ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ರಾಷ್ಟ್ರೀಯ ಅಧ್ಯಕ್ಷರು , ಸಂಸದರು ಆದ ಇಮ್ರಾನ್ ಪ್ರಥಪಗ್ರಹಿ ಅವರಿಗೆ ಭಟ್ಕಳದ ಕೆ.ಎಂ.ಷರೀಫ್ ಅವರಿಂದ ಸನ್ಮಾನ
ಬೆಂಗಳೂರು – ಶನಿವಾರ ಬೆಂಗಳೂರಿನ ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ನ ಅಲ್ಪಸಂಖ್ಯಾತ ರಾಷ್ಟ್ರೀಯ ಅಧ್ಯಕ್ಷರು , ಸಂಸದರು ಆದ ಇಮ್ರಾನ್ ಪ್ರಥಪಗ್ರಹಿ ಅವರನ್ನು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಘಟಕದ ರಾಜ್ಯ ಸಂಘಟನೆ ಕಾರ್ಯದರ್ಶಿ ಕೆ.ಎಂ ಷರೀಫ್ ಭಟ್ಕಳ ಅವರು ಶಾಲು ಹೊದಿಸಿ ಸನ್ಮಾನಿಸದರು. ನಂತರ ಕರ್ನಾಟಕ ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಸಂಘಟನೆ ವಿಚಾರವಾಗಿ ಚರ್ಚೆ ನಡೆಸಿದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತು ಭಟ್ಕಳದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಸಂಘಟನೆ ಬಗ್ಗೆ ಕೆಲವು ಗಂಭೀರ ವಿಚಾರಗಳ ಚರ್ಚೆ ನಡೆಸಿದರು ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.