ಧರ್ಮಸ್ಥಳದ ಕುಮಾರಿ ಸೌಜನ್ಯ ಸಾಮೂಹಿಕ ಅತ್ಯಾಚಾರ ಕೊಲೆ ಪ್ರಕರಣ ಮರು ತನಿಖೆಗೆ ಆಗ್ರಹಿಸಿ ಕೆ.ಆರ್.ಎಸ್ ಪಕ್ಷದಿಂದ ರಾಜ್ಯಾಧ್ಯಕ್ಷ ರವಿಕೃಷ್ಣ ನೇತೃತ್ವದಲ್ಲಿ ಬೆಳ್ತಂಗಡಿಯಿಂದ – ಬೆಂಗಳೂರು ವರಿಗೆ 330 ಕಿ.ಮಿ ಬ್ರಹತ ಪಾದಯಾತ್ರೆ
ಮಂಗಳೂರು-ಕೆ ಆರ್ ಎಸ್ ಪಕ್ಷದಿಂದ ಧರ್ಮಸ್ಥಳದ ಸೌಜನ್ಯ ಸಾಮೂಹಿಕ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂದಿಸಿದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಗಳು ಹಾಗೂ ದಕ್ಷಿಣ ಕನ್ನಡದ ಉಸ್ತುವಾರಿಗಳಾದ ರಘುಪತಿ ಭಟ್ ಮತ್ತು ರಾಜ್ಯ ಉಪಾಧ್ಯಕ್ಷರಾದ್ ಲಿಂಗೇಗೌಡರು ಭಾಗವಹಿಸಿ ಮಾತನಾಡಿದದರು.ರಘುಪತಿ ಭಟ್ಟರು ಸೌಜನ್ಯ ಕೇಸಿಗೆ ಇಂದಿಗೂ ನ್ಯಾಯ ಸಿಕ್ಕಿಲ್ಲಾ ಹಾಗು ನಿರಾಪರಾದಿಯಾದ ಸಂತೋಷ ರಾವ್ ರವರಿಗೆ ಮಾನಸಿಕ ನೋವಾಗಿದೆ ಇವು ಹತ್ಯೆಗಳಲ್ಲ ವು, ವ್ಯವಸ್ತಿತವಾದ ಸಂಚುಗಳು ಇವುಗಳ ವಿರುದ್ದ ನಾವು ರಾಜ್ಯದ್ಯಾಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು .
ನಂತರ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಲಿಂಗೇಗೌಡರು ಸೌಜನ್ಯ ದುರ್ಬಲರು ಹಾಗು ಶೋಷಿತರ. ವಿರುದ್ದ ದೊಡ್ಡ ದೊಡ್ಡ ಬಲವಂತರು ಹಣವಂತರು ಅಧಿಕಾರಸ್ತರು ಪ್ರಭಾವಿಗಳು ಎನನ್ನಾದರೂ ಮಾಡಿ ಜಯಿಸಬಹುದು ಎನ್ನುವ ರೀತಿಯಲ್ಲಿ ವರ್ತಿಸುತ್ತಿರುವುದು ದುರಾದೃಷ್ಟಕರವಾದ ಸಂಗತಿಯಾಗಿದ್ದೆ .ಇಂದು ಕರ್ನಾಟಕ ರಾಜ್ಯದಲ್ಲಿ ಸೌಜನ್ಯ ಕೋಲೆ ಯ ಪರ ಬಂದಿರುವ ತೀರ್ಪನ್ನು ನೀಡಿ ಜನರು ಹಾಗಿದ್ದರೆ ಸೌಜನ್ಯಳನ್ನು ಕೊಂದವರು ಯಾರು, ಇವರನ್ನು ರಕ್ಷಿಸುತ್ತಿರುವವರು ಯಾರು ,ಇಂದು ಕರ್ನಾಟಕ ರಾಜ್ಯದಲ್ಲಿ ಬಹುಮತದಿಂದ ಸರ್ಕಾರ ನಡೆಸುತ್ತಿರುವವರು ಈ ಒಂದು ಪ್ರಕರಣವನ್ನು ಮರುತೆನಿಖೆಗೆ ಯಾಕೆ ಒಳಪಡಿಸುತ್ತಿಲ್ಲಾ ಹಾಗು ರಾಜ್ಯ ಬಿ ಜೆ ಪಿ ಪಕ್ಷದವರು ಇಂದಿಗೂ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡದೆ ಇರುವುದು ತುಂಬಾ ಬೇಜಾರದ ಸಂಗತಿ ಎಂದು ತಿಳಿಸಿದರು . ಸೌಜನ್ಯ ಪ್ರಕರಣಕ್ಕೆ ಸಂಬಂದಿಸಿದ , ಅಲ್ಲದೆ ಯಾವುದೇ ಒಂದು ಹೆಣ್ಣು ಮಗುವಿನ ಮೇಲೆ ಯಾವುದೇ ರೀತಿಯ ದೌಜನ್ಯ ನಡೆದರು ಅದಕ್ಕೆ ಸರ್ಕಾರದ ಕಡೆಯಿಂದ ಸೂಕ್ತವಾದ ರೀತಿಯಲ್ಲಿ ರಕ್ಷಣೆ ನೀಡಬೇಕು ಎಂದು ತಿಳಿಸಿದರು. ಈ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಆಗಸ್ಟ್ 26 ರಿಂದ ಬೆಳ್ತಂಗಡಿಯಿಂದ ಬೆಂಗಳೂರು ವಿಧಾನಸೌಧ ವರೆಗೆ 330 ಕಿ.ಮಿ ಪಾದಯಾತ್ರೆ ಮಾಡುತ್ತಿರುವುದಾಗಿ ತಿಳಿಸಿದರು. ತಮ್ಮಹೋರಾಟಕ್ಕೆ ತಮ್ಮ ಬೆಂಬಲವನ್ನು ಸೂಚಿಸಿ ಸೌಜನ್ಯ ತಾಯಿಯವರಿಗೆ ಆಮಂತ್ರಣ ಪತ್ರವನ್ನು ನೀಡಿದರು. ಕೆ.ಆರ್.ಎಸ್ ಪಕ್ಷದ ರಾಜ್ಯ ಅಧ್ಯಕ್ಷ , ಸಾಮಾಜಿಕ ಹೋರಾಟಗಾರ ರವಿ ಕೃಷ್ಣ ರೆಡ್ಡಿ ಅವರ ನೇತೃತ್ವದಲ್ಲಿ ಈ ಪಾದಯಾತ್ರೆ ನಡೆಯುವುದಾಗಿ ತಿಳಿಸಿದರು. ಸಾವಿರಾರು ಜನ ಈ ಪಾದಯಾತ್ರೆಯಲ್ಲಿ ಪಾಲ್ಗೊಳುವುದಾಗಿ ತಿಳಿಸಿದರು.