*ದಾವಣಗೆರೆ ಗ್ರಾಮಾಂತರ ಪೊಲೀಸರ ಕಾರ್ಯಾಚರಣೆ ಅಂತರ ರಾಜ್ಯ ಟೈರ್ ಕಳ್ಳರ ಬಂಧನ*
ದಾವಣಗೆರೆ ಗ್ರಾಮಾಂತರ ಹಾಗೂ ನಗರದ ಹೊರವಲಯದ ಹೈವೇಗಳಲ್ಲಿ ರಾತ್ರಿ ವೇಳೆ ವಿಶ್ರಾಂತಿಗಾಗಿ ಢಾಭಗಳ ಮುಂದೆ ನಿಲ್ಲಿಸಿದ ಬಾಡಿ ಕಟ್ಟಿಸಲು ಹೊರರಾಜ್ಯಗಳಿಗೆ ಹೈವೇಗಳಲ್ಲಿ ಸಂಚರಿಸುವ ಲಾರಿ ಸರ್ವಿಸ್ ಸೆಂಟರ್ಗೆ ಬಂದಂತಹ ಲಾರಿಗಳನ್ನೇ ಟಾರ್ಗೆಟ್ ಮಾಡಿ ಆ ವಾಹನಗಳಲ್ಲಿ ಅಳವಡಿಸಿದ ಹೊಸ ಟೈರ್ ಹಾಗೂ ಡಿಸ್ಕ್ ಬ್ಯಾಟರಿಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತಿದ್ದ ಅಂತರ್ ರಾಜ್ಯ ಕಳ್ಳರನ್ನು ವಶಪಡಿಸಿಕೊಳ್ಳುವಲ್ಲಿ ದಾವಣಗೆರೆ ಗ್ರಾಮಾಂತರ ಪಿ.ಎಸ್.ಐ ಶ್ರೀ ಹಾರೂನ್ ಅಖ್ತರ್ ಹಾಗೂ ತಂಡ ಮಹಾರಾಷ್ಟ್ರ ದ ಉಸ್ಮಾನಬಾದ್ ನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದೆ
27-01-2023 ರಂದು ಶ್ರೀ ಶಂಕ್ರಪ್ಪ ಕೆ.ಎಸ್. ತಂದೆ ಶಿವಾನಂದಪ್ಪ 50 ವರ್ಷ, ಲಿಂಗಾಯಿತ ಜನಾಂಗ, ಎ.ಎಂ.ಎಲ್, ಮೋಟಾರ್ ಪ್ರೈ, ಲಿಮಿಟೆಡ್, ದಾವಣಗೆರೆಯಲ್ಲಿ ಮಾನೇಜರ್ ಕೆಲಸ, ದಾವಣಗೆರೆ ನಗರ ರವರು ತಮ್ಮ ಕಂಪನಿಯ ವರ್ಕ ಶಾಪ್ ನಲ್ಲಿ 12 ಲಾರಿಯ ಟೈರುಗಳು ಡಿಸ್ಕ್ ಸಮೇತ ಅವುಗಳ ಅಂದಾಜು ಬೆಲೆ 3,60,000/- ರೂ. ಎರಡು ಲಾರಿಯ ಬ್ಯಾಟರಿಗಳು ಅಂದಾಜು ಬೆಲೆ 25,000/- ರೂ, ಕಳ್ಳತನವಾದ ಒಟ್ಟು ಮೌಲ್ಯ 3,85,000/- ರೂ. ಮೌಲ್ಯದ ಮಾಲುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಪತ್ತೆ ಮಾಡಿಕೊಡಿ ಅಂತಾ ನೀಡಿದ ದೂರಿನ ಮೇರೆಗೆ ದಾವಣಗೆರೆ ಗ್ರಾಮಾಂತರ ಠಾಣಾ ಗುನ್ನೆ ನಂ: 27/2023 ಕಲಂ: 379 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು, ಸದರಿ ಕಳ್ಳತನವಾದ ಮಾಲು ಮತ್ತು ಆರೋಪಿತರ ಪತ್ತೆಗಾಗಿ ಪೊಲೀಸ್ ಅಧೀಕ್ಷಕರು ದಾವಣಗೆರೆ ಜಿಲ್ಲೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಕನ್ನಿಕಾ ಸವಾಲ್ ರವರು ಮತ್ತು ಶ್ರೀ ಲಿಂಗನಗೌಡ ನೇಗಳೂರು ಪಿಐ ಇವರ ಮಾರ್ಗದರ್ಶನದಲ್ಲಿ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ರವರಾದ ಶ್ರೀ ಹಾರೂನ್ ಅಖ್ತರ್ ಎ.ಆರ್.ಮುಂದಿನಮನಿ ಶ್ರೀ ಯಾಸೀನ್ ಉಲ್ಲಾ ಎ.ಎಸ್‌ಐ ಶ್ರೀ ಗುರುಶಾಂತಯ್ಯ, ಎ.