ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಅಲೀಮುದ್ದಿನ್ ಕೊಪ್ಪಳ ಆಯ್ಕೆ
ಭಟ್ಕಳ: 4 ಮತ್ತು 5 ಫೆಬ್ರವರಿ 2023 ಎರಡು ದಿನಗಳ ರಾಜ್ಯ ಕಾರ್ಯಕಾರಿಣಿ ಸಭೆ ಭಟ್ಕಳದ ಮ್ಯಾಂಗೋ ಫಾರ್ಮ್ ಹೌಸ್ ನಲ್ಲಿ ನಡೆದ ಸಭೆಯಲ್ಲಿ ಇಂದು ರಾಜ್ಯ ಅಧ್ಯಕ್ಷರು ರಾಜ್ಯ ತಾಹಿರ್ ಹುಸೇನ್ ಪದಾಧಿಕಾರಿಗಳ ನೇಮಕ ಮಾಡಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ( ಸಂಘಟನೆ) ಮೊಹಮ್ಮದ್ ಅಲೀಮುದ್ದಿನ್ ಕೊಪ್ಪಳ ಇವರನ್ನು ನೇಮಕ ಮಾಡಿದರು.
ರಾಜ್ಯ ಉಪಾಧ್ಯಕ್ಷರಾಗಿ ಶ್ರೀಕಾಂತ್ ಸಾಲಿಯಾನ್, ಹಬೀಬುಲ್ಲಾಹ್ ಖಾನ್ ಮತ್ತು ಮುಜಾಹಿದ್ ಪಾಶ ಖುರೈಷಿ ಇವರನ್ನು ನೇಮಕ ಮಾಡಲಾಯಿತು. ರಾಜ್ಯ ಕಾರ್ಯದರ್ಶಿಗಳಾಗಿ ಅಜಿಜ್ ಜಾಗೀರ್ದಾರ್, ತಲತ್ ಯಾಸ್ಮಿನ್, ಕೆ ಟಿ ಬಷೀರ್, ಆಸೀಫ್ ಬಿಳಿಕುದ್ರಿ,ರಿಯಾಜ್ ಅಹ್ಮದ್ ಪಾಶಾ, ಮತ್ತು ಮುಬೀನ್ ಅಹ್ಮದ್ ಇವರನ್ನು ನೇಮಕ ಮಾಡಲಾಯಿತು. ರಾಜ್ಯ ಮಹಿಳಾ ಘಟಕ ಅದ್ಯೆಕ್ಷೆಆಗಿ ಸಾಬಿಹಾ ಪಟೇಲ್ ಇವರನ್ನು ನೇಮಕ ಮಾಡಲಾಯಿತು.