ಇನ್ ಸ್ಟ್ರಾಗ್ರಾಮ್ ನಲ್ಲಿ ಯುವತಿಯರ ನಂಬಿಕೆಗಳಿಸಿ ಅವರಿಂದ ನಗ್ನ ಚಿತ್ರ ಪಡೆದು , ಬ್ಲ್ಯಾಕ್ ಮೇಲ್ ಮಾಡಿ, ಬೇರೆಯವರೊಂದಿಗೆ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದ ವ್ಯಕ್ತಿಯ ಬಂಧನ
ಬೆಂಗಳೂರು-ಇನ್ ಸ್ಟ್ರಾಗ್ರಾಮ್ ನಲ್ಲಿ ಯುವತಿಯರ ನಂಬಿಕೆಗಳಿಸಿ ಅವರಿಂದ ನಗ್ನ ಚಿತ್ರ ಪಡೆದು ಬಳಿಕ ಬ್ಲ್ಯಾಕ್ ಮೇಲ್ ಮಾಡಿ, ಬೇರೆಯವರೊಂದಿಗೆ ಲೈಂಗಿಕ ಕ್ರಿಯೆ ಮಾಡುವಂತೆ ಒತ್ತಾಯಿಸುತ್ತಿದ್ದ ವ್ಯಕ್ತಿಯೋರ್ವನನ್ನು ಆಗ್ನೇಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ಯುವತಿಯೋರ್ವಳು ಈತನಿಂದ ಬ್ಲ್ಯಾಕ್ ಮೇಲ್ ಗೊಳಗಾಗಿ ಓಯೋ ರೂಮ್ ನಲ್ಲಿ ಲೈಂಗಿಕ ಕ್ರಿಯೆ ನಡೆಸಿದ ವೇಳೆ ವಿಡಿಯೋ ದೃಶ್ಯೆ ಸೆರೆ ಹಿಡಿದುಕೊಂಡಿದ್ದ. ಈ ವಿಚಾರ ತಿಳಿಯುತ್ತಿದ್ದಂತೆಯೇ ಪೊಲೀಸರು ಈತನನ್ನು ಬಂಧಿಸಿದ್ದಾರೆ.
ದಿಲ್ಲಿ ಪ್ರಸಾದ್(26) ಎಂಬಾತ ಬಂಧಿತ ಮಹಿಳಾ ಪೀಡಕನಾಗಿದ್ದು, ಈತ ಆಂಧ್ರ ಮೂಲದವನಾಗಿದ್ದಾನೆ. 2018ರಿಂದ ಬೆಂಗಳೂರಿನಲ್ಲಿ ನೆಲೆಸಿದ್ದ. ಈತ ಪ್ರಸಿದ್ಧ ಕಂಪೆನಿಯಲ್ಲಿ ಇಂಜಿನಿಯರ್ ಆಗಿದ್ದ.
ಈತನ ಬಂಧನದ ಬಳಿಕ ಪೊಲೀಸರು ತಮ್ಮ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಮತ್ತಷ್ಟು ವಿಚಾರಗಳನ್ನು ಬಾಯ್ಬಿಟ್ಟಿದ್ದು, 3 ಯುವತಿಯರ ಜೊತೆಗೆ ಈತ ಇದೀ ರೀತಿಯ ಕೃತ್ಯ ನಡೆಸಿದ್ದ ಎಂದು ಹೇಳಿದ್ದಾನೆ.
ಈತನ ಬಳಿ ಸುಮಾರು 10 ಮಹಿಳೆಯರ ಫೋಟೋಗಳಿದ್ದವು. ಇನ್ನೂ ಸಾಮಾಜಿಕ ಜಾಲತಾಣಗಳನ್ನು ಮಹಿಳೆಯರಾಗಲಿ, ಪುರುಷರಾಗಲಿ ಎಚ್ಚರಿಕೆಯಿಂದ ಬಳಸಬೇಕು. ಯಾವುದೇ ಕಾರಣಕ್ಕೆ ನಿಮ್ಮ ಖಾಸಗಿ ಚಿತ್ರಗಳನ್ನು ಇನ್ನೊಬ್ಬರ ಜೊತೆಗೆ ಹಂಚಿಕೊಳ್ಳದಿರಿ. ಸಾಮಾಜಿಕ ಜಾಲತಾಣದಲ್ಲಿ ಅಪರಿಚಿತರ ಜೊತೆಗೆ ವ್ಯವಹರಿಸುವ ವೇಳೆ ಎಚ್ಚರದಿಂದಿರಬೇಕು. ಮೋಡಿಯ ಮಾತುಗಳಿಗೆ ಮರುಳಾಗದಿರಿ.