೂ ಸಹ ಅಕ್ರಮ ಮಣ್ಣು ಸಾಗಾಟ ನಿಂತಿಲ್ಲ ಆದ್ದರಿಂದ ನ.೬ ಮಂಗಳವಾರ ಬಂಗಾರದೇವರಹಟ್ಟಿ ಬಳಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರಿ.ಸಂ.ನA. ೭೫ ಮತ್ತು ೭೬ ರಲ್ಲಿ ಅಕ್ರಮ ದಂದೆ ನಿಲ್ಲುವವರೆಗೂ ಅನಿರ್ಧಿಷ್ಟ ಚಳುವಳಿ ನಡೆಸಲಾಗುವುದು ಎಂದು ತಾಲೂಕು ಕಚೇರಿಗೆ ಹನುಮಂತಪ್ಪ ಆರ್. ಬಸವರಾಜ,ರಾಜಣ್ಣ, ಎಸ್. ಎರಿಸ್ವಾಮಿ,ಕೆ.ಸಿ. ಶ್ರೀಕಂಠಮೂರ್ತಿ ಮನವಿ ಸಲ್ಲಿಸಿದರು,