ಕಾವೇರಿ ನಮ್ಮದು ಎಂದ ಕರ್ನಾಟಕ ರಣಧೀರರ ವೇದಿಕೆ
ಬೆಂಗಳೂರು-ಕರ್ನಾಟಕ ರಣಧೀರರ ವೇದಿಕೆ ಶಂಕರ್ ಗೌಡ್ರು ಮತ್ತು ಕನ್ನಡ ರಣಧೀರರ ಪಡೆ ಚೇತನ್, ಕರ್ನಾಟಕ ಅಸಂಘಟಿತ ಕಾರ್ಮಿಕ ಒಕ್ಕೂಟದ ಪ್ರಸನ್ನ ಗೌಡರ ನೇತೃತ್ವದಲ್ಲಿ ನಮ್ಮ ನಾಡಿನ ಜೀವನದಿಯ ಕಾವೇರಿ ನದಿ ನೀರನ್ನು ನಮ್ಮ ನಾಡಿನ ರೈತರಿಗೆ ಇಲ್ಲದೆ ಹಾಗೂ ನಮ್ಮ ಬೆಂಗಳೂರು ಜನಕ್ಕೆ ಕುಡಿಯಲು ನೀರು ಇಲ್ಲದಂತೆ ಮಾಡಿರುವ ಒಕ್ಕೂಟ ಭಾರತ ಸರ್ಕಾರ ಹಾಗೂ ಕಾವೇರಿ ನೀರು ನಿರ್ವಹಣಾ ಮಂಡಳಿ ವಿರುದ್ಧ ಬೆಂಗಳೂರು ಮೈಸೂರು ರಸ್ತೆ ಜ್ಞಾನಭಾರತಿ ಗೇಟ್ ಬಳಿ ಹೆದ್ದಾರಿ ರಸ್ತೆ ತಡೆದು ಬೃಹತ್ ಮಟ್ಟದ ಹೋರಾಟವನ್ನು ಮಾಡಲಾಯಿತು, ಇದೇ ಸಂದರ್ಭದಲ್ಲಿ ಒಕ್ಕೂಟ ಭಾರತ ಸರ್ಕಾರ ಕೂಡಲೇ ಮಧ್ಯ ಪ್ರವೇಶ ಮಾಡಿ ಕಾವೇರಿ ನೀರು ನಿರ್ವಹಣಾ ಮಂಡಳಿಗೆ ಸೂಕ್ತ ಎಚ್ಚರಿಕೆ ನೀಡಿ ನಮ್ಮ ನಾಡಿನ ಮೇಲೆ ಮಾಡುತ್ತಿರುವ ಮಲತಾಯಿ ದೋರಣೆಯನ್ನು ಈ ಕೂಡಲೇ ನಿಲ್ಲಿಸಬೇಕು, ನಮ್ಮ ಕನ್ನಡನಾಡಿನ ಹಾಗೂ ತಮಿಳುನಾಡಿನ ವಾಸ್ತವ ಸ್ಥಿತಿಯ ಬಗ್ಗೆ ಅಧಿಕಾರಿಗಳಿಂದ ಪರಿಶೀಲನೆ ನಡೆಸಿ ವರದಿ ತರಸಿಕೊಂಡು ಸರಿಯಾದ ತೀರ್ಮಾನವನ್ನು ಮಾಡದೆ ಇದ್ದಲ್ಲಿ ರಾಜ್ಯದಲ್ಲಿನ ಎಲ್ಲಾ ಸಂಸದರ ಮನೆಗೆ ಮುಟ್ಟಿಗೆ ಹಾಕಿ ಹಾಗೂ ಸಂಸದರು ಸಿಕ್ಕಲ್ಲೆಲ್ಲಾ ಕಪ್ಪು ಬಾವುಟ ಪ್ರದರ್ಶನ ಮಾಡುತ್ತೇವೆ, ನಾಡು ನುಡಿಯ ಬಗ್ಗೆ ಕಾಳಜಿಯಿಲ್ಲದ ನಾಚಿಕೆ ಇಲ್ಲದ ಮಾನಗೆಟ್ಟ ನಾಮರ್ಧರ ರೀತಿಯಲ್ಲಿ ವರ್ತನೆ ಮಾಡುತ್ತಿರುವ ಸಂಸದರು ಈ ಕೂಡಲೇ ರಾಜೀನಾಮೆ ಕೊಡಬೇಕೆಂದು ನಮ್ಮ ಆಗ್ರಹವಾಗಿದೆ ಎಂದು ಮಾಧ್ಯಮದೊಂದಿಗೆ
ಮಾತನಾಡಿದ ಕರ್ನಾಟಕ ರಣಧೀರರ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶಂಕರ್ ಗೌಡ್ರು ಹೇಳಿದರು.