ಕರ್ನಾಟಕ ಅಲ್ಪ ಸಂಖ್ಯಾತ ಕಾಂಗ್ರೆಸ್‌ನ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಎಂ.ಶರೀಫ್ ಭಟ್ಕಳ ಅವರಿಗೆ ರಾಜ್ಯ ಸುನ್ನೀ ನಾಯಕರಿಂದ ಅಭಿನಂದನೆ ಮತ್ತು ಸನ್ಮಾನ
ಭಟ್ಕಳ-ಇತ್ತೀಚೆಗೆ ಕರ್ನಾಟಕ ಅಲ್ಪ ಸಂಖ್ಯಾತ ಕಾಂಗ್ರೆಸ್‌ನ ರಾಜ್ಯ ಸಂಘಟನಾ ಕಾರ್ಯದರ್ಶೀಯಾಗಿ ಆಯ್ಕೆಯಾದ ಎಸ್.ವೈ.ಎಸ್.ಉತ್ತರ ಕನ್ನಡ ಜಿಲ್ಲಾಧ್ಯಕ್ಷರೂ ಸಮಾಜ ಸೇವಕರೂ ಆದ ಕೆ.ಎಂ.ಶರೀಫ್ ಅವರನ್ನು ಭಟ್ಕಳದಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಎಸ್.ವೈ.ಎಸ್.ರಾಜ್ಯಾಧ್ಯಕ್ಷ ಡಾ.ಎಮ್ಮೆಸ್ಸೆಂ ಝೈನೀ ಕಾಮಿಲ್, ಇಹ್ಸಾನ್ ಕರ್ನಾಟಕ ಉಪಾಧ್ಯಕ್ಷ ಬಿ.ಎ.ಇಬ್ರಾಹೀಂ ಸಖಾಫಿ, ಶಿವಮೊಗ್ಗ ಜಿಲ್ಲಾ ಎಸ್.ವೈ.ಎಸ್. ಕಲ್ಚರಲ್ ಸೆಕ್ರೆಟರಿ ಸೈದಲವಿ ಸಖಾಫಿ ಗಂಗಾವಳಿ ಸನ್ಮಾನಿಸಿದರು.
ಎಸ್ಸೆಸ್ಸೆಫ್ ಸಂಘಟನೆಯ ಮೂಲಕ ಸಾರ್ವಜನಿಕ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಶರೀಫ್ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯ ವ್ಯಕ್ತಿಯಾಗಿ ಗುರುತಿಸಲ್ಪಟ್ಟು ಭಟ್ಕಳ ಮತ್ತು ಪರಿಸರಸ ಸರ್ವ ಜನ ಬಾಂಧವರ ಆಪ್ತರಾಗಿ ಚಿರಪರಿಚಿತರಾಗಿದ್ದಾರೆ.ಭಟ್ಕಳದಲ್ಲಿ ಸರ್ವ ಧರ್ಮದವರೊಂದಿಗೆ ಉತ್ತಮ ಸ್ನೇಹ ಸಂಭದ ಹೊಂದಿ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ.