ಬೆಳಗಾವಿಯ ಸಾಹಿತಿ , ಲೇಖಕಿ
ಡಾ. ಅನ್ನಪೂರ್ಣ ಹಿರೆಮಠ ಅವರಿಗೆ ರಾಜ್ಯ ಮಟ್ಟದ ಸ್ಪೂರ್ತಿರತ್ನ ಪ್ರಶಸ್ತಿ
ಬೆಳಗಾವಿ-ಸ್ಪೂರ್ತಿ ಕಲಾ ಟ್ರಸ್ಟ್ ಬೆಂಗಳೂರು ಇವರು ತಮ್ಮ ಪ್ರಸಿದ್ಧ ಸಂಸ್ಥೆಯಿಂದ ಸಾಧಕರಿಗೆ ಕಲಾ ರತ್ನ ,ಶಿಕ್ಷಕರ ರತ್ನ ಸ್ಪೂರ್ತಿ ರತ್ನ ಹೀಗೆ ಹಲವಾರು ಕ್ಷೇತ್ರದಲ್ಲಿ ಸಾಧನೆಗೈದ ರ ಸಾಧಕರನ್ನು ರಾಜ್ಯದಾದ್ಯಂತ ಹುಡುಕಿ ಪ್ರೀತಿಯಿಂದ ಗೌರವ ನೀಡಿ ಸನ್ಮಾನಿಸಿದರು .ಅದರಲ್ಲಿ ಬೆಳಗಾವಿಯ ಸಾಹಿತಿ , ಶಿಕ್ಷಕಿ, ಸಾಮಾಜಿಕ ಲೇಖಕಿ, ಡಾ ಅನ್ನಪೂರ್ಣ ಹಿರೇಮಠ ಅವರಿಗೆ ಅವರ ಪ್ರತಿಭೆಯನ್ನು ಅವರೇ ಹುಡುಕಿ ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ ಮತ್ತು ಕಾಯಕವನ್ನು ಗಣನೆಗೆ ತೆಗೆದುಕೊಂಡು ಸ್ಪೂರ್ತಿರತ್ನ ಪ್ರಶಸ್ತಿ ನೀಡಿ ಗೌರವಿಸಿಸಿದ್ದಾರೆ. ಇಂತಹ ಪ್ರಶಸ್ತಿಗಳು ಹೆಚ್ಚಿನ ಸಮಾಜದಲ್ಲಿ ಸಾಮಾಜಿಕ ,ಸಾಹಿತಿಕ, ಕೆಲಸಗಳನ್ನು ಮಾಡಲು ತನನ್ನು ಇನಷ್ಟು ಪ್ರೇರೇಪಿಸುತ್ತವೆ ಎಂದು ಸಾಹಿತಿ ಡಾ ಅನ್ನಪೂರ್ಣ ಹಿರೇಮಠ ತಿಳುಸಿದ್ದಾರೆ.
ಡಾ ಅನ್ನಪೂರ್ಣ ಹಿರೆಮಠ*
* ಸಾಹಿತಿಗಳು ,ಜಿಲ್ಲಾ ಬೆಳಗಾವಿ*
ಇವರ ಕಿರು ಪರಿಚಯ –
2003 ಶ್ರೀ ಶಿವಲಿಂಗೇಶ್ವರ ಪ್ರಾಥಮಿಕ ಶಾಲೆ .ಅನುದಾನರಹಿತ ಶಾಲಾ ಮುಖ್ಯ ಶಿಕ್ಷಕಿಯಾಗಿ ಶಾಲಾ ಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು ೧೬ ವರ್ಷಗಳ ಕಾಲ ,ಮಕ್ಕಳ ಉತ್ತಮ ವಿದ್ಯಾಭ್ಯಾಸದ ಗುರಿ ಇಟ್ಟು ಆರು ಮಕ್ಕಳಿಂದ ಶಾಲೆ ಪ್ರಾರಂಭಿಸಿ ಈಗ ಆ ಶಾಲೆಯಲ್ಲಿ 350 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ನಾನು ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ಅಜೀವ ಸದಸ್ಯೆಯಾಗಿದ್ದು. ಲಿಂಗಾಯತ ಸಂಘಟನೆ ಸದಸ್ಯಯೂ ಆಗಿದ್ದೇನೆ
೧) 2019ರ ರಾಜ್ಯ ಮಟ್ಟದ ಅಕ್ಕಮಹಾದೇವಿಯ ವಚನ ವಿಶ್ಲೇಷಣಾ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ ಮೂರನೇ ಸ್ಥಾನ ಗಳಿಸಿ ಅಕ್ಕಮಹಾದೇವಿಯ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ.
