ಚಿತ್ರದುರ್ಗ-ಮುರುಘಾ ಮಠದ ಮುರುಘಾ ಶ್ರೀಗಳಿಂದ ಮಠದ ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಮುರುಘಾ ಶರಣರ ವಿರುದ್ಧ ಪೊಲೀಸರು 694 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.
ಚಾರ್ಜ್ ಶೀಟ್ ನಲ್ಲಿ ಸಾಕಷ್ಟು ಶಾಕಿಂಗ್ ಅಂಶಗಳನ್ನು ಉಲ್ಲೇಖ ಮಾಡಲಾಗಿದೆ.
ಮುರುಘಾ ಶ್ರೀ ಪ್ರತಿ ಭಾನುವಾರ ಮಕ್ಕಳನ್ನು ಕೋಣೆಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದು, ಎರಡನೇ ಆರೋಪಿ ವಾರ್ಡನ್ ರಶ್ಮಿ ಮಕ್ಕಳನ್ನು ಕೋಣೆಗೆ ಕರೆದುಕೊಂಡು ಬರುತ್ತಿದ್ದಳು, ಒಪ್ಪದವರಿಗೆ ಬೆದರಿಕೆ ಹಾಕಲಾಗುತ್ತಿತ್ತು ಎಂದೂ ಆರೋಪಿಸಲಾಗಿದೆ.
ರಶ್ಮಿ ಕೈಗೆ ಇಬ್ಬರು ಮಕ್ಕಳ ಹೆಸರನ್ನು ಬರೆದು ಮುರುಘಾ ಶ್ರೀ ಕೊಡುತ್ತಿದ್ದರು, ನಂತರ ಸ್ವಾಮಿ ಸೂಚಿಸಿದ ಮಕ್ಕಳನ್ನು ರಶ್ಮಿ ಕರೆದುಕೊಂಡು ಬರುತ್ತಿದ್ದಳು.ಒಪ್ಪದಿದ್ದವರಿಗೆ ಬೆದರಿಕೆ ಹಾಕಲಾಗುತ್ತಿತ್ತು ಎಂದು ಪೊಲೀಸರು ದೋಷಾರೋಪ ಪಟ್ಟಿಯಲ್ಲಿ ಆರೋಪಿಸಿದ್ದಾರೆ.
ಟ್ಯೂಷನ್ ಮುಗಿದ ನಂತರ ಇಬ್ಬರು ಹುಡುಗಿಯರನ್ನು ಅಲ್ಲಿಯೇ ಉಳಿಸಿಕೊಂಡು ಕಸ ಹೊಡೆಯಬೇಕು ಎಂದು ನಿಲ್ಲಿಸುತ್ತಿದ್ದರು.ವಿದ್ಯಾರ್ಥಿನಿಯರನ್ನು ಪಕ್ಕದಲ್ಲಿ ಕೂರಿಸಿಕೊಂಡು ಹಣ್ಣು, ಡ್ರೈಫೂಟ್ಸ್ ಕೊಡುತ್ತಿದ್ದ ಮುರುಘಾ ಶ್ರೀ ವಿದ್ಯಾರ್ಥಿನಿಯರ ಖಾಸಗಿ ಅಂಗಗಳನ್ನು ಮುಟ್ಟುತ್ತಿದ್ದರು. ಬಳಿಕ ಬೆತ್ತಲಾಗಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಮಾಡುತ್ತಿದ್ದರು ಚಾರ್ಜ್ಶೀಟ್ನಲ್ಲಿ ಹೇಳಲಾಗಿದೆ.
ಇದಲ್ಲದೆ ಶ್ರೀಗಳು ಮಕ್ಕಳ ಎದುರಿಗೆ ಮಧ್ಯಪಾನ ಮಾಡಿ ಅವಾಚ್ಯವಾಗಿ ನಿಂದಿಸುತ್ತಿದ್ದರು. ಬೆಂಗಳೂರಿನ ವಿದ್ಯಾರ್ಥಿನಿಯೊಬ್ಬಳನ್ನು ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸ್ವಾಮೀಜಿ ಕಡೆಯವರು ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆಂದು ಹಾಸ್ಟೆಲ್ನಲ್ಲಿ ಚರ್ಚೆಯಾಗುತ್ತಿದೆ ಎಂದು ಮಕ್ಕಳು ಹೇಳಿರುವ ಬಗ್ಗೆ ತಿಳಿದು ಬಂದಿದೆ.