ಅಘನಾಶಿನಿ ನದಿಯ ಅಂಚಿನಲ್ಲಿರುವ ಗದ್ದೆಗೆ ಬೇಲಿನಿರ್ಮಿಸಲು ಹೋಗಿದ್ದ ಸಂದರ್ಭದಲ್ಲಿ ಕಾಲುಜಾರಿ ನೀರಿಗೆಬಿದ್ದು ಮೃತರಾಗಿದ್ದ ಮನೆಗೆ ಕಂದಾಯ ಸಚಿವರ ಭೇಟಿ ೫ ಲಕ್ಷ ಪರಿಹಾರ*
ಕುಮಟಾ ತಾಲೂಕಿನ ಪೋಸ್ಟ್ ಬೆಟ್ಕುಳಿಯ ನಿವಾಸಿಗಳಾಗಿದ್ದ ಸತೀಶ್ ಪಾಂಡುರಂಗ ನಾಯ್ಕ (38) ಮತ್ತು ಉಲ್ಲಾಸ ಜಟ್ಟಿ ಗಾವಡಿ (50) ಇವರು ಗುರುವಾರ ಅಘನಾಶಿನಿ ನದಿಯ ಅಂಚಿನಲ್ಲಿರುವ ಗದ್ದೆಗೆ ಬೇಲಿನಿರ್ಮಿಸಲು ಹೋಗಿದ್ದ ಸಂದರ್ಭದಲ್ಲಿ ಕಾಲುಜಾರಿ ನೀರಿಗೆ ಬಿದ್ದು ಮೃತರಾಗಿದ್ದರು.
ಕಂದಾಯ ಇಲಾಖೆಯ ಸಚಿವರಾದ ಕೃಷ್ಣಭೈರೇಗೌಡ, ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳು ವೈದ್ಯ, ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರ ಕೆ. ಶೆಟ್ಟಿ ಅವರು ಇಂದು ಮೃತರ ಮನೆಗೆ ತೆರಳಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಸರ್ಕಾರದಿಂದ ತಲಾ 5,00,000 ರೂಪಾಯಿಗಳ ಚೆಕ್ ಅನ್ನು ಮೃತರ ಮನೆಯವರಿಗೆ ಹಸ್ತಾಂತರ ಮಾಡಿದರು.
ಜಿಲ್ಲಾಧಿಕಾರಿ ಶ್ರೀ ಪ್ರಭುಲಿಂಗ ಕವಳಿಕಟ್ಟಿ, ಸಹಾಯಕ ಆಯುಕ್ತ ಶ್ರೀ ರಾಘವೇಂದ್ರ ಜಗಲಾಸರ, ತಹಶೀಲ್ದಾರ್ ಶ್ರೀ ನಾಯಕಲಮಠ, ತಾ. ಪಂ. ಕಾರ್ಯನಿರ್ವಣಾಧಿಕಾರಿ ಶ್ರೀಮತಿ ನಾಗರತ್ನಾ ನಾಯಕ, ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೊನ್ನಪ್ಪ ನಾಯಕ ಗ್ರಾ. ಪಂ. ಅಧ್ಯಕ್ಷೆ ಶ್ರೀಮತಿ ವಿಶಾಲಾಕ್ಷಿ ಪಟಗಾರ, ಸದಸ್ಯರುಗಳಾದ ಶ್ರೀ ಸಂತೋಷ ಹರಿಕಾಂತ, ಶ್ರೀ ವಿಠೋಬ ಗಾವಡಿ, ಶ್ರೀ ನವೀನ ಪಟಗಾರ ಮುಂತಾದವರು ಉಪಸ್ಥಿತರಿದ್ದರು.