ಫೈರ್ಮ್ಯಾನ್ ಇಂದ ಲವ್, ಸೆಕ್ಸ್, ದೋಖಾ – ದೈಹಿಕ ಸಂಪರ್ಕ ಬೆಳೆಸಿ ,ಯುವತಿಗೆ ಕೈ ಕೊಟ್ಟ ಫೈರ್ ಮ್ಯಾನ್
ವಿಜಯಪುರ-ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿತಾಲೂಕಿನ ಹಿಟ್ಟನಹಳ್ಳಿ ತಾಂಡಾದಲ್ಲಿ ಯುವಕನೋರ್ವ ನಿನ್ನನ್ನೇ ಮದುವೆಯಾಗುತ್ತೇನೆ ಎಂದು ಪ್ರೀತಿ ಪ್ರೇಮದ ಹೆಸರಿನಲ್ಲಿ ದೈಹಿಕ ಸಂಪರ್ಕ ಬೆಳೆಸಿ ಯುವತಿಗೆ ಮೋಸ ಮಾಡಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
ಬಿಸಿಎ ಪದವೀಧರೆಯಾಗಿರುವ ಸಂಗೀತಾ ಎಂಬಾಕೆಯನ್ನು, ಫೈರ್ ಮ್ಯಾನ್ ಆಗಿ ಕೆಲಸ ಮಾಡುತ್ತಿರುವ ಸಚಿನ್ ರಾಠೋಡ್ ಎಂಬಾತ ಮೋಸ ಮಾಡಿದ್ದಾನೆ.
ಆತನನ್ನೇ ನಂಬಿದ ಯುವತಿ ಸರ್ವಸ್ವವನ್ನೂ ಆತನಿಗೆ ನೀಡಿ ಮೋಸ ಹೋಗಿದ್ಧಾಳೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ನೀಡಿ 25 ದಿನಗಳು ಕಳೆದರೂ ಪೊಲೀಸರು ಮಾತ್ರ ಇನ್ನೂ ಆತನನ್ನು ಬಂಧಿಸಿಲ್ಲ ಎಂದು ಯುವತಿ ಆರೋಪಿಸಿದ್ದು ಇದೀಗ ಆಕೆ ನ್ಯಾಯಕ್ಕಾಗಿ ವಿಜಯಪುರ ಡಿಸಿ ಕಚೇರಿ ಬಳಿ ಕುಳಿತಿದ್ದಾಳೆ.
ಘಟನೆಯ ವಿವರ :
ದೇವರಹಿಪ್ಪರಗಿ ತಾಲೂಕಿನ ಹಿಟ್ನಳ್ಳಿಗೆ ಯುವತಿಯ ಅಕ್ಕನನ್ನು ಮದುವೆ ಮಾಡಿ ಕೊಡಲಾಗಿತ್ತು. ಅಕ್ಕನ ಊರಿಗೆ ಹೋಗಿದ್ದ ವೇಳೆ ಅದೇ ಊರಿನ ಸಚಿನ್ ರಾಠೋಡ್ ಪರಿಚಯವಾಗಿದ್ದ. ಬಳಿಕ ಸ್ನೇಹ ಪ್ರೀತಿಗೆ ತಿರುಗಿತ್ತು.
ಅಗ್ನಿಶಾಮಕ ದಳದಲ್ಲಿ ಸೇವೆ ಸಲ್ಲಿಸುತ್ತಿದ್ದ ಸಚಿನ್, ತನಗೆ ಪ್ರಮೋಷನ್ ಆಗುತ್ತದೆ. ಅದಾದ ಬಳಿಕ ಮದುವೆ ಆಗುತ್ತೇನೆ ಎಂದು ತಿಳಿಸಿದ್ದ. ಅಲ್ಲದೇ ಹಲವು ಸಲ ಯುವತಿಯ ಬಳಿ ಸಾಕಷ್ಟು ಹಣವನ್ನೂ ಪಡೆದಿದ್ದಾನೆ ಎನ್ನಲಾಗಿದೆ.
ಸಚಿನ ಕಳೆದ ನಾಲ್ಕು ವರ್ಷಗಳಲ್ಲಿ ಲಾಡ್ಜ್ಗೆ ಹಾಗೂ ಭಟ್ಕಳಕ್ಕೆ ಯುವತಿಯನ್ನು ಕರೆಸಿಕೊಂಡು ಸಾಕಷ್ಟು ಬಾರಿ ದೈಹಿಕ ಸಂಪರ್ಕ ಹೊಂದಿದ್ದಾನೆ. ಈಗ ಆತ ವರಸೆ ಬದಲಾಯಿಸಿ ಕೈ ಕೊಟ್ಟಿದ್ದಾನೆ. ಅಷ್ಟೇ ಅಲ್ಲದೇ ಯುವತಿಗೆ ನೇರವಾಗಿ ನೀನು ಬರೆ ಟೈಂ ಪಾಸ್ ಎಂದಿದ್ದು ಹಣ ನೀಡಲು ಮುಂದಾಗಿದ್ದಾನೆ.