ಬಾಗಲಕೋಟೆ:‘ಪರಿಸರವನ್ನು ಬೆಳೆಸಿ ಪೋಷಣೆ ಮಾಡಿ ಉಳಿಸಿಕೊಳ್ಳುವ ಕಾರ್ಯ ಅಷ್ಟೊಂದು ಸುಲಭವಲ್ಲ. ಪರಿಸರ ಸಂರಕ್ಷಿಸಲು ಹೃದಯವಂತಿಕೆ ಬೇಕು’ ಎಂದು ಮತಕ್ಷೇತ್ರದ ಜನಪ್ರಿಯ ಶಾಸಕ ವಿಜಯಾನಂದ ಕಾಶಪ್ಪನವರ ತಿಳಿಸಿದರು.
2023-24ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಿದಂತೆ ಶಿಕ್ಷಣ ಇಲಾಖೆ ಮತ್ತು ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಸ್ಥಳಾವಕಾಶವುಳ್ಳ ಶಾಲೆಗಳ ಸುತ್ತಮುತ್ತ ಒಂದು ವರ್ಷದ ಕಾಲಾವಧಿಯಲ್ಲಿ 50 ಲಕ್ಷ ಸಸಿಗಳನ್ನು ನೆಡುವ ವಿನೂತನವಾದ ಕಾರ್ಯಕ್ರಮ ಇದಾಗಿದೆ. ಇದಕ್ಕೆ ‘ಸಸ್ಯ ಶ್ಯಾಮಲ’ ಎಂದು ಹೆಸರಿಡಲಾಗಿದೆ.
ತಳ್ಳಿಕೇರಿ ಕ್ರಾಸ್ ಬಳಿ ಇರುವ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ತಾಲೂಕಾ ಆಡಳಿತ,ತಾಲೂಕಾ ಪಂಚಾಯತ,ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ವಲಯ ಅರಣ್ಯ ಇಲಾಖೆಯವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಸಸ್ಯ ಶ್ಯಾಮಲಾ’ ಯೋಜನೆಗೆ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾರ್ಯಕ್ರಮದಡಿ ಇಲ್ಲಿನ ವಸತಿ ಶಾಲೆಯಲ್ಲಿ ವಿವಿಧ ಬಗೆಯ ಹಣ್ಣು ಬಿಡುವ ಸಸಿ ಮತ್ತು ಹೂವಿನ ಒಟ್ಟು 70 ಸಸಿಗಳನ್ನು ನೆಡಲಾಗಿದೆ.
ತಾಲ್ಲೂಕು ಹಂತದಲ್ಲಿ ಶಿಕ್ಷಣ ಇಲಾಖಾ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಓ)ಗಳು ನೋಡಲ್ ಅಧಿಕಾರಿಗಳಾಗಿ ಮತ್ತು ಅರಣ್ಯ ಇಲಾಖೆಯ ವತಿಯಿಂದ ಸಾಮಾಜಿಕ ಅರಣ್ಯ ವಿಭಾಗಗಳ ತಾಲ್ಲೂಕು ಮಟ್ಟದ ವಲಯ ಅರಣ್ಯಾಧಿಕಾರಿಗಳು ಕಾರ್ಯಕ್ರಮದ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುವುದು.
ಈ ಸಂದರ್ಭದಲ್ಲಿ ಕೆಲೂರ ಗ್ರಾಮ ಪಂಚಾಯತಿ ಅಧ್ಯಕ್ಷ ಮಹಾಲಿಂಗೇಶ ನಾಡಗೌಡರ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಜಾಸ್ಮೀನ ಕಿಲ್ಲೆದಾರ,ವಲಯ ಅರಣ್ಯಾಧಿಕಾರಿ ಎಸ್.ಡಿ.ಬಬಲಾದಿ. & ಪಿ.ಎಮ್. ಪುರಾಣಿಕ ಮಠ,ವಸತಿ ಶಾಲೆಯ ಪ್ರಾಚಾರ್ಯ ಎಂ.ಹೆಚ್.ಹಡಪದ, ಕೆಲೂರ ಹಾಗೂ ತಳ್ಳಿಕೇರಿ ಗ್ರಾಮದ ಗಣ್ಯರು,ಮತ್ತು ಸಿಬ್ಬಂದಿವರ್ಗ ಉಪಸ್ಥಿತರಿದ್ದರು.