ಎಸ್.ಐ, ಮತ್ತು ಸಿಬ್ಬಂದಿಗಳಾದ ಶ್ರೀ ದೇವೇಂದ್ರ ನಾಯ್ಕ, ಶ್ರೀ ಅಣ್ಣಯ್ಯ, ಶ್ರೀ ಸೈಯದ್ ಗಫಾರ್ ಶ್ರೀ ಹನುಮಂತ ಕವಾಡಿ, ಶ್ರೀ ನಾಗರಾಜಯ್ಯ, ಮಹಮ್ಮದ್ ಯೂಸೂಫ್ ಅತ್ತಾರ್ ರವರು ಸದರಿ ಕೇಸಿನ ಆರೋಪಿತರಾದ ಮಹಾರಾಷ್ಟ್ರ ರಾಜ್ಯದ ಉಸ್ಮಾನಾಬಾದ್ ಜಿಲ್ಲೆಯ, ವಾಶಿ ತಾಲೂಕಿನ ಎ1 ಪ್ರಕಾಶ್ ನಾನಾ ಶಿಂಧೆ ಎ4 ಅನಿಲ್ ಬಬನ್ ಶಿಂಧೆ, ಎ5 ದತ್ತಾ ಗೋವರ್ಧನ್ ಶಿಂಧೆ ಎ6 ಸಂತೋಷ್ ಹಿಮ್ಮತ್ ಕಾಳೆ ಮತ್ತು ಎ7 ಉಮೇಶ್, ದಿಗಂಬರ್ ಲಾಖೆ ರವರನ್ನು ಪತ್ತೆ ಹಚ್ಚಿ: ಆರೋಪಿತರಿಂದ ಸುಮಾರು 22,00,000/- ರೂ. ಬೆಲೆಯ ಬಾಳುವ ಎರಡು ಲಾರಿ ಮತ್ತು 22 ಟೈರುಗಳ ಅಂದಾಜು ಬೆಲೆ 8,20,000/- ರೂಗಳು, ಸದರಿ ವಶಪಡಿಸಿಕೊಂಡ ಮಾಲಿನ ಒಟ್ಟು ಮೌಲ್ಯ 30,20,000/- ರೂಗಳನ್ನು ವಶಕ್ಕೆ ಪಡೆದುಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಆರೋಪಿತರು ಹಾಲಿ ನ್ಯಾಯಾಂಗ ಬಂಧನದಲ್ಲಿದ್ದು ಉಳಿದ ಆರೋಪಿತರಾದ ಎ2 ಲಾಲಜಿಂಗ ಕಾಳೆ ಮತ್ತು ಎ3 ಶ್ರೀರಾಮಜಿಂಗ್ ಕಾಳೆ ತಲೆಮರೆಸಿಕೊಂಡಿರುತ್ತಾರೆ.
ಸದರಿ ಕಾರ್ಯಾಚರಣೆಯನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ದಾವಣಗೆರೆ ಜಿಲೆ ಮತ್ತು ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷರು, ಹಾಗೂ ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಕನ್ನಿಕಾ ಸವಾಲ್ ರವರು ಮತ್ತು ಶ್ರೀ ಲಿಂಗನಗೌಡ ನೇಗಳೂರು ಪಿಐ, ಇವರ ಮಾರ್ಗದರ್ಶನದಲ್ಲಿ, ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ರವರಾದ ಶ್ರೀ ಹಾರೂನ್ ಆರ್, ಶ್ರೀ ಎ.ಆರ್.ಮುಂದಿನಮನಿ, ಶ್ರೀ ಯಾಸೀನ್ ಉಲಾ, ಎ.ಎಸ್.ಐ, ಶ್ರೀ ಗುರುಶಾಂತಯ್ಯ ಎ.ಎಸ್.ಐ ಶ್ರೀ ದೇವೇಂದ್ರ ನಾಯ, ಶ್ರೀ ಹನುಮಂತ ಕವಾಡಿ, ಶ್ರೀ ಸೈಯದ್ ಗಫಾರ್, ಶ್ರೀ ಅಣ್ಣಯ್ಯ, ಶ್ರೀ ಮಹ್ಮದ್ ಯೂಸೂಫ್ ಅತ್ತಾರ್, ಶ್ರೀ ನಾಗರಾಜಯ್ಯ ಮತ್ತು ಗಣಕಯಂತ್ರ ವಿಭಾಗದ ಶ್ರೀ ರಾಘವೇಂದ್ರ ಮತ್ತು ಶ್ರೀ ಶಾಂತಕುಮಾರ್ ರವರು ಭಾಗವಹಿಸಿದ್ದು, ಭಾಗವಹಿಸಿದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಮಾನ ಎಸ್.ಪಿ ಸಾಹೇಬರವರು ಪ್ರಶಂಸೆಯನ್ನು ವ್ಯಕ್ತಪಡಿಸಿರುತ್ತಾರೆ,