೨) ಬೆಂಗಳೂರು ಸಾಹಿತ್ಯ ವೇದಿಕೆ (ರಿ) ಇದರ ವತಿಯಿಂದ ಚುಟುಕು ಸಂಕಲನದ ಚುಟುಕಿಗಾಗಿ ಶತಕ ರತ್ನ ಪ್ರಶಸ್ತಿ ನೀಡಿ ಗೌರವ.
೩) ರಾಷ್ಟ್ರಮಟ್ಟದ ಕವನ ರಚನೆ ಸ್ಪರ್ಧೆ ಕೈವಾರ ತಾತಯ್ಯನವರ “ದೈವೀಪುರುಷ” ಎಂಬ ಕವನಕ್ಕೆ “ಕಾಲಜ್ಞಾನಿಯೋಗಿ ನಾರಾಯಣ ಯತಿಂದ್ರ ಪ್ರಶಸ್ತಿ”.
೪) ಹಂಪಿ ಬಳಗದವರು ಕಲ್ಲು ತೇರಿನ ಕುಸುರಿ ಎಂಬ ಪುಸ್ತಕಕ್ಕಾಗಿ ನನ್ನ ಎರಡು ಕವನಗಳ ಆಯ್ಕೆ.
೫) ಖಿದ್ಮಾ ಫೌಂಡೇಶನ್ ಕರ್ನಾಟಕದ ವತಿಯಿಂದ ತಿಂಗಳು ಪ್ರತಿಭೆ ಪ್ರಮಾಣ ಪತ್ರದೊಂದಿಗೆ ಗೌರವ ಪುರಸ್ಕಾರ ..ಮತ್ತು ಮಹಿಳಾ ದಿನಾಚರಣೆಯ ಅಂಗವಾಗಿ “ಹೆಮ್ಮೆಯ ಮಹಿಳೆ” ಎಂಬ ಬಿರುದಿನೊಂದಿಗೆ ಅಭಿನಂದನಾ ಪತ್ರ ಗೌರವ, ಮತ್ತು ಒಂದು ವರ್ಷದಿಂದ ನಿರಂತರ ಪ್ರತಿದಿನ ಭಾಗವಹಿಸಿ ಉತ್ತಮ ,ಅತ್ಯುತ್ತಮ, ಪ್ರಥಮ, ದ್ವಿತೀಯ, ಪ್ರಮಾಣಪತ್ರಗಳನ್ನು ಪಡೆದದ್ದು.
೬) ಕರ್ನಾಟಕ ರಾಜ್ಯ ಬರಹಗಾರರ ಬಳಗ (ರಿ) ಜಿಲ್ಲಾ ಘಟಕ 1೦೦ ನೇ ಅಂತರ್ಜಾಲ ಕವಿಗೋಷ್ಠಿ ನೆನಪಿಗಾಗಿ ಹಮ್ಮಿಕೊಂಡ ಕಾವ್ಯ ಸಪ್ತಾಹದಲ್ಲಿ ಭಾಗವಹಿಸಿದ್ದಕ್ಕಾಗಿ ಅಭಿನಂದನಾ ಪತ್ರ ನೀಡಿ ಗೌರವ.
೭)ಸ್ವಸ್ಥ ಸಮೃದ್ಧ ಭಾರತ ಕನ್ನಡ ಮಂಟಪ (ರಿ)ವತಿಯಿಂದ ಸಪ್ಟೆಂಬರ್ 2020 ರಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ.
೮) ಸೃಷ್ಟಿ ಮಿಡಿಯಾ ಟ್ರಸ್ಟ್( ರಿ) ದಾವಣಗೆರೆ ಬೆಂಗಳೂರು ಕವಿಗೋಷ್ಠಿ ,ಕವನ ವಾಚನದಲ್ಲಿ ಭಾಗವಹಿಸಿ” ಅಮ್ಮನ ನೆನಪು” ಕವನ ವಚನಕ್ಕಾಗಿ “ಸೃಷ್ಟಿ ಸಿರಿ” ಎಂಬ ಪ್ರಶಸ್ತಿ ನೀಡಿ ಗೌರವ .ಸೃಷ್ಟಿ ಯುಟ್ಯೂಬ್ ಚಾನೆಲ್ಲ್ಳನಲ್ಲಿ ಹತ್ತಾರು ಕವನವಾಚನ ಪ್ರಸಾರ.
೯) ಜಾನ್ಸಿ ರಾಣಿ ಲಕ್ಷ್ಮೀಬಾಯಿ ಸವಿನೆನಪು, ವಚನಗಾರ್ತಿ ಅಕ್ಕಮಹಾದೇವಿ, ಮಹಿಳೆ ಮತ್ತು ಮನೆ, ಮಹಿಳಾ ಸಬಲೀಕರಣ, ಮಕ್ಕಳ ವಿದ್ಯಾಭ್ಯಾಸದ ಮೇಲೆ ಮೊಬೈಲ್ ಪ್ರಭಾವ, ಹೀಗೆ ಹತ್ತು ಹಲವು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟ ಕವನ ,ಚುಟುಕು ,ವಚನಗಳ ಭಾವಾರ್ಥ, ವಿಜಯವಾಣಿ ,ವಿಜಯ ಕರ್ನಾಟಕ ಪತ್ರಿಕೆಗಳಲ್ಲಿ ಪ್ರಕಟ.
೧೦) ಜ್ಞಾನ ದೀವಿಗೆ(ರಿ) ಅಂತರ್ಜಾಲ ಸಾಹಿತ್ಯಬಳಗ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಕವನ ರಚನೆಯಲ್ಲಿ ಉತ್ತಮ ,ಅತ್ಯುತ್ತಮ, ಪ್ರಥಮ, ದ್ವಿತೀಯ ,ಮೆಚ್ಚುಗೆ ಸ್ಥಾನಗಳ ಗಳಿಕೆ.
೧೧) ಕನ್ನಡ ಕವಿಗುಚ್ಚ,ಕವನಗಳ ತೊಟ್ಟಿಲು, ಧಾರವಾಡ ಯುವ ಬರಹಗಾರರುಬಳಗ, ಹಂಪಿ ಸಾಹಿತ್ಯ ಬಳಗ(ರಿ) ,ಸಿದ್ದೇಶ್ವರ ಸಾಹಿತ್ಯ ವೇದಿಕೆ, ಕನ್ನಡ ಸಾಹಿತ್ಯ ಕೃಷಿಕರು, ಪೂರ್ಣಿಮಾ ಸಾಹಿತ್ಯ ವೇದಿಕೆ, ನವಿಲುಗರಿ ಸಾಹಿತ್ಯ ಬಳಗ, ಕವಿ-ಸಾಹಿತಿಗಳ ಜೀವಾಳ, ಕವಿ ಲೋಕ ಬಳಗ, ನವಿಲುಗರಿ ಸಾಹಿತ್ಯ ವೇದಿಕೆ, ಶ್ರೀ ಶಾರದಾ ಶಿಕ್ಷಣ ಸಂಸ್ಥೆ, ಚಲನಚಿತ್ರ ಸಾಹಿತ್ಯೋತ್ಸವ, ವಿಶ್ವಕಲಾ ಸಾಹಿತ್ಯ ವೇದಿಕೆ, ಸ್ಪರ್ಧಾ ಭಾರತ ಕೇಂದ್ರ ಕರ್ನಾಟಕ ಸಾಹಿತ್ಯ ವೇದಿಕೆ ,ಕವಿಗೋಷ್ಠಿ ರಾಯಚೂರು ಬರಹಗಾರರ ಬಳಗ ,ಸಿರಿಗನ್ನಡ ಐಸಿರಿ, ಶ್ರೀ ಬಸವೇಶ್ವರರ ಪ್ರಚಾರ ಸಮಿತಿ ವತಿಯಿಂದ ವಚನ ವಾಚನ ಅತ್ಯುತ್ತಮ ಅಭಿನಂದನಾ ಪತ್ರ ,ತ್ರಿವರ್ಣಧ್ವಜ ಕವನವಾಚನಕ್ಕಾಗಿ ಅಭಿನಂದನಾ ಪತ್ರ, ಮತ್ತು ಗುರುಕುಲ ಪ್ರತಿಷ್ಠಾನ ರಾಜ್ಯ ಘಟಕ ತುಮಕೂರು ರಿಜಿಸ್ಟರ್ ಇವರು ರಾಜ್ಯದ ಎಲ್ಲ ಜಿಲ್ಲಾ ಘಟಕಗಳ ಅಂತರ್ಜಾಲ ಆಧಾರಿತ ಕವನ, ಚುಟುಕು, ಲೇಖನ, ಷಟ್ಪದಿ, ಹನಿಗವನ ಮುಂತಾದ ಎಲ್ಲಾ ಪ್ರಕಾರದ ಸಾಹಿತ್ಯಕ ಸ್ಪರ್ಧೆಗಳನ್ನು ನಿರಂತರ ಒಂದು ವರ್ಷದಿಂದ ಆಯೋಚಿಸುತ್ತಿದ್ದಾರೆ. ಎಲ್ಲಾ ಜಿಲ್ಲಾ ಘಟಕಗಳಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ, ಉತ್ತಮ, ಅತ್ಯುತ್ತಮ, ಸಮಾಧಾನಕರ ಹೀಗೆ ನೂರಾರು ಅಭಿನಂದನಾ ಪತ್ರಗಳನ್ನು ನೀಡಿ ಗೌರವಿಸಿದ್ದಾರೆ .
ಚಂದನವಾಹಿನಿ, ಸೂರ್ಯ ಟಿವಿ, ಮತ್ತು ಹಲವು ವಾಹಿನಿಗಳಲ್ಲಿ ಕವನವಾಚನ ಪ್ರಸಾರ. ಜಿಲ್ಲಾ ಲೇಖಕಿಯರ ಸಂಘ ಬೆಳಗಾವಿ ವತಿಯಿಂದ ಕವನ ಚುಟುಕು ಮುಂತಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಹುಮಾನ ಪಡೆದದ್ದು ಫೇಸ್ಬುಕ್ ಕವನ ರಚನೆ, ಕವನವಾಚನಗಳಲ್ಲಿ ಭಾಗವಹಿಸಿ ಅಭಿನಂದನಾ ಪತ್ರ.
ಲಿಂಗಾಯತ ಸಂಘಟನೆಯ ಬೆಳಗಾವಿ ಸದಸ್ಯೆಯಾಗಿ ವಚನಗಳ ವಿಶ್ಲೇಷಣೆ ಮಾಡಿದ್ದು. ಮತ್ತು ನಿರಂತರ ಮೂರು ವರ್ಷಗಳ ಕಾಲ ಬೆಳಗಾವಿ ನಗರದಲ್ಲಿ ಮನೆ ಮನೆಯಲ್ಲಿ ವಚನೋತ್ಸವ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ವಚನಗಳ ವಿಶ್ಲೇಷಣೆ, ಪ್ರಾರ್ಥನೆ ಮಾಡಿದ್ದು.
ಆದಿಶಕ್ತಿ ಗ್ರಾಮೀಣಾಭಿವೃದ್ಧಿ ಮತ್ತು ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆಗಳಿಂದ ಸಾಹಿತ್ಯ ಸಂಗೀತ ಕಾರ್ಯಕ್ರಮಗಳ ಆಯೋಜನೆ ಮತ್ತು ಉತ್ತಮ ಶಿಕ್ಷಣ ನೀಡುವ ಶಾಲೆಗಳು.
ಶಾಲೆಯ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ,ಮಕ್ಕಳನ್ನು ಎಲ್ಲಾ ಚಟುವಟಿಕೆಯಲ್ಲಿ ಭಾಗವಹಿಸಿ ಪ್ರೋತ್ಸಾಹಿಸಿದ್ದಕ್ಕಾಗಿ ರಾಷ್ಟ್ರಮಟ್ಟದ ,ರಾಜ್ಯಮಟ್ಟದ ಕ್ರಿಯಾಶೀಲ ಶಿಕ್ಷಕಿ ಪ್ರಶಸ್ತಿಗಳು ಲಭಿಸಿವೆ.
ಬಿಡುಗಡೆಯಾದ ಕೃತಿಗಳು, ಭಾವಸರಿ ಕವನ ಸಂಕಲನ ಮಂಜಿನ ಹನಿ ಹನಿಗವನ ಸಂಕಲನ ಚಿಂತನ ಚೆಲುವೆ ವಚನ ಗ್ರಂಥ ,ಬೂದಿಯಾಗದ ಅಕ್ಷರಗಳು ಕವನ ಸಂಕಲನ, ಪ್ರಕಟಣೆಗೆ ಸಿದ್ಧವಿರುವ ಇನ್ನೊಂದು ವಚನ ಗ್ರಂಥ, ಹನಿಗವನ ,ಗಜಲ್ ಸಂಕಲನ ,ಲೇಖನಗಳ ಎರಡು ಸಂಕಲನಗಳು, ಕಥಾ ಸಂಕಲನ ,ಭಾವಗೀತೆ ಸಂಕಲನ, ಶಿಶು ಗೀತೆಗಳು, ತತ್ವಪದಗಳು, ಇಷ್ಟು ಕೃತಿಗಳು ಹಸ್ತಪ್ರತಿ ತಯಾರಾಗಿವೆ.
ವಚನ ಗ್ರಂಥಕ್ಕೆ ಉಮಾಶಂಕರ್ ಪ್ರತಿಷ್ಠಾನ ಪ್ರಶಸ್ತಿ ದೊರಕಿದೆ,
ನನ್ನ ಹನಿಗವನ ಸಂಕಲನ ವಿಮರ್ಶೆಯಾಗಿದೆ.