ಕಡು ಭ್ರಷ್ಟ ಲಂಚಬಾಕ ಅಧಿಕಾರಿ ವಿಠಲ 30,000 ಸಾವಿರ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ
ಶಿವಮೊಗ್ಗ-ಶಿವಮೊಗ್ಗ ಕಾರ್ಖಾನೆ ಮತ್ತು ಬಾಯ್ಲರುಗಳ ಇಲಾಖೆಯ ಕಾರ್ಯನಿರ್ವಾಹಕ ಹಾಗೂ ಆಡಳಿತ ಸಹಾಯಕ ಲಂಚದ ಆರೋಪದ ಅಡಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ನಗರದ ವಿನೋಬನಗರ ವಾಸಿ ರಾಕೇಶ್ ಪಟೇಲ್ ಎಂಬುವವರ ಪಟೇಲ್ ಟೆಕ್ ಇಂಜಿನಿಯರಿಂಗ್ ಪ್ರೈ.ಲಿ ಎಂಬ ಕಾರ್ಖಾನೆಯ ಲೈಸನ್ಸ್‍ನ್ನು ರದ್ದುಪಡಿಸಲು ಲಂಚ ಪಡೆದ ಶಿವಮೊಗ್ಗ ಕಾರ್ಖಾನೆ ಮತ್ತು ಬಾಯ್ಲರುಗಳ ಇಲಾಖೆ, ಸಹಾಯಕ ನಿರ್ದೇಶಕರ ಕಚೇರಿಯ ಕಾರ್ಯನಿರ್ವಾಹಕ ಹಾಗೂ ಆಡಳಿತ ಸಹಾಯಕ ವಿಠಲ್ ನಾಯ್ಕ್ ಎಂಬುವವರನ್ನು ಲೋಕಾಯುಕ್ತ ಇಲಾಖೆಯು ಬಂಧಿಸಿದೆ.
ರಾಕೇಶ್ ಪಟೇಲ್ ಕಛೇರಿಗೆ ಭೇಟಿ ನೀಡಿ ತಮ್ಮ ಕಾರ್ಖಾನೆಯ ಲೈಸನ್ಸ್ ರದ್ದುಪಡಿಸಿದ ಬಗ್ಗೆ ಪ್ರಮಾಣ ಪತ್ರ ನೀಡಲು ಕೋರಿದ ಸಮಯದಲ್ಲಿ ಕಛೇರಿಯ ಸೂಪರ್‍ವೈಸರ್ ಆದ ವಿಠಲನಾಯ್ಕ ಹಣಕ್ಕೆ ಬೇಡಿಕೆ ಇಟ್ಟಿದ್ದು, 15,000/-ರೂಗಳನ್ನು ಪಡೆದಿದ್ದರು.
ಆದರೂ ಲೈಸನ್ಸ್ ರದ್ದತಿ ಪ್ರಮಾಣ ಪತ್ರ ನೀಡಿರುವುದಿಲ್ಲ. ದೂರವಾಣಿ ಮುಖಾಂತರ ಪ್ರಮಾಣ ಪತ್ರದ ಬಗ್ಗೆ ವಿಚಾರಿಸಿದಾಗ ಅವರು ನಾವು ತಿಳಿಸಿದ ಹಣ ನೀಡಿದ ನಂತರ ಪ್ರಮಾಣ ಪತ್ರ ನೀಡುವುದಾಗಿ ತಿಳಿಸಿದರು. ಆರ್ಥಿಕವಾಗಿ ನಷ್ಟದಲ್ಲಿದ್ದರೂ ಸಹ ಪುನಃ ರೂ. 30,000/- ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದು ರಾಕೇಶ್ ಪಟೇಲ್‍ಗೆ ಲಂಚದ ಹಣ ಕೊಡಲು ಇಷ್ಟವಿಲ್ಲದ ಕಾರಣ ದಿನಾಂಕ:03-03-2023 ರಂದು ಲೋಕಾಯುಕ್ತ ಕಛೇರಿಗೆ ಬಂದು ಮಾಹಿತಿ ನೀಡಿ ಕೊಟ್ಟ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಲಾಗಿರುತ್ತದೆ.
ಅದರಂತೆ ವಿಠಲ್ ನಾಯ್ಕ ಲಂಚದ ಹಣ ರೂ 30,000/- ಪಡೆಯುತ್ತಿರುವ ಸಮಯದಲ್ಲಿ ಚಿತ್ರದುರ್ಗ ಕರ್ನಾಟಕ ಲೋಕಾಯುಕ್ತ ಕಛೇರಿ ಪೊಲೀಸ್ ಅಧೀಕ್ಷಕ ಎನ್. ವಾಸುದೇವರಾಮ ಮತ್ತು ಉಮೇಶ ಈಶ್ವರ ನಾಯ್ಕ ಪೆÇಲೀಸ್ ಉಪಾಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ಇವರ ಮಾರ್ಗದರ್ಶನದಲ್ಲಿ ಪ್ರಕರಣವನ್ನು ದಾಖಲಿಸಿ ಅಪಾಧಿತನನ್ನು ಬಂಧಿಸಿದ್ದಾರೆ.
ಹಾಗೂ ಹೆಚ್. ರಾಧಕೃಷ್ಣ, ಪೆÇಲೀಸ್ ನಿರೀಕ್ಷಕರು, ಕ.ಲೋ., ಶಿವಮೊಗ್ಗ ಇವರು ತನಿಖೆ ಕೈಗೊಂಡಿರುತ್ತಾರೆ.
ಶಿವಮೊಗ್ಗ ಲೋಕಾಯುಕ್ತ ಕಛೇರಿಯ ಪೆÇಲೀಸ್ ಸಿಬ್ಬಂದಿಗಳಾದ ಪ್ರಸನ್ನ ಸಿ.ಹೆಚ್.ಸಿ, ಬಿ. ಲೋಕೇಶಪ್ಪ ಸಿ.ಹಚ್.ಸಿ. ವಿ.ಎ ಮಹಂತೇಶ ಸಿ.ಹೆಚ್.ಸಿ, ಬಿ.ಟಿ ಚನ್ನೇಶ ಸಿ.ಪಿ.ಸಿ, ಪ್ರಶಾಂತ್ ದಾಳಿಯಲ್ಲಿ ಭಾಗವಹಿಸಿದ್ದರು.