ರೈತ ಸಂಘಟನೆ ಮಹಿಳಾ ನಾಯಕಿ
ಶೋಭಾ ಶವ ಅರೆ ಬೆಂದ ಸ್ಥಿತಿಯಲ್ಲಿ ಪತ್ತೆ
ಕೋಲಾರ -ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ನಾಯಕರಹಳ್ಳಿ ಬಳಿಯ ನಿರ್ಜನ ಪ್ರದೇಶದಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮಹಿಳೆಯೊಬ್ಬಳ ಶವ ಪತ್ತೆಯಾದ ಘಟನೆ ನಡೆದಿದೆ.
ಮೃತ ಮಹಿಳೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಶೋಭಾ ಎಂದು ತಿಳಿದುಬಂದಿದೆ. ಈಕೆ ಪಟ್ಟಣದ ಲಕ್ಷ್ಮೀ ಪ್ರಿಯಾ ಹರ್ಬಲ್ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದರು. ಮೊದಲ ಪತಿ ಮೃತಪಟ್ಟಿದ್ದು, ಈಗ ಎರಡನೇ ಪತಿ ವೆಂಕಟರಾಮ್ ಎಂಬುವವರ ಜೊತೆಗೆ ಶ್ರೀನಿವಾಸಪುರದಲ್ಲಿ ವಾಸ ಮಾಡುತ್ತಿದ್ದರು.
ಶೋಭಾ ತನ್ನಿಬ್ಬರು ಮಕ್ಕಳನ್ನು ಓದಿಸುತ್ತಾ, ತಾನು ಬ್ಯೂಟಿಪಾರ್ಲರ್, ರೈತ ಸಂಘಟನೆ, ಮಹಿಳಾ ಸಂಘಟನೆ ಅಂತ ಓಡಾಡುತ್ತಿದ್ದರು.
ರಮೇಶ್ ಈಕೆಯ ಗಂಡ ವೆಂಕಟರಾಂ ಸ್ನೇಹಿತರಾಗಿದ್ದು, ರಮೇಶ್ ಜೊತೆಗೆ ಅಕ್ರಮ ಸಂಬಂಧದ ಶಂಕೆ ಜೊತೆಗೆ ಹಣದ ವ್ಯವಹಾರವಿದ್ದು, ಈ ವಿಚಾರದಲ್ಲಿ ಇಬ್ಬರ ನಡುವೆ ಉಂಟಾಗಿದ್ದ ವಿರಸದಿಂದಲೇ ಕೊಲೆ ಮಾಡಲಾಗಿದೆ ಅನ್ನೋದು ಮೇಲ್ನೋಟಕ್ಕೆ ತಿಳಿದು ಬಂದಿದೆ.
ಪೊಲೀಸರು ಆಕೆಯ ಮೊಬೈಲ್ ಟವರ್ ಲೊಕೇಶನ್ ಹಾಗೂ ಅವರು ನಿನ್ನೆ ಯಾರೊಂದಿಗೆ ಇದ್ದರು ಅನ್ನೋದನ್ನು ವಿಚಾರಣೆ ನಡೆಸಿದಾಗ ಆಕೆಯ ಸ್ನೇಹಿತ ರಮೇಶ್ ಅನ್ನೋದು ತಿಳಿದು ಬಂದಿದೆ. ಇನ್ನೂ ಲಾಸ್ಟ್ ಕಾಲ್ ಪತಿ ವೆಂಕಟರಾಮ್ ಮಾಡಿರುವುದು ಗೊತ್ತಾಗಿದೆ. ಕೊಲೆ ಯಾರು? ಯಾಕೆ ಮಾಡಿದ್ರೂ ಅನ್ನೋದು ಪೊಲೀಸ್ ತನಿಖೆ ಬಳಿಕವಷ್ಟೇ ಬಯಲಾಗಲಿದೆ.