ಪತ್ನಿಯ ಶೀಲ ಶಂಕಿಸಿ ಹೆಂಡತಿಯ ತಲೆ ಮೇಲೆ ಕಲ್ಲು ಎತ್ತು ಹಾಕಿ ಬರ್ಬರವಾಗಿ ಕೊಲೆ ಮಾಡಿದ ಸರಕಾರಿ ಶಾಲೆ ಶಿಕ್ಷಕ ಇಜಾಜ ಅಹ್ಮದ್
ಕಲಬುರಗಿ -ಕಲಬುರಗಿ ನಗರದ ಅಂಬಿಕಾ ನಗರದಲ್ಲಿ ಗಂಡನೋರ್ವ ಪತ್ನಿಯ ಶೀಲ ಶಂಕಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಕೊಲೆಯಾದ ದುರ್ದೈವಿ ಫರೀದಾ ಬೇಗಂ(39) ಎಂಬಾಕೆ ಗಂಡನಿಂದ ಎಂದು ತಿಳಿದು ಬಂದಿದೆ. ಏಜಾಜ್ ಅಹ್ಮದ್ ಎಂಬಾತನೇ ಕೊಲೆ ಮಾಡಿದ ಆರೋಪಿ.
ಏಜಾಜ್ ಅಹ್ಮದ್ 13 ವರ್ಷದ ಹಿಂದೆ ಫರೀದಾ ಬೇಗಂನನ್ನು ಮದುವೆಯಾಗಿದ್ದನು. ಇಬ್ಬರು ಸಹ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಇನ್ನು ಏಜಾಜ್ ಅಹ್ಮದ್ ತನ್ನ ಹೆಂಡತಿಯನ್ನು ಅನೈತಿಕ ಸಂಬಂಧ ಹಾಗೂ ವರದಕ್ಷಣೆ ಕಿರುಕುಳ ನೀಡಿ ಪೀಡಿಸುತ್ತಿದ್ದನಂತೆ. ಶಾಲೆಗೆ ಹೋಗದಂತೆ ದಿನಾಲು ತಡೆಯುತ್ತಿದ್ದ ಎಂದು ತಿಳಿದುಬಂದಿದೆ.
ಅನೈತಿಕ ಸಂಬಂಧದ ಅನುಮಾನವಿದ್ದ ಆತ ತನ್ನ ಪತ್ನಿಯನ್ನು ರಾತ್ರಿ ವೇಳೆ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ. ಸ್ಟೇಷನ್ ಬಜಾರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.