*ಚಿತ್ರಕಲಾ ಪರಿಷತ್ತಿನಲ್ಲಿ ವನ್ಯಜೀವಿಗಳ ಪ್ರಪಂಚ ಅನಾವರಣ*
*ಬೆಂಗಳೂರು, ನವೆಂಬರ್ 8,2022:* ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಸೂರ್ಯ ಪ್ರಕಾಶ್ ಕೆ.ಎಸ್ ಅವರ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕ ವನ್ಯಜೀವಿಗಳ ಛಾಯಾಚಿತ್ರ ಪ್ರದರ್ಶನವನ್ನು ಆಯೋಜಿಸಲಾಗಿದೆ. ನವೆಂಬರ್ 10 ರಿಂದ 13ರವರೆಗೆ ಮೂರು ದಿನಗಳ ಕಾಲ ನಡೆಯಲಿರುವ “ವೈಲ್ಡ್ ಮೂಮೆಂಟ್ಸ್” ಪ್ರದರ್ಶನ ನೋಡುಗರ ಕಣ್ಮನಗಳಿಗೆ ರಸದೌತಣ ಉಣಬಡಿಸಲಿದೆ.
ಈ ಛಾಯಾಗ್ರಹಣ ಪ್ರದರ್ಶನದಲ್ಲಿ ಎಂ .ಎನ್ ಜಯಕುಮಾರ್ (ಐಎಫ್ ಎಸ್ (ಆರ್), ಎಫ್ ಆರ್ ಪಿಎಸ್, ಎಂಎಫ್ ಐಎಪಿ | ನಿವೃತ್ತ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಕರ್ನಾಟಕ ಸರ್ಕಾರ) ಪ್ರಜಾವಾಣಿಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ , ಡಾ. ಅಜಿತ್ ಕೆ ಹುಲ್ಗೋಲ್ (ಎಂಬಿಬಿಎಸ್, ಎಂಎಸ್, ಎಂಎನ್ ಎ ಎಂಎಸ್), ಬಿ ಶ್ರೀನಿವಾಸ್ (ಎಫ್ ಆರ್ ಪಿಎಸ್, ಎಂಎಫ್ ಐಎಪಿ, ಎಚ್ ಒ ಎನ್. ಎಫ್ ಐಸಿಎಸ್, ಎಚ್ ಒಎನ್. ಎಫ್ ಎಪಿಎ, ಎಚ್ ಒಎನ್. ಎಫ್ ಐಪಿ) ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.
2013ರಲ್ಲಿ ಕೆನರಾ ಬ್ಯಾಂಕ್ ವೃತ್ತಿಯಿಂದ ನಿವೃತ್ತರಾದ ಸೂರ್ಯ ಪ್ರಕಾಶ್ ಕೆ.ಎಸ್ ಅವರು ವನ್ಯಜೀವಿ ಛಾಯಾಗ್ರಹಣದತ್ತ ತಮ್ಮನ್ನು ತೊಡಗಿಸಿಕೊಂಡರು.ನಿಸರ್ಗದ ಛಾಯಾಗ್ರಹಣದ ವಿಶ್ವದ ಅಗ್ರ ಪ್ರದರ್ಶಕರಲ್ಲಿ ಒಬ್ಬರಾದ ಸೂರ್ಯಪ್ರಕಾಶ್ ಅವರು ಸಾಕಷ್ಟು ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. 2016 ರಲ್ಲಿ FIAP ನೇಚರ್ ಬೈನಿಯಲ್ ವರ್ಲ್ಡ್ ಕಪ್ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತೀಯ ತಂಡದ ಸದಸ್ಯ, ಹುಲಿಗಳ ಸಂರಕ್ಷಣೆಗಾಗಿ ಎನ್ ಡಿಟಿವಿ ರಾಷ್ಟ್ರೀಯ ಪ್ರಶಸ್ತಿ, ಸುರ್ವಣ ಟಿವಿ 1 ಪ್ರಶಸ್ತಿ ಇನ್ನೀತರ